ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಉತ್ತರ ಪ್ರದೇಶದ ಲಖೀಂಪುರ ಖೇರಿಯ ಗ್ರಾಮಸ್ಥರು ಕಪ್ಪು ಚಿರತೆಯ ಮೇಲೆ ಇಟ್ಟಿಗೆ ಎಸೆಯುತ್ತಿದ್ದಂತೆ ಇಟ್ಟಿಗೆ ಗೂಡುಗಳಲ್ಲಿ ಕಪ್ಪು ಚಿರತೆಯೊಂದಿಗೆ ವ್ಯಕ್ತಿ ಸೆಣಸಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಗಾಯಗೊಂಡ ಚಿರತೆ ದಾಳಿ ಮಾಡಿದಾಗ ಆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಷ್ಟು ಅಪಾಯಕ್ಕೆ ಸಿಲುಕಿದ್ದು, ಐವರು ಗಾಯಗೊಂಡರು.
ಲಖೀಂಪುರ ಖೇರಿ, ಜೂನ್ 24: ಉತ್ತರ ಪ್ರದೇಶದ (Uttar Pradesh) ಲಖಿಂಪುರ ಖೇರಿಯ ಧೌರ್ಪುರ್ ಅರಣ್ಯ ಪ್ರದೇಶದ ಜುಗ್ನುಪುರ್ ಪ್ರದೇಶದ ಇಟ್ಟಿಗೆ ಗೂಡುಗಳಲ್ಲಿ ಕೆಲಸಗಾರರ ಮೇಲೆ ಕಪ್ಪು ಚಿರತೆಯೊಂದು ದಾಳಿ ಮಾಡಿತು. ಈ ವೇಳೆ ಯುವಕನೊಬ್ಬ ಚಿರತೆಯನ್ನು ಕೆಡವಿ ಅದರ ಜೊತೆ ಸೆಣಸಾಡಿದ್ದಾನೆ. ಈ ಗದ್ದಲದಿಂದ ಎಚ್ಚೆತ್ತ ಗ್ರಾಮಸ್ಥರು ಒಟ್ಟುಗೂಡಿ ಕಪ್ಪು ಚಿರತೆಯ (Black Leopard) ಮೇಲೆ ಇಟ್ಟಿಗೆಗಳು ಮತ್ತು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಘಟನೆಯ ವಿಡಿಯೋದಲ್ಲಿ ಕಪ್ಪು ಚಿರತೆ ಯುವಕನ ಹಿಡಿತದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ನೋಡಬಹುದು. ಗ್ರಾಮಸ್ಥರು ಆ ಚಿರತೆಯ ಮೇಲೆ ಇಟ್ಟಿಗೆಗಳನ್ನು ಎಸೆಯುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos