AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೆಂಡ್ಸ್ ಎಐ ಗ್ಲೋಬಲ್ 30 ಟೆಕ್ ಕಂಪನಿಗಳ ಪಟ್ಟಿ: ರಿಲಾಯನ್ಸ್ ಏಕಮಾತ್ರ ಭಾರತೀಯ ಸಂಸ್ಥೆ

'Trends - Artificial Intelligence' tech companies list: ‘ಟ್ರೆಂಡ್ಸ್- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ನ 340 ಪುಟಗಳ ವರದಿಯಲ್ಲಿ ವಿಶ್ವದಲ್ಲೇ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಇರುವ 30 ಟೆಕ್ ಕಂಪನಿಗಳ ಪಟ್ಟಿ ನೀಡಲಾಗಿದೆ. ಇದರಲ್ಲಿ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಸಂಸ್ಥೆ 23ನೇ ಸ್ಥಾನದಲ್ಲಿದೆ. ಇದು 216 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿದೆ. ಈ 30 ಕಂಪನಿಗಳ ಪಟ್ಟಿಯಲ್ಲಿ ಅಮೆರಿಕದ್ದವೆ 21 ಇವೆ.

ಟ್ರೆಂಡ್ಸ್ ಎಐ ಗ್ಲೋಬಲ್ 30 ಟೆಕ್ ಕಂಪನಿಗಳ ಪಟ್ಟಿ: ರಿಲಾಯನ್ಸ್ ಏಕಮಾತ್ರ ಭಾರತೀಯ ಸಂಸ್ಥೆ
Mukesh Ambani 5
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2025 | 11:52 AM

ನವದೆಹಲಿ, ಜೂನ್ 10: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಮಾರುಕಟ್ಟೆ ಮೌಲ್ಯದ ಸಂಸ್ಥೆ. ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸಿರುವ ಕಂಪನಿ. ಇದೀಗ ಗ್ಲೋಬಲ್ ಟಾಪ್-30 ಟೆಕ್ ಪಟ್ಟಿಯೊಂದರಲ್ಲಿ ರಿಲಾಯನ್ಸ್ ಸ್ಥಾನ ಪಡೆದಿದೆ. 340 ಪುಟಗಳ ‘ಟ್ರೆಂಡ್ಸ್ – ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (Trends – Artificial Intelligence) ವರದಿಯಲ್ಲಿ ಈ ಟಾಪ್-30 ಪಟ್ಟಿ ಇದ್ದು ಇದರಲ್ಲಿ ಮುಕೇಶ್ ಅಂಬಾನಿಯವರ ಈ ಕಂಪನಿ 23ನೇ ಸ್ಥಾನ ಪಡೆದಿದೆ. ಕಳೆದ ಹಲವು ವರ್ಷಗಳಿಂದ ಈ ಪಟ್ಟಿ ಪ್ರಕಟವಾಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತೀಯ ಕಂಪನಿಯೊಂದು ಇದರಲ್ಲಿ ಸ್ಥಾನ ಪಡೆದಿದೆ.

ಈ ಪಟ್ಟಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಟೆಕ್ನಾಲಜಿ ಕಂಪನಿಗಳನ್ನು ಪರಿಗಣಿಸಲಾಗಿದೆ. ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಇರುವ ಈ ಪಟ್ಟಿಯಲ್ಲಿವೆ. ರಿಲಾಯನ್ಸ್ ಇಂಡಸ್ಟ್ರೀಸ್ 216 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪ್​ನೊಂದಿಗೆ 23ನೇ ಸ್ಥಾನದಲ್ಲಿದೆ. ಮೈಕ್ರೋಸಾಫ್ಟ್ ಸಂಸ್ಥೆ 3.36 ಟ್ರಿಲಿಯನ್ ಡಾಲರ್​​ನೊಂದಿಗೆ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ವಿಜಯ್ ಮಲ್ಯ ಬೇರೆ ಬೇರೆ ದೇಶಗಳಲ್ಲಿ ಹೊಂದಿರುವ ಆಸ್ತಿಗಳೇನು? ಅವುಗಳ ಮೌಲ್ಯವೆಷ್ಟು?

ಕುತೂಹಲ ಎಂದರೆ, ಮೊದಲ ಎಂಟೂ ಕಂಪನಿಗಳು ಅಮೆರಿಕದ್ದಾಗಿವೆ. ಟಾಪ್-30ಯಲ್ಲಿ ಚೀನಾದ 3, ಜರ್ಮನಿಯ 2, ನೆದರ್​​ಲ್ಯಾಂಡ್ಸ್, ಕೊರಿಯಾ, ಭಾರತ ಮತ್ತು ತೈವಾನ್​​ನ​ ತಲಾ ಒಂದೊಂದು ಕಂಪನಿಗಳು ಇವೆ. ಉಳಿದ 21 ಕಂಪನಿಗಳು ಅಮೆರಿಕದ್ದೇ ಆಗಿರುವುದು ವಿಶೇಷ.

2025ರಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳದ ಟಾಪ್-30 ಟೆಕ್ ಕಂಪನಿಗಳು

  1. ಮೈಕ್ರೋಸಾಫ್ಟ್, ಅಮೆರಿಕ: 3.368 ಟ್ರಿಲಿಯನ್ ಡಾಲರ್
  2. ನಿವಿಡಿಯಾ, ಅಮೆರಿಕ: 3.288 ಟ್ರಿಲಿಯನ್ ಡಾಲರ್
  3. ಆ್ಯಪಲ್, ಅಮೆರಿಕ: 3.158 ಟ್ರಿಲಿಯನ್ ಡಾಲರ್
  4. ಅಮೇಜಾನ್, ಅಮೆರಿಕ: 2.178 ಟ್ರಿಲಿಯನ್ ಡಾಲರ್
  5. ಆಲ್ಫಬೆಟ್, ಅಮೆರಿಕ: 1.997 ಟ್ರಿಲಿಯನ್ ಡಾಲರ್
  6. ಮೆಟಾ, ಅಮೆರಿಕ: 1.619 ಟ್ರಿಲಿಯನ್ ಡಾಲರ್
  7. ಟೆಸ್ಲಾ, ಅಮೆರಿಕ: 1.104 ಟ್ರಿಲಿಯನ್ ಡಾಲರ್
  8. ಬ್ರಾಡ್​​ಕಾಮ್, ಅಮೆರಿಕ: 1.094 ಟ್ರಿಲಿಯನ್ ಡಾಲರ್
  9. ಟಿಎಸ್​​ಎಂಸಿ, ತೈವಾನ್: 856 ಬಿಲಿಯನ್ ಡಾಲರ್
  10. ಟೆನ್ಸೆಂಟ್, ಚೀನಾ: 591 ಬಿಲಿಯನ್ ಡಾಲರ್
  11. ನೆಟ್​​ಫ್ಲಿಕ್ಸ್, ಅಮೆರಿಕ: 501 ಬಿಲಿಯನ್ ಡಾಲರ್
  12. ಒರೇಕಲ್, ಅಮೆರಿಕ: 447 ಬಿಲಿಯನ್ ಡಾಲರ್
  13. ಎಸ್​​ಎಪಿ, ಜರ್ಮನಿ: 343 ಬಿಲಿಯನ್ ಡಾಲರ್
  14. ಪ್ಯಾಲಾಂಟಿರ್, ಅಮೆರಿಕ: 302 ಬಿಲಿಯನ್ ಡಾಲರ್
  15. ಎಎಸ್​​​ಎಂಎಲ್, ನೆದರ್​​ಲ್ಯಾಂಡ್ಸ್: 300 ಬಿಲಿಯನ್ ಡಾಲರ್
  16. ಅಲಿಬಾಬಾ, ಚೀನಾ: 281 ಬಿಲಿಯನ್ ಡಾಲರ್
  17. ಸೇಲ್ಸ್​​​ಫೋರ್ಸ್, ಅಮೆರಿಕ: 279 ಬಿಲಿಯನ್ ಡಾಲರ್
  18. ಟಿ ಮೊಬೈಲ್, ಅಮೆರಿಕ: 279 ಬಿಲಿಯನ್ ಡಾಲರ್
  19. ಸ್ಯಾಮ್ಸುಂಗ್, ಸೌತ್ ಕೊರಿಯಾ: 268 ಬಿಲಿಯನ್ ಡಾಲರ್
  20. ಸಿಸ್ಕೋ, ಅಮೆರಿಕ: 256 ಬಿಲಿಯನ್ ಡಾಲರ್
  21. ಐಬಿಎಂ, ಅಮೆರಿಕ: 243 ಬಿಲಿಯನ್ ಡಾಲರ್
  22. ಚೀನಾ ಮೊಬೈಲ್, ಚೀನಾ: 241 ಬಿಲಿಯನ್ ಡಾಲರ್
  23. ರಿಲಾಯನ್ಸ್, ಭಾರತ: 216 ಬಿಲಿಯನ್ ಡಾಲರ್
  24. ಸರ್ವಿಸ್​​ನೌ, ಅಮೆರಿಕ: 214 ಬಿಲಿಯನ್ ಡಾಲರ್
  25. ಇಂಟ್ಯೂಟಿವ್ ಸರ್ಜಿಕಲ್, ಅಮೆರಿಕ: 201 ಬಿಲಿಯನ್ ಡಾಲರ್
  26. ಎಟಿ ಅಂಡ್ ಟಿ, ಅಮೆರಿಕ: 197 ಬಿಲಿಯನ್ ಡಾಲರ್
  27. ಸೀಮನ್ಸ್, ಜರ್ಮನಿ: 194 ಬಿಲಿಯನ್ ಡಾಲರ್
  28. ಊಬರ್, ಅಮೆರಿಕ: 189 ಬಿಲಿಯನ್ ಡಾಲರ್
  29. ಎಎಂಡಿ, ಅಮೆರಿಕ: 186 ಬಿಲಿಯನ್ ಡಾಲರ್
  30. ಇಂಟ್ಯೂಟ್, ಅಮೆರಿಕ: 185 ಬಿಲಿಯನ್ ಡಾಲರ್

ಇದನ್ನೂ ಓದಿ: ಗಾಂಡೀವ ಅಸ್ತ್ರ ಎಂಕೆ-3, ಮಹಾನ್ ವೇಗದಲ್ಲಿ ಟಾರ್ಗೆಟ್ ನಾಶ ಮಾಡಬಲ್ಲುದು ಭಾರತದ ಈ ಹೊಸ ಕ್ಷಿಪಣಿ

30 ವರ್ಷಗಳ ಹಿಂದೆ ಟಾಪ್-30ಯಲ್ಲಿ ಇದ್ದ ಕಂಪನಿಗಳ ಪೈಕಿ ಐದು ಮಾತ್ರವೇ ಈಗ ಈ ಪಟ್ಟಿಯಲ್ಲಿ ಇವೆ. ಮೈಕ್ರೋಸಾಫ್ಟ್, ಒರೇಕಲ್, ಸಿಸ್ಕೋ, ಐಬಿಎಂ ಮತ್ತು ಎಟಿ ಅಂಡ್ ಟಿ ಕಳೆದ 30 ವರ್ಷಗಳಿಂದಲೂ ಅಗ್ರಸಾಲಿನಲ್ಲಿ ಮುಂದುವರಿದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ