AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಯಾವ ದಿನ ಯಾವ ವಸ್ತು ದಾನ ಮಾಡುವುದು ಶುಭ?

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರು ತಮ್ಮ ದೈನಂದಿನ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದಾನದ ಬಗ್ಗೆ ವಿವರಿಸಿದ್ದಾರೆ. ವಾರದ ಪ್ರತಿ ದಿನವೂ ಯಾವ ವಸ್ತು ದಾನವನ್ನು ಮಾಡುವುದು ಶ್ರೇಷ್ಠ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಗೋಧಿ, ಅಕ್ಕಿ, ತೊಗರಿಬೇಳೆ, ಹೆಸರುಬೇಳೆ, ಕಡಲೆಕಾಳು ಮತ್ತು ಎಳ್ಳಿನ ದಾನದ ಮಹತ್ವವನ್ನು ವಿವರಿಸಲಾಗಿದೆ.

Daily Devotional: ಯಾವ ದಿನ ಯಾವ ವಸ್ತು ದಾನ ಮಾಡುವುದು ಶುಭ?
Daily Donations
ಅಕ್ಷತಾ ವರ್ಕಾಡಿ
|

Updated on:Jun 24, 2025 | 8:18 AM

Share

ದಾನ ಮಾಡುವುದು ಒಂದು ಪುಣ್ಯ ಕಾರ್ಯವಾಗಿದ್ದು, ಇದನ್ನು ಮಾಡುವುದರಿಂದ ಓರ್ವ ವ್ಯಕ್ತಿ ಮರಣಾ ನಂತರ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗಿದೆ. ಈ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರು ತಮ್ಮ ದೈನಂದಿನ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ವಾರದ ಪ್ರತಿ ದಿನಕ್ಕೂ ಯಾವ ದಾನ ಮಾಡುವುದು ಶ್ರೇಷ್ಠ ಎಂಬುದರ ಕುರಿತು ವಿಸ್ತಾರವಾದ ಚರ್ಚಿಸಲಾಗಿದೆ. ಪುರಾತನ ಧರ್ಮಗ್ರಂಥಗಳನ್ನು ಉಲ್ಲೇಖಿಸಿ, ಕಲಿಯುಗದಲ್ಲಿ ದಾನಕ್ಕೆ ಅಪಾರ ಮಹತ್ವವನ್ನು ನೀಡಲಾಗಿದೆ. ಕೃತಯುಗದಲ್ಲಿ ತಪಸ್ಸು, ತ್ರೇತಾಯುಗದಲ್ಲಿ ಜ್ಞಾನ, ದ್ವಾಪರಯುಗದಲ್ಲಿ ಯಜ್ಞಗಳು ಮುಖ್ಯವಾಗಿದ್ದರೆ, ಕಲಿಯುಗದಲ್ಲಿ ದಾನವೇ ಶ್ರೇಷ್ಠ ಎಂದು ಪರಾಶರ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಗುರೂಜಿ ಹೇಳಿದ್ದಾರೆ.

ಆದರೆ, ದಾನ ಎಂದರೇನು? ರಾತ್ರಿ ಉಳಿದ ಊಟ, ಬಳಕೆಯಾಗದ ಬಟ್ಟೆಗಳು ಇತ್ಯಾದಿಗಳನ್ನು ದಾನ ಎಂದು ಪರಿಗಣಿಸಲಾಗುವುದಿಲ್ಲ. ದಾನವು ಅಪಾತ್ರವಾಗಿರಬಾರದು. ಅದನ್ನು ಪರಿಪೂರ್ಣವಾಗಿ ಬಳಸುವವರಿಗೆ ಮಾತ್ರ ನೀಡಬೇಕು. ಹಸಿದವರಿಗೆ ಆಹಾರ, ಬಡವರಿಗೆ ಬಟ್ಟೆ, ಅನಾಥರಿಗೆ ಆಶ್ರಯ ಇತ್ಯಾದಿ ನಿಜವಾದ ದಾನಗಳು. ಶ್ರೀಮಂತರಿಗೆ ಶ್ರೀಮಂತರೇ ಕೊಡುವ ದಾನವು ಮೆಚ್ಚುಗೆಗಾಗಿ ಮಾತ್ರ ಎಂದು ಹೇಳಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಇದನ್ನೂ ಓದಿ: ಸಂಖ್ಯೆ 7ರ ಹಿಂದಿನ ರಹಸ್ಯಗಳು; ಇದು ಶುಭವೋ, ಅಶುಭವೋ?

ವಾರದ ಪ್ರತಿ ದಿನಕ್ಕೂ ಸೂಕ್ತವಾದ ದಾನಗಳು:

  1. ಭಾನುವಾರ: ಗೋಧಿ ಅಥವಾ ಗೋಧಿಯಿಂದ ಮಾಡಿದ ಪದಾರ್ಥಗಳು. ಇದರಿಂದ ದೇಹದ ಆರೋಗ್ಯ ಸುಧಾರಣೆ, ಸೋಮಾರಿತನ ನಿವಾರಣೆ, ರೋಗಗಳಿಂದ ಮುಕ್ತಿ ಮತ್ತು ಕುಟುಂಬದಲ್ಲಿ ಸಂತೋಷ ನೆಲೆಸಿರುತ್ತದೆ ಎಂದು ನಂಬಲಾಗಿದೆ.
  2. ಸೋಮವಾರ: ಅಕ್ಕಿ, ಅನ್ನ, ಹಾಲು, ಮೊಸರು. ಇದರಿಂದ ಸಂಸಾರದ ಸುಖ, ನೆಮ್ಮದಿ ಮತ್ತು ಸಾಲದಿಂದ ಮುಕ್ತಿ.
  3. ಮಂಗಳವಾರ: ತೊಗರಿಬೇಳೆ ಅಥವಾ ಅದರಿಂದ ಮಾಡಿದ ಪದಾರ್ಥಗಳು. ಇದರಿಂದ ಅಧಿಕಾರ ಪ್ರಾಪ್ತಿ ಮತ್ತು ವಿದ್ಯಾಶಕ್ತಿಯ ಹೆಚ್ಚಳ.
  4. ಬುಧವಾರ: ಹೆಸರುಬೇಳೆ, ಚಿತ್ರಾನ್ನ ಅಥವಾ ಹಳದಿ ಹೂವುಗಳು. ಇದರಿಂದ ಕೀರ್ತಿ ಮತ್ತು ಪ್ರತಿಷ್ಠೆ.
  5. ಗುರುವಾರ: ಕಡಲೆಕಾಳು ಮತ್ತು ಬೆಲ್ಲ. ಇದರಿಂದ ಧನಯೋಗ.
  6. ಶುಕ್ರವಾರ: ಬಿಳಿ ಬಟ್ಟೆ ಮತ್ತು ಅವರೆಕಾಳಿನಿಂದ ಮಾಡಿದ ಪದಾರ್ಥಗಳು. ಇದರಿಂದ ಸುಖ ಮತ್ತು ಸಂತೋಷ.
  7. ಶನಿವಾರ: ಕರಿ ಎಳ್ಳಿನಿಂದ ಮಾಡಿದ ಪದಾರ್ಥಗಳು. ಇದರಿಂದ ದೇಹ ಮತ್ತು ಆಧ್ಯಾತ್ಮಿಕ ಆರೋಗ್ಯ ಸುಧಾರಣೆ.

ದಾನವು ಪೂಜೆಗಿಂತಲೂ ಶ್ರೇಷ್ಠ. ಪ್ರತಿಯೊಬ್ಬರೂ ದಿನನಿತ್ಯ ದಾನ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:17 am, Tue, 24 June 25

ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ