Explainer: ಎಂಆರ್​ಎಫ್ ಷೇರು ಬೆಲೆ 1 ಲಕ್ಷಕ್ಕೆ ಏರಲು ಏನು ಕಾರಣ?; 5 ಅಂಶಗಳು

Reasons For MRF Share Record: 2012ರಲ್ಲಿ 10,000 ರೂ ಇದ್ದ ಎಂಆರ್​ಎಫ್ ಷೇರುಬೆಲೆ 11 ವರ್ಷದಲ್ಲಿ 1,00,000 ರೂ ಆಗಿದ್ದು ಸೋಜಿಗವೇ ಸರಿ. ಈ ಷೇರಿಗೆ ಯಾಕಿಷ್ಟು ಬೇಡಿಕೆ? ಎಂಆರ್​ಎಫ್​ಗೆ ಇದು ಸಾಧ್ಯವಾಗಿದ್ದು ಹೇಗೆ?

Explainer: ಎಂಆರ್​ಎಫ್ ಷೇರು ಬೆಲೆ 1 ಲಕ್ಷಕ್ಕೆ ಏರಲು ಏನು ಕಾರಣ?; 5 ಅಂಶಗಳು
ಎಂಆರ್​ಎಫ್
Follow us
|

Updated on: Jun 14, 2023 | 4:13 PM

ಮದ್ರಾಸ್ ರಬ್ಬರ್ ಫ್ಯಾಕ್ಟರಿ, ಅಥವಾ ಎಂಆರ್​ಎಫ್ ಬ್ರ್ಯಾಂಡ್ ಹೆಸರು ಕೇಳದಿರುವವರು ವಿರಳ. ಅಷ್ಟರಮಟ್ಟಕ್ಕೆ ಜನಮಾನದಲ್ಲಿ ಎಂಆರ್​ಎಫ್ ನೆಲಸಿದೆ. ನಿನ್ನೆ (ಜೂನ್ 13) ಎಂಆರ್​ಎಫ್ ಸಂಸ್ಥೆಯ ಷೇರು ಬೆಲೆ 1,00,000 ರೂ ಮಟ್ಟ ಮುಟ್ಟಿತ್ತು. ಭಾರತದ ಷೇರೊಂದು 1 ಲಕ್ಷ ರೂ ಬೆಲೆ ಪಡೆದದ್ದು ಇದೇ ಮೊದಲು. 1 ಲಕ್ಷ ರೂ ಷೇರು ಬೆಲೆ ಹೊಂದಿದ ಏಕೈಕ ಕಂಪನಿ ಎಂಆರ್​ಎಫ್. ಟಯರ್ ತಯಾರಿಸುವ ಒಂದು ಸಂಸ್ಥೆಯ ಷೇರಿಗೆ ಇಷ್ಟೊಂದು ಬೆಲೆಯಾ ಎಂದು ಹಲವು ಅಚ್ಚರಿ ಪಟ್ಟಿರುವುದುಂಟು. 2012ರಲ್ಲಿ 10,000 ರೂ ಇದ್ದ ಎಂಆರ್​ಎಫ್ ಷೇರುಬೆಲೆ 11 ವರ್ಷದಲ್ಲಿ 1,00,000 ರೂ ಆಗಿದ್ದು ಸೋಜಿಗವೇ ಸರಿ. ಈ ಷೇರಿಗೆ ಯಾಕಿಷ್ಟು ಬೇಡಿಕೆ? ಎಂಆರ್​ಎಫ್​ಗೆ ಇದು ಸಾಧ್ಯವಾಗಿದ್ದು ಹೇಗೆ?

ಎಂಆರ್​ಎಫ್ ಷೇರು ಬೆಲೆ ಈ ಮಟ್ಟಕ್ಕೆ ಏರಲು ಏನು ಕಾರಣ?

  1. ಷೇರು ವಿಭಜನೆ ಮಾಡದೇ ಇರುವುದು
  2. ಪ್ರೊಮೋಟರ್​ಗಳ ಬಳಿ ಹೆಚ್ಚಿನ ಷೇರುಪಾಲು ಇರುವುದು
  3. ಎಂಆರ್​ಎಫ್ ಕಂಪನಿ ಸತತವಾಗಿ ಲಾಭ ಮಾಡುತ್ತಾ ಬಂದಿರುವುದು
  4. ಎಂಆರ್​ಎಫ್ ಇರುವ ಟಯರ್ ಉದ್ಯಮಕ್ಕೆ ಸದಾ ಬೇಡಿಕೆ ಇರುವುದು.
  5. ಎಂಆರ್​ಎಫ್​ನ ಬ್ರ್ಯಾಂಡ್ ಬಹಳ ಗಟ್ಟಿಯಾಗಿರುವುದು

ಇದನ್ನೂ ಓದಿMRF Record: 1 ಷೇರಿಗೆ 1 ಲಕ್ಷ ರೂ; ಎಂಆರ್​ಎಫ್ ಹೊಸ ದಾಖಲೆ; ಕುಬೇರರಾದರು ಷೇರುದಾರರು

ಈ ಮೇಲಿನ ಮೂರು ಅಂಶಗಳು ಎಂಆರ್​ಎಫ್ ಹಾಗೂ ಅದರ ಷೇರಿಗೆ ಒಳ್ಳೆಯ ಬೇಡಿಕೆ ತಂದುಕೊಟ್ಟಿರುವುದು ಹೌದು. ಅದರಲ್ಲೂ ಷೇರು ವಿಭಜನೆ ಆಗದೇ ಇರುವುದು ಇಲ್ಲಿ ಮುಖ್ಯ. ಹಲವು ಐಟಿ ಸಂಸ್ಥೆಗಳು ಆಗಾಗ್ಗೆ ಷೇರು ವಿಭಜನೆ ಅಥವಾ ಸ್ಟಾಕ್ ಸ್ಪ್ಲಿಟ್ ಮಾಡುತ್ತಿರುತ್ತವೆ. ಇನ್ಫೋಸಿಸ್ ಸಂಸ್ಥೆ 1993ರಿಂದೀಚೆ ಏಳೆಂಟು ಬಾರಿ ಷೇರು ವಿಭಜನೆ ಮಾಡಿದೆ. ಈಗ ಇನ್ಫೋಸಿಸ್ ಷೇರು ಬೆಲೆ 1,300 ರೂ ಆಸುಪಾಸಿನಲ್ಲಿದೆ. ಇತ್ತೀಚೆಗೆ ಇದರ ಬೆಲೆ ತುಸು ಕಡಿಮೆ ಆಗಿರುವುದು ಹೌದು. ಒಂದು ಹಂತದಲ್ಲಿ 1,900 ರೂವರೆಗೂ ಹೋಗಿತ್ತು. ಅದರ ಒಟ್ಟಾರೆ ಷೇರು ಸಂಪತ್ತು 7.9 ಲಕ್ಷ ಕೋಟಿ ರೂವರೆಗೂ ಹೋಗಿತ್ತು. ಇನ್ಫೋಸಿಸ್ ಸಂಸ್ಥೆ ಷೇರು ವಿಭಜನೆ ಮಾಡದೇ ಹೋಗಿದ್ದರೆ ಅದರ ಒಂದು ಷೇರು ಬೆಲೆ ಸುಲಭವಾಗಿ 2 ಲಕ್ಷ ರೂ ಗಡಿಯನ್ನಾದರೂ ದಾಟಿರುತ್ತಿತ್ತು. ಈ ಹಿನ್ನೆಲೆಯಿಂದ ನೋಡಿದಾಗ ಎಂಆರ್​ಎಫ್​ನ ಷೇರು ಇಷ್ಟು ಬೆಲೆ ಪಡೆಯಲು ಹೇಗೆ ಸಾಧ್ಯವಾಯಿತು ಎಂದು ಅಂದಾಜಿಸಬಹುದು.

ಎಂಆರ್​ಎಫ್ ಯಾಕೆ ಷೇರು ವಿಭಜನೆ ಮಾಡಿಲ್ಲ?

ಒಂದು ಕಂಪನಿಯು ತನ್ನ ಷೇರನ್ನು ವಿಭಜಿಸಲು ಕಾರಣವೆಂದರೆ ಕಡಿಮೆ ಬೆಲೆಯ ಹೆಚ್ಚು ಷೇರುಗಳನ್ನು ಸೃಷ್ಟಿಸುವುದು. ಇದರಿಂದ ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡುವವರಿಗೆ ಸುಲಭ ದರದಲ್ಲಿ ಷೇರು ಸಿಗುತ್ತದೆ. ಷೇರುವಿಭಜನೆ ಮೂಲಕ ಷೇರು ಸಂಖ್ಯೆ ಏರಿದರೆ ಕಂಪನಿಗೆ ನೇರವಾಗಿ ಹಣಕಾಸು ಲಾಭ ಆಗುವುದಿಲ್ಲ. ಆದರೆ, ಹೆಚ್ಚು ಹೂಡಿಕೆದಾರರು ಸಿಗುತ್ತಾರೆ. ಇದರಿಂದ ಷೇರುವಹಿವಾಟು ಹೆಚ್ಚುತ್ತದೆ.

ಇದನ್ನೂ ಓದಿInspiring Mappillai: ಬಲೂನು ಮಾರುತ್ತಿದ್ದ ವ್ಯಕ್ತಿ ವಿಶ್ವಪ್ರಸಿದ್ಧ ಎಂಆರ್​ಎಫ್ ಒಡೆಯರಾದ ರೋಚಕ ಮತ್ತು ಹೃದಯಸ್ಪರ್ಶಿ ಕಥೆ

ಆದರೆ, ಷೇರುಗಳ ಬೆಲೆ ಕಡಿಮೆ ಇದ್ದರೆ ಸ್ಪೆಕ್ಯುಲೇಟರ್​ಗಳೂ ಷೇರುಗಳನ್ನು ಖರೀದಿಸಿ ಅದರ ಬೆಲೆ ಕುಂದುವಂತೆ ಮಾಡಬಹುದು. ಈ ಕಾರಣಕ್ಕೆ ಕೆಲ ಕಂಪನಿಗಳು ಷೇರುವಿಭಜನೆ ಮಾಡುವ ಗೋಜಿಗೆ ಹೋಗುವುದಿಲ್ಲ. ಎಂಆರ್​ಎಫ್ ಕೂಡ ಇದೇ ಕಾರಣಕ್ಕೆ ಆ ಕ್ರಮ ಕೈಗೊಂಡಿಲ್ಲದೇ ಇರಬಹುದು. ಹೆಚ್ಚು ಬೆಲೆ ಇರುವ ಷೇರುಗಳನ್ನು ಸ್ಪೆಕ್ಯುಲೇಟರ್​ಗಳು ಸಾಮಾನ್ಯವಾಗಿ ಮುಟ್ಟುವುದಿಲ್ಲ. ಪ್ರಾಮಾಣಿಕ ಹೂಡಿಕೆದಾರರು ಮಾತ್ರ ಬರುತ್ತಾರೆ.

ಎಂಆರ್​ಎಫ್ ಷೇರುಬೆಲೆ ಹೆಚ್ಚಳಕ್ಕೆ ಬೇರೆ ಕಾರಣಗಳು

ಎಂಆರ್​ಎಫ್​ನಲ್ಲಿ ಸಂಸ್ಥಾಪಕರ ಕುಟುಂಬ ಸದಸ್ಯರು ಸೇರಿದಂತೆ ಪ್ರೊಮೋಟರ್​ಗಳ ಪಾಲಿನ ಷೇರುಗಳೇ ಅತ್ಯಧಿಕ ಇವೆ. ಸಾರ್ವಜನಿಕರ ಬಳಿ ಇರುವ ಷೇರಿನ ಪ್ರಮಾಣ ಕಡಿಮೆ ಇದೆ. ಇದೂ ಕೂಡ ಎಂಆರ್​ಎಫ್ ಷೇರು ಬೆಲೆ ಹೆಚ್ಚಳಕ್ಕೆ ಪರೋಕ್ಷವಾಗಿ ಕಾರಣವಾಗಿರಬಹುದು.

ಇದರ ಜೊತೆಗೆ ಎಂಆರ್​ಎಫ್​ನ ಬ್ರ್ಯಾಂಡ್ ವ್ಯಾಲ್ಯೂ ಬಹಳ ಉತ್ತಮವಾಗಿದೆ. ಹಿಂದೆಲ್ಲಾ ಕ್ರಿಕೆಟ್ ಟೂರ್ನಿಗಳಲ್ಲಿ ಪ್ರಾಯೋಜಕರಾಗಿದ್ದ ಎಂಆರ್​ಎಫ್ ವ್ಯಾವಹಾರಿಕವಾಗಿಯೂ ಗಟ್ಟಿಯಾಗಿದೆ. ಭಾರತದ ಟಯರ್ ಉದ್ಯಮದಲ್ಲಿ ಅದು ಶೇ. 30ರಷ್ಟು ಪ್ರಾಬಲ್ಯ ಹೊಂದಿದೆ. ಸತತವಾಗಿ ಅದು ಲಾಭ ಮಾಡುತ್ತಾ ಬಂದಿದೆ. ಇವೆಲ್ಲವೂ ಸೇರಿ ಎಂಆರ್​ಎಫ್​ನ ಷೇರಿಗೆ ಬೇಡಿಕೆ ಹೆಚ್ಚುತ್ತಾ ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?