AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ಫ್ ದೇಶಗಳಿಗೆ ಹೋಗುವವರ ಗಮನಕ್ಕೆ; ಏರ್ ಇಂಡಿಯಾದಿಂದ ಪರ್ಯಾಯ ಮಾರ್ಗ ಬಳಕೆ; ವಿಮಾನ ಪ್ರಯಾಣ ಅವಧಿ ಹೆಚ್ಚಳ

Air India flights to Kuwait, Oman, Qatar, UAE delayed: ಕೆಲ ಮಧ್ಯಪ್ರಾಚ್ಯ ಪ್ರದೇಶಗಳಿಗೆ ಹೋಗುವ ಏರ್ ಇಂಡಿಯಾದ ಫ್ಲೈಟ್​​ಗಳ ಪ್ರಯಾಣ ಅವಧಿ ದೀರ್ಘವಿರಲಿದೆ. ಇರಾಕ್, ಇರಾನ್ ಬದಲು ಪರ್ಯಾಯ ಮಾರ್ಗ ಬಳಸುವ ಕಾರಣಕ್ಕೆ ಈ ವಿಳಂಬ ಇರಲಿದೆ ಎಂದು ಏರ್ ಇಂಡಿಯಾ ಹೇಳಿದೆ. ಕುವೇತ್, ಓಮನ್ ಇತ್ಯಾದಿ ಕಡೆ ಹೋಗುವ ವಿಮಾನಗಳಿಗೆ ಇದರ ಎಫೆಕ್ಟ್ ಇರುತ್ತದೆ.

ಗಲ್ಫ್ ದೇಶಗಳಿಗೆ ಹೋಗುವವರ ಗಮನಕ್ಕೆ; ಏರ್ ಇಂಡಿಯಾದಿಂದ ಪರ್ಯಾಯ ಮಾರ್ಗ ಬಳಕೆ; ವಿಮಾನ ಪ್ರಯಾಣ ಅವಧಿ ಹೆಚ್ಚಳ
ಏರ್ ಇಂಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2025 | 7:23 PM

Share

ನವದೆಹಲಿ, ಜೂನ್ 22: ಯುದ್ಧ ಸಂಭವಿಸುತ್ತಿರುವ ಪರ್ಷಿಯನ್ ಗಲ್ಫ್ ಪ್ರದೇಶದ ವಾಯುವಾರ್ಗವನ್ನು (persian gulf) ಬಳಸದಿರಲು ಏರ್ ಇಂಡಿಯಾ ನಿರ್ಧರಿಸಿದೆ. ಇರಾನ್, ಇರಾಕ್ ಮತ್ತು ಇಸ್ರೇಲ್ ಮೇಲೆ ಹಾದು ಹೋಗುವುದನ್ನು ತಪ್ಪಿಸಲು ಬೇರೆ ಪರ್ಯಾಯ ಮಾರ್ಗಗಳಲ್ಲಿ ಏರ್ ಇಂಡಿಯಾ (Air India) ಸಂಚರಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಏರ್ ಇಂಡಿಯಾ ವಕ್ತಾರರು, ಈ ಮಾರ್ಗ ಬದಲಾವಣೆ (flight re-route) ಕಾರಣಕ್ಕೆ ಕೆಲ ಫ್ಲೈಟ್​​ಗಳ ಸಂಚಾರ ಸಮಯ ಅಧಿಕಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದಿಂದ ಯುಎಇ, ಕತಾರ್, ಓಮನ್, ಕುವೇತ್ ದೇಶಗಳಿಗೆ ಹೋಗಲು ವಿಮಾನಗಳು ಇರಾಕ್, ಇರಾನ್ ವಾಯು ಪ್ರದೇಶವನ್ನು ಬಳಕೆ ಮಾಡುತ್ತವೆ. ಯೂರೋಪ್ ಮತ್ತು ಅಮೆರಿಕಕ್ಕೆ ಹೋಗಲು ಕೆಲ ಫ್ಲೈಟ್​​ಗಳು ಇಸ್ರೇಲ್ ಅನ್ನು ಹಾದು ಹೋಗುತ್ತವೆ. ಈಗ ಯುದ್ಧದ ಸಂದರ್ಭ ಇರುವುದರಿಂದ ಇರಾನ್, ಇರಾಕ್ ಮತ್ತು ಇಸ್ರೇಲ್ ವಾಯು ಪ್ರದೇಶವನ್ನು ಬಳಕೆ ಮಾಡದಿರಲು ಏರ್ ಇಂಡಿಯಾ ನಿರ್ಧರಿಸಿದೆ.

ಇದನ್ನೂ ಓದಿ: 168 ಪ್ರಯಾಣಿಕರಿದ್ದ ಇಂಡಿಗೋ ವಿಮಾನದಲ್ಲಿ ಮೇಡೇ ಘೋಷಿಸಿದ ಪೈಲಟ್; ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ

ಪರ್ಯಾಯ ಮಾರ್ಗ ಯಾವುದು ಹೇಳಲಾಗಿಲ್ಲ. ಆದರೆ, ನಿಗದಿತ ವೇಳೆಗೆ ಪ್ರಯಾಣ ಪೂರ್ಣವಾಗುವುದಿಲ್ಲ. ವಿಳಂಬವಾಗುವ ಸಾಧ್ಯತೆ ಇದೆ. ಇತರ ಏರ್​ಲೈನ್ಸ್ ಕಂಪನಿಗಳ ಫ್ಲೈಟ್​​ಗಳ ಪ್ರಯಾಣ ಅವಧಿ ಹೆಚ್ಚಳಗೊಂಡಿದೆ. ಈ ಕಾರಣಕ್ಕೆ ಏರ್ ಇಂಡಿಯಾದ ಇವತ್ತಿನ ಎರಡು ಫ್ಲೈಟ್​​ಗಳನ್ನು ರದ್ದುಗೊಳಿಸಿದ ಘಟನೆಯೂ ನಡೆದಿದೆ.

ದೆಹಲಿಯಿಂದ ಫ್ರಾಂಟ್​​ಫುರ್ಟ್ ಹಾಗೂ ದೆಹಲಿಯಿಂದ ಝುರಿಚ್ ಮಾರ್ಗದ ಎರಡು ಫ್ಲೈಟ್​​ಗಳನ್ನು ಏರ್ ಇಂಡಿಯಾ ರದ್ದುಗೊಳಿಸಿದೆ. ಪರ್ಯಾಯ ಮಾರ್ಗಗಳಲ್ಲಿ ಬೇರೆ ಫ್ಲೈಟ್​​ಗಳೂ ಸಂಚರಿಸುತ್ತಿರುವುದರಿಂದ ಅನಿವಾರ್ಯವಾಗಿ ಈ ಎರಡು ಫ್ಲೈಟ್​​ಗಳನ್ನು ರದ್ದುಗೊಳಿಸಿರಬಹುದು.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಶುರುವಾಗಿ ಇವತ್ತಿಗೆ 11 ದಿನಗಳಾಗಿವೆ. ಇರಾನ್​​ನಿಂದ ದಾಳಿಯಾಗುವ ಸಾಧ್ಯತೆ ಇರಬಹುದು ಎನ್ನುವ ಎಣಿಕೆಯಲ್ಲಿ ಇಸ್ರೇಲ್ ಮುನ್ನೆಚ್ಚರಿಕೆಯಾಗಿ ಇರಾನ್ ಮೇಲೆ ದಾಳಿ ಮಾಡಿತು. ಆ ಬಳಿಕ ಎರಡೂ ದೇಶಗಳು ಪರಸ್ಪರ ಕ್ಷಿಪಣಿ, ಡ್ರೋನ್​ಗಳ ಸುರಿಮಳೆಯನ್ನೇ ಸುರಿಸಿವೆ. ಶನಿವಾರ ಅಮೆರಿಕ ತನ್ನ ಬಂಕರ್ ಬಾಂಬ್ ಅನ್ನು ಹಾಕಿ ಇರಾನ್​​ನ ಪರಮಾಣ ಘಟಕವನ್ನು ನಾಶಗೊಳಿಸಲು ಯತ್ನಿಸಿದೆ.

ಇದನ್ನೂ ಓದಿ: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು

ಅಮೆರಿಕದ ದಾಳಿಯನ್ನು ಇರಾನ್ ತೀರಾ ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಹೇಳಿದೆ. ಇರಾನ್ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ. ಇದೇ ವೇಳೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ