AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳವಾರದಂದು ಈ ಲಕ್ಷಣಗಳು ಕಂಡುಬಂದರೆ, ಹನುಮಂತನ ಆಶೀರ್ವಾದ ನಿಮ್ಮೊಂದಿಗಿದೆ ಎಂದರ್ಥ

ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನಿಗೆ ಅರ್ಪಿತವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಕೋತಿಯನ್ನು ನೋಡುವುದು, ಹನುಮಾನ್ ಚಾಲೀಸಾ ಓದುತ್ತಿರುವಂತೆ ಕನಸು ಕಾಣುವುದು, ಮನೆಯ ಬಳಿ ಕೆಂಪು ಹಸು ಕಾಣಿಸಿಕೊಳ್ಳುವುದು – ಇವು ಹನುಮಂತನ ಆಶೀರ್ವಾದದ ಸೂಚನೆಗಳು. ಈ ಶುಭ ಲಕ್ಷಣಗಳು ಧನಾತ್ಮಕ ಬದಲಾವಣೆಗಳನ್ನು ಸೂಚಿಸುತ್ತವೆ ಮತ್ತು ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತವೆ ಎಂದು ನಂಬಲಾಗಿದೆ.

ಮಂಗಳವಾರದಂದು ಈ ಲಕ್ಷಣಗಳು ಕಂಡುಬಂದರೆ, ಹನುಮಂತನ ಆಶೀರ್ವಾದ ನಿಮ್ಮೊಂದಿಗಿದೆ ಎಂದರ್ಥ
Hanuman Blessing
ಅಕ್ಷತಾ ವರ್ಕಾಡಿ
|

Updated on:Jun 24, 2025 | 11:29 AM

Share

ಹಿಂದೂ ಧರ್ಮದಲ್ಲಿ, ಮಂಗಳವಾರವನ್ನು ಹನುಮಂತನಿಗೆ ಅರ್ಪಿತವಾದ ದಿನವೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಈ ದಿನವನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಮಂಗಳವಾರದಂದು ಕೆಲವು ವಿಷಯಗಳನ್ನು ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಮಂಗಳವಾರದಂದು ಈ ರೀತಿಯ ಅನುಭವವಾದರೆ ಹನುಮಂತನ ಆಶೀರ್ವಾದವು ನಿಮ್ಮೊಂದಿಗಿದೆ ಎಂಬುದರ ಸೂಚನೆಯಾಗಿದೆ. ಆದ್ದರಿಂದ ಅಂತಹ ಅನುಭವಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮಂಗಳವಾರ ಕೋತಿಯನ್ನು ನೋಡುವುದು:

ಮಂಗಳವಾರ ಬೆಳಿಗ್ಗೆ ನೀವು ಇದ್ದಕ್ಕಿದ್ದಂತೆ ಕೋತಿಯನ್ನು ನೋಡಿದರೆ ಅಥವಾ ಅದು ನಿಮ್ಮ ಮನೆ ಬಾಗಿಲಿಗೆ ಬಂದರೆ, ಹನುಮಂತನ ಆಶೀರ್ವಾದ ನಿಮ್ಮ ಮೇಲಿದೆ ಎಂದು ಅರ್ಥಮಾಡಿಕೊಳ್ಳಿ. ಮಂಗಳವಾರ ಕೋತಿಯನ್ನು ನೋಡುವುದು ನಿಮಗೆ ಹನುಮಂತನ ಆಶೀರ್ವಾದ ಸಿಕ್ಕಿದೆ ಎಂಬುದರ ಸೂಚನೆ ಎಂದು ಹೇಳಲಾಗುತ್ತದೆ. ಇದಲ್ಲದೇ ಮಂಗಳವಾರದಂದು ನೀವು ಕನಸಿನಲ್ಲಿ ಕೋತಿಯನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಕೆಲವು ದೊಡ್ಡ ಮತ್ತು ಒಳ್ಳೆಯ ಬದಲಾವಣೆಗಳು ಸಂಭವಿಸಲಿವೆ ಎಂದರ್ಥ. ಮಂಗಳವಾರದಂದು ನಿಮ್ಮ ಕನಸಿನಲ್ಲಿ ಕೋತಿಯನ್ನು ನೋಡಿದರೆ ಹನುಮಂತ ನಿಮ್ಮೊಂದಿಗಿದ್ದಾರೆ ಮತ್ತು ನಿಮ್ಮ ಜೀವನದಲ್ಲಿರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎಂದರ್ಥ.

ಕನಸಿನಲ್ಲಿ ಹನುಮಾನ್ ಚಾಲೀಸಾ:

ಮಂಗಳವಾರದಂದು ನೀವು ಕನಸಿನಲ್ಲಿ ಹನುಮಾನ್ ಚಾಲೀಸಾ ಓದುತ್ತಿದ್ದಂತೆ ಕಂಡರೆ, ಅದು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಹನುಮಂತನ ಆಶೀರ್ವಾದ ನಿಮ್ಮ ಮೇಲಿದೆ ಎಂದು ಸೂಚಿಸುತ್ತದೆ. ಕನಸಿನಲ್ಲಿ ಹನುಮಾನ್ ಚಾಲೀಸಾ ಓದುವುದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಬರಲಿದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಇದನ್ನೂ ಓದಿ: ಸಂಖ್ಯೆ 7ರ ಹಿಂದಿನ ರಹಸ್ಯಗಳು; ಇದು ಶುಭವೋ, ಅಶುಭವೋ?

ಮನೆಯ ಮುಂದೆ ಕೆಂಪು ಹಸು:

ಧಾರ್ಮಿಕ ನಂಬಿಕೆಗಳ ಪ್ರಕಾರ, ಮಂಗಳವಾರ ಮನೆಯ ಮುಂದೆ ಕೆಂಪು ಹಸು ಕಾಣಿಸಿಕೊಳ್ಳುವುದನ್ನು ಸಹ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮಂಗಳವಾರ ನಿಮ್ಮ ಮನೆಯ ಸುತ್ತಲೂ ಕೆಂಪು ಹಸು ಏನನ್ನಾದರೂ ತಿನ್ನುವುದನ್ನು ನೀವು ನೋಡಿದರೆ, ಹನುಮಂತನ ಅನಂತ ಆಶೀರ್ವಾದಗಳು ನಿಮ್ಮ ಮೇಲೆ ಇವೆ ಎಂದು ಅರ್ಥಮಾಡಿಕೊಳ್ಳಿ. ಜೊತೆಗೆ ಮಂಗಳವಾರ ಹಸುಗಳಿಗೆ ಆಹಾರ ನೀಡುವುದು ಶುಭ ಎಂದು ಪರಿಗಣಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:29 am, Tue, 24 June 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!