Vi5G: ಬೆಂಗಳೂರಿನಲ್ಲಿ 5ಜಿ ಸರ್ವಿಸ್ ಆರಂಭಿಸಿದ ವಿಐ; 299 ರೂನಿಂದ ಪ್ಲಾನ್ ಆರಂಭ
Vi 5G plans starts from Rs 299 in Bengaluru: ವೊಡಾಫೋನ್ ಐಡಿಯಾ ಮುಂಬೈ, ದೆಹಲಿ, ಪಾಟ್ನಾ, ಚಂಡೀಗಡ ಬಳಿಕ ಬೆಂಗಳೂರಿನಲ್ಲೂ 5ಜಿ ಸರ್ವಿಸ್ ಆರಂಭಿಸಿದೆ. ಸ್ಯಾಮ್ಸುಂಗ್ ನೆರವಿನಿಂದ ವಿಐ ಬೆಂಗಳೂರಿನಲ್ಲಿ 5ಜಿ ನೆಟ್ವರ್ಕ್ ಅಭಿವೃದ್ಧಿಪಡಿಸಿದೆ. ವಿಐನ 5ಜಿ ಪ್ಲಾನ್ಗಳು 299 ರೂನಿಂದ ಆರಂಭವಾಗುತ್ತವೆ. 299 ರೂಗೆ ಅನ್ಲಿಮಿಟೆಡ್ 5ಜಿ ಡಾಟಾ ಸಿಗುತ್ತದೆ. 5ಜಿ ಬೆಂಬಲಿತ ಸಾಧನ ಇಲ್ಲದಿದ್ದರೆ ದಿನಕ್ಕೆ 1ಜಿಬಿಯಷ್ಟು 4ಜಿ ಡಾಟಾ ಸಿಗುತ್ತದೆ.

ಬೆಂಗಳೂರು, ಜೂನ್ 11: ವೊಡಾಫೋನ್ ಐಡಿಯಾ ಸಂಸ್ಥೆ (Vodafone Idea) ಬೆಂಗಳೂರಿನಲ್ಲಿ 5ಜಿ ಸರ್ವಿಸ್ ಆರಂಭಿಸಿದೆ. ಉದ್ಯಾನನಗರಿಯಲ್ಲಿ 5ಜಿ ಸರ್ವಿಸ್ (5G service) ನೀಡುತ್ತಿರುವ ರಿಲಾಯನ್ಸ್ ಜಿಯೋ, ಏರ್ಟೆಲ್ ಸಾಲಿಗೆ ವಿಐ ಸೇರ್ಪಡೆಯಾಗಿದೆ. ವೊಡಾಫೋನ್ ಐಡಿಯಾ ಸಂಸ್ಥೆ ಕಳೆದ ತಿಂಗಳು ಮುಂಬೈ ಪಟ್ನಾ ಮತ್ತು ಚಂಡೀಗಡದಲ್ಲಿ 5ಜಿ ನೆಟ್ವರ್ಕ್ ಚಾಲನೆಗೊಳಿಸಿತ್ತು. ಬೆಂಗಳೂರಿನಲ್ಲಿ 5ಜಿ ನೆಟ್ವರ್ಕ್ ಅಭಿವೃದ್ಧಿಗೆ ವಿಐ ಸಂಸ್ಥೆ ಸ್ಯಾಮ್ಸುಂಗ್ನ (Samsung) ನೆರವು ಪಡೆದಿದೆ.
5ಜಿ ನೆಟ್ವರ್ಕ್ಗೆ ಬೇಕಾದ ಸುಧಾರಿತ ಇನ್ಫ್ರಾಸ್ಟ್ರಕ್ಚರ್ ಅನ್ನು ಬೆಂಗಳೂರಿನಲ್ಲಿ ಅಳವಡಿಸಲಾಗುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಲಿತ ಸೆಲ್ಫ್ ಆರ್ಗನೈಸಿಂಗ್ ನೆಟ್ವರ್ಕ್ಗಳನ್ನು ಅಳವಡಿಸಲಾಗುತ್ತಿದೆ. ಈ ತಂತ್ರವು ನೆಟ್ವರ್ಕ್ ಅನ್ನು ಗರಿಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.
ವೊಡಾಫೋನ್ ಐಡಿಯಾ ಬಳಕೆದಾರರು ಬೆಂಗಳೂರಿನಲ್ಲಿ ಇಂದಿನಿಂದ (ಜೂನ್ 11) 5ಜಿ ಸ್ಪೀಡ್ನ ಡಾಟಾ ಪಡೆಯಬಹುದು. ವಿಐನ 5ಜಿ ಪ್ಲಾನ್ಗಳು 299 ರೂನಿಂದ ಆರಂಭವಾಗುತ್ತದೆ. ಇದರಲ್ಲಿ ಅನ್ಲಿಮಿಟೆಡ್ 5ಜಿ ಡಾಟಾ ನೀಡಲಾಗುತ್ತದೆ ಎಂದು ವಿಐ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: ಚೀನಾದ ಸಾಲದ ಕುಣಿಕೆಗೆ ಸಿಕ್ಕಿರೋದು ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ, ಇಲ್ಲಿದೆ ಟಾಪ್-10 ಪಟ್ಟಿ
ವಿಐನ 299 ರೂ 5ಜಿ ಪ್ಲಾನ್ ವಿವರ
ವೊಡಾಫೋನ್ ಐಡಿಯಾ ಸಂಸ್ಥೆಯ 5ಜಿ ಪ್ಲಾನ್ಗಳು 299 ರೂನಿಂದ ಆರಂಭವಾಗುತ್ತವೆ. ಈ 299 ರೂ ಪ್ಲಾನ್ನಲ್ಲಿ 5ಜಿ ಬೆಂಬಲಿತ ಸಾಧನಗಳನ್ನು ಹೊಂದಿದ್ದರೆ ಅನ್ಲಿಮಿಟೆಡ್ 5ಜಿ ಡಾಟಾ ಸಿಗುತ್ತದೆ. 5ಜಿ ಡಿವೈಸ್ ಇಲ್ಲದವರಿಗೆ ದಿನಕ್ಕೆ 1ಜಿಬಿಯಷ್ಟು 4ಜಿ ಡಾಟಾ ಸಿಗುತ್ತದೆ.
ವೊಡಾಫೋನ್ ಐಡಿಯಾ ಸಂಸ್ಥೆ 17 ಪ್ರಯಾರಿಟಿ ಸರ್ಕಲ್ಗಳಲ್ಲಿ (prioritiy circle) 5ಜಿ ಸ್ಪೆಕ್ಟ್ರಂ ಖರೀದಿ ಮಾಡಿದೆ. ಇಲ್ಲೆಲ್ಲಾ 5ಜಿ ನೆಟ್ವರ್ಕ್ ಅಳವಡಿಕೆ ಕಾರ್ಯದಲ್ಲಿ ತೊಡಗಿದೆ. ಕಳೆದ ತಿಂಗಳು ಮುಂಬೈ, ದೆಹಲಿ, ಪಾಟ್ನಾ ಮತ್ತು ಚಂಡೀಗಡದಲ್ಲಿ ಸೇವೆ ಆರಂಭಿಸಲಾಗಿತ್ತು. ಈಗ ಬೆಂಗಳೂರಿನ ಸರದಿ. ಆಗಸ್ಟ್ ತಿಂಗಳಿನೊಳಗೆ ಎಲ್ಲಾ 17 ಪ್ರಯಾರಿಟಿ ಸರ್ಕಲ್ಗಳಲ್ಲಿರುವ ಪ್ರದೇಶಗಳಲ್ಲಿ 5ಜಿ ಅಳವಡಿಕೆ ಮಾಡುವ ಗುರಿ ವಿಐನದ್ದು.
ಇದನ್ನೂ ಓದಿ: ಡಿಶ್, ಕೇಬಲ್ ಟಿವಿ ಉದ್ಯಮದ ಸಂಕಷ್ಟ: ಕೆಲಸ ಕಳೆದುಕೊಂಡ 5.77 ಲಕ್ಷ ಮಂದಿ
ಕರ್ನಾಟಕದಲ್ಲಿ 4ಜಿ ನೆಟ್ವರ್ಕ್ ಮತ್ತಷ್ಟು ಉನ್ನತೀಕರಣ
ವೊಡಾಫೋನ್ ಐಡಿಯಾ ಸಂಸ್ತೇ ಕರ್ನಾಟಕದಲ್ಲಿರುವ ತನ್ನ 4ಜಿ ನೆಟ್ವರ್ಕ್ ಅನ್ನು ಮತ್ತಷ್ಟು ಉನ್ನತೀಕರಿಸಿದೆ. ಇದರಿಂದ ಅಡಚಣೆ ಇಲ್ಲದ ಕವರೇಜ್, ಹೆಚ್ಚು ವೇಗದ ಇಂಟರ್ನೆಟ್ ಸ್ಪೀಡ್ ಅನ್ನು 4ಜಿ ಬಳಕೆದಾರರು ಪಡೆಯಲು ಸಾಧ್ಯವಾಗುತ್ತದೆ. ರಾಜ್ಯದ 3,000 ಸೈಟ್ಗಳಲ್ಲಿ 900 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಅಳವಡಿಸಿದೆ. ಇದರಿಂದ ಒಳಾಂಗಣದಲ್ಲಿ ನೆಟ್ವರ್ಕ್ ಕವರೇಜ್ ಉತ್ತಮಗೊಳ್ಳುತ್ತದೆ. ಸುಮಾರು 1,800 ಸೈಟ್ಗಳಲ್ಲಿ 2100 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಕೆಪಾಸಿಟಿಯನ್ನು ದ್ವಿಗುಣಗೊಳಿಸಲಾಗಿದೆ. ಒಂದು ಸಾವಿರ ಸ್ಥಳಗಳಲ್ಲಿ ಹೊಸದಾಗಿ 2100 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಅಳವಡಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ