Daily Devotional: ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
ಮಣ್ಣೆತ್ತಿನ ಅಮಾವಾಸ್ಯೆ ಒಂದು ವಿಶೇಷ ಅಮಾವಾಸ್ಯೆಯಾಗಿದ್ದು, ಭೂಮಿ ಮತ್ತು ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತದೆ. ಈ ದಿನ ಪಿತ್ರಾರ್ಪಣೆ, ದೇವತಾ ಪೂಜೆ ಮತ್ತು ಶ್ರೀಸೂಕ್ತ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಉತ್ತರ ಕರ್ನಾಟಕದಲ್ಲಿ ಇದು ಹಬ್ಬದಂತೆ ಸಂಭ್ರಮದಿಂದ ಆಚರಿಸಲ್ಪಡುತ್ತದೆ.
ಬೆಂಗಳೂರು, ಜೂನ್ 25: ಮಣ್ಣೆತ್ತಿನ ಅಮಾವಾಸ್ಯೆ, ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ, ಪ್ರಮುಖವಾಗಿ ಆಚರಿಸಲ್ಪಡುತ್ತಾರೆ. ಈ ದಿನ, ಮಣ್ಣಿನಿಂದ ಮಾಡಿದ ಎರಡು ಎತ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಭೂಮಿ ಮತ್ತು ಎತ್ತುಗಳ ನಡುವಿನ ಅವಿರಾಭಾವ ಸಂಬಂಧವನ್ನು ಇದು ಸಂಕೇತಿಸುತ್ತದೆ. ಗೋವುಗಳು ಭೂಮಿಯಿಂದ ಆಹಾರ ಉತ್ಪಾದಿಸುವ ಮೂಲಕ ಜೀವನವನ್ನು ರಕ್ಷಿಸುತ್ತವೆ ಎಂಬುದನ್ನು ಈ ಆಚರಣೆ ಸ್ಮರಿಸುತ್ತದೆ.
Latest Videos