AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India’s FTA: ಅಂತಿಂಥ ದೇಶಳೊಂದಿಗೆ ಇಲ್ಲ ಮುಖ್ಯ ವ್ಯಾಪಾರ ಒಪ್ಪಂದ; ಭಾರತದ ನೀತಿಯಲ್ಲಿ ಹೊಸ ದೃಷ್ಟಿಕೋನ

India's new vision for FTA: ಭಾರತವು ಈಗ ಮುಕ್ತ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಹೊಸ ಧೋರಣೆ ತಳೆದಿದೆ. ಯಾರ ಜೊತೆ ಒಪ್ಪಂದ ಮಾಡಿಕೊಳ್ಳಬೇಕು, ಯಾವ ಅಂಶಗಳನ್ನು ಪರಿಗಣಿಸಬೇಕು ಎಂದು ಹೊಸ ಚೌಕಟ್ಟು ಹಾಕಿದೆ. ಶ್ರೀಮಂತ ದೇಶಗಳು, ಖನಿಜ ಸಮೃದ್ಧವಾಗಿರುವ ದೇಶಗಳು, ಅಭಿವೃದ್ಧಿಶೀಲ ದೇಶಗಳು ಹಾಗೂ ನೆರೆಹೊರೆಯ ದೇಶಗಳಿಗೆ ಆದ್ಯತೆ ಕೊಡಲು ಉದ್ದೇಶಿಸಿದೆ.

India's FTA: ಅಂತಿಂಥ ದೇಶಳೊಂದಿಗೆ ಇಲ್ಲ ಮುಖ್ಯ ವ್ಯಾಪಾರ ಒಪ್ಪಂದ; ಭಾರತದ ನೀತಿಯಲ್ಲಿ ಹೊಸ ದೃಷ್ಟಿಕೋನ
ವ್ಯಾಪಾರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2025 | 5:30 PM

Share

ನವದೆಹಲಿ, ಜೂನ್ 22: ಈಗ ಹಲವು ದೇಶಗಳು ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದ (FTA- Free Trade Agreement) ಮಾಡಿಕೊಳ್ಳಲು ಬಯಸುತ್ತಿವೆ. ಎಲ್ಲಾ ದೇಶಗಳೊಂದಿಗೆ ಎಫ್​​ಟಿಎ ಮಾಡಿಕೊಂಡರೆ ಕೆಲ ದೇಶೀಯ ಉದ್ಯಮಗಳಿಗೆ ಸಂಚಕಾರವಾಗಬಹುದು. ಹೀಗಾಗಿ, ಭಾರತವು ಆಯ್ದ ದೇಶಗಳೊಂದಿಗೆ ಮಾತ್ರ ಫ್ರೀ ಟ್ರೇಡ್ ಅಗ್ರೀಮೆಂಟ್ ಮಾಡಿಕೊಳ್ಳಲು ನಿರ್ಧರಿಸಿದಂತಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಭಾರತವು ಮುಕ್ತ ವ್ಯಾಪಾರ ಒಪ್ಪಂದಕ್ಕೆ ದೇಶಗಳನ್ನು ಆಯ್ಕೆ ಮಾಡಿಕೊಳ್ಳಲು ನಾಲ್ಕು ಮಾನದಂಡಗಳನ್ನು ಇಟ್ಟುಕೊಂಡಿದೆ. ಇಂಥದ್ದೊಂದು ನೀತಿಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ.

ಎಫ್​​ಟಿಎಗೆ ಭಾರತ ಇಟ್ಟುಕೊಂಡಿರುವ ಮಾನದಂಡಗಳಿವು…

  1. ಮುಂದುವರಿದ ದೇಶಗಳಾಗಿಬೇಕು
  2. ಖನಿಜ ಸಮೃದ್ಧ ಇರುವ ದೇಶಗಳಾಗಿರಬೇಕು
  3. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯುಳ್ಳ ದೇಶಗಳಾಗಿರಬೇಕು
  4. ನೆರೆಹೊರೆಯ ದೇಶಗಳಾಗಿರಬೇಕು.

ಇದನ್ನೂ ಓದಿ: Sahkari Taxi: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು

ಈ ಮೇಲಿನ ಮಾನದಂಡಗಳಲ್ಲಿ ಕನಿಷ್ಠ ಒಂದಾದರೂ ಇದ್ದರೆ ಅಂತಹ ದೇಶದೊಂದಿಗೆ ಭಾರತವು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾಗಬಹುದು ಎನ್ನಲಾಗಿದೆ.

ಬ್ರಿಟನ್ ಜೊತೆ ಎಫ್​​ಟಿಎ ಮಾಡಿಕೊಳ್ಳಲಾಗಿದೆ. ಅಮೆರಿಕ, ಯೂರೋಪಿಯನ್ ಯೂನಿಯನ್ ಜೊತೆ ಈ ವರ್ಷಾಂತ್ಯದೊಳಗೆ ಒಪ್ಪಂದಗಳಾಗಬಹುದು.

ಚಿಲಿ, ಪೆರು, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶಗಳ ಜೊತೆ ಸಂಧಾನಗಳು, ಮಾತುಕತೆಗಳು ನಡೆಯುತ್ತಿವೆ. ಸಂಧಾನಕ್ಕಾಗಿ ತಂಡಗಳನ್ನು ಬಲಪಡಿಸುವ ಕಾರ್ಯ ನಡೆಯುತ್ತಿದೆ.

ಒಂದೇ ಉತ್ಪನ್ನಗಳಿಗೆ ಪೈಪೋಟಿ ಇದ್ದರೆ ಇಲ್ಲ ಪ್ರಯೋಜನ

ಭಾರತವು ಎಫ್​​​ಟಿಎ ವಿಚಾರದಲ್ಲಿ ಪ್ರಾಕ್ಟಿಕಲ್ ಆಗಿ ಯೋಚಿಸುತ್ತಿದೆ. ಎರಡು ದೇಶಗಳು ಒಂದೇ ರೀತಿಯ ಉತ್ಪನ್ನಗಳನ್ನು ಮಾರುತ್ತಿದ್ದರೆ ಆಗ ಎಫ್​​ಟಿಎಗೆ ಅರ್ಥ ಇರುವುದಿಲ್ಲ. ಪರಸ್ಪರ ಪೂರಕವಾಗಿರುವ ಉತ್ಪನ್ನಗಳಿದ್ದರೆ ಆಗ ಎಫ್​​ಟಿಎ ಮಾಡಬಹುದು. ಇಂಥ ಅಂಶಗಳಿರುವ ಚೌಕಟ್ಟನ್ನು ಭಾರತ ತನ್ನ ನೀತಿಯಲ್ಲಿ ಅಳವಡಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ

ಮುಂದುವರಿದ ದೇಶಗಳ ಜೊತೆ ಎಫ್​​ಟಿಎ ಮಾಡಿಕೊಂಡರೆ ಪ್ರಯೋಜನ ಇದೆ. ಕಾರ್ಮಿಕರ ಶ್ರಮ ಬೇಡುವ ಉತ್ಪನ್ನಗಳ ತಯಾರಿಕೆ ವೆಚ್ಚವು ಮುಂದುವರಿದ ದೇಶಗಳಲ್ಲಿ ಹೆಚ್ಚಿರುತ್ತದೆ. ಇದು ಆ ದೇಶಗಳಲ್ಲಿರುವ ಉತ್ಪನ್ನಗಳ ತಯಾರಿಕೆ ವೆಚ್ಚ ಅಧಿಕವಾಗಿಸುತ್ತದೆ. ಇಂಥ ಸಂದರ್ಭದಲ್ಲಿ ಭಾರತದ ಉತ್ಪನ್ನಗಳನ್ನು ಸುಲಭವಾಗಿ ಮಾರಬಹುದು ಎನ್ನುವ ಎಣಿಕೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ