AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MRF Record: 1 ಷೇರಿಗೆ 1 ಲಕ್ಷ ರೂ; ಎಂಆರ್​ಎಫ್ ಹೊಸ ದಾಖಲೆ; ಕುಬೇರರಾದರು ಷೇರುದಾರರು

MRF Share Price Reach Rs 1,00,000: ಎಂಆರ್​ಎಫ್​ನ ಒಂದು ಷೇರುಬೆಲೆ ಜೂನ್ 13ರ ವಹಿವಾಟಿನ ವೇಳೆ 1,00,000 ರೂ ಮುಟ್ಟಿದೆ. ಷೇರುಬೆಲೆ ಈ ಮಟ್ಟ ತಲುಪಿದ ಮೊದಲ ಭಾರತೀಯ ಕಂಪನಿ ಅದಾಗಿದೆ.

MRF Record: 1 ಷೇರಿಗೆ 1 ಲಕ್ಷ ರೂ; ಎಂಆರ್​ಎಫ್ ಹೊಸ ದಾಖಲೆ; ಕುಬೇರರಾದರು ಷೇರುದಾರರು
ಎಂಆರ್​ಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 13, 2023 | 5:02 PM

Share

ನವದೆಹಲಿ: ಭಾರತದ ನಂಬರ್ ಒನ್ ಟಯರ್ ಕಂಪನಿ ಮದ್ರಾಸ್ ರಬ್ಬರ್ ಫ್ಯಾಕ್ಟರಿ ಅಥವಾ ಎಂಆರ್​ಎಫ್ (MRF) ಹೊಸ ಮೈಲಿಗಲ್ಲು ಮುಟ್ಟಿದೆ. ಅದರ ಒಂದು ಷೇರುಬೆಲೆ (Share Price) ಜೂನ್ 13ರ ವಹಿವಾಟಿನ ವೇಳೆ 1,00,000 ರೂ ಮುಟ್ಟಿದೆ. ಷೇರುಬೆಲೆ ಈ ಮಟ್ಟ ತಲುಪಿದ ಮೊದಲ ಭಾರತೀಯ ಕಂಪನಿ ಎಂಆರ್​ಎಫ್ ಆಗಿದೆ. ಜೂನ್ 13, ಮಂಗಳವಾರದ ವಹಿವಾಟಿನ ವೇಳೆ ಎಂಆರ್​ಎಫ್ ಷೇರು ಬೆಲೆ 1,00,439 ರೂವರೆಗೂ ಏರಿತ್ತು. ಸಂಜೆಯ ವೇಳೆ ಬೆಲೆ 99,900 ರೂಗೆ ಇಳಿದಿತ್ತು. ಆದರೂ 1 ಲಕ್ಷ ರೂ ಮಟ್ಟಿದ ಮೈಲಿಗಲ್ಲು ಮುಟ್ಟಿದ ದಾಖಲೆ ಎಂಆರ್​ಎಫ್​ನದ್ದಾಗಿರುವುದು ಹೌದು.

11 ವರ್ಷದ ಹಿಂದೆ ಎಂಆರ್​ಎಫ್ ಷೇರಿನಲ್ಲಿ ನೀವು 1 ಲಕ್ಷ ಹೂಡಿಕೆ ಮಾಡಿದ್ದರೆ ಇವತ್ತು ನಿಮಗೆ ಸಿಗುತ್ತಿತ್ತು 10 ಲಕ್ಷ ರೂ

ಎಂಆರ್​ಎಫ್ ಸಂಸ್ಥೆ ಕಳೆದ 10-12 ವರ್ಷದಲ್ಲಿ ಅಕ್ಷರಶಃ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಬೆಳೆದಿದೆ. 2012 ಫೆಬ್ರುವರಿ 21ರಂದು ಎಂಆರ್​ಎಫ್​ನ ಷೇರುಬೆಲೆ ಮೊದಲ ಬಾರಿಗೆ 10,000 ರೂ ದಾಟಿತ್ತು. 2021 ಜನವರಿ 20ರಂದು 90,000 ರೂ ಮೈಲಿಗಲ್ಲು ಮುಟ್ಟಿತ್ತು. 9 ವರ್ಷದಲ್ಲಿ ಅದರ ಷೇರುಬೆಲೆ 9 ಪಟ್ಟು ಹೆಚ್ಚಾಗಿತ್ತು. ಅಲ್ಲಿಂದೀಚೆ ಎರಡು ವರ್ಷದಲ್ಲಿ ಇನ್ನಷ್ಟು 10,000 ರೂ ಹೆಚ್ಚಾಗಿ 1,00,000 ರೂ ಬೆಲೆ ಮುಟ್ಟಿದೆ.

ಇದನ್ನೂ ಓದಿInspiring Mappillai: ಬಲೂನು ಮಾರುತ್ತಿದ್ದ ವ್ಯಕ್ತಿ ವಿಶ್ವಪ್ರಸಿದ್ಧ ಎಂಆರ್​ಎಫ್ ಒಡೆಯರಾದ ರೋಚಕ ಮತ್ತು ಹೃದಯಸ್ಪರ್ಶಿ ಕಥೆ

ಒಂದು ವೇಳೆ ನೀವು 2012ರ ಫೆಬ್ರುವರಿ ತಿಂಗಳಲ್ಲಿ ಅದರ ಷೇರುಬೆಲೆ 10,000 ರೂ ಇದ್ದಾಗ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ನಿಮ್ಮ ಷೇರುಸಂಪತ್ತು 10 ಲಕ್ಷ ರೂ ಆಗುತ್ತಿತ್ತು.

ಎಂಆರ್​ಎಫ್ ಷೇರು ಬೆಲೆ ಇಷ್ಟು ದೊಡ್ಡದಾಗಲು ಕಾರಣವಿದೆ. ಎಂಆರ್​ಎಫ್ ಯಾವತ್ತೂ ಕೂಡ ತನ್ನ ಷೇರುವಿಭಜನೆ ಮಾಡಿಲ್ಲ, ಅಥವಾ ಬೋನಸ್ ಷೇರುಗಳನ್ನು ವಿತರಿಸಿಲ್ಲ. ಹೀಗಾಗಿ, ಅದರ ಷೇರುಬೆಲೆ ಅಗಾಧ ಎನಿಸಿದೆ. ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಸಂಸ್ಥೆಗಳು ತಮ್ಮ ಷೇರುಬೆಲೆ ಒಂದು ಹಂತಕ್ಕೆ ಹೋದ ಬಳಿಕ ಸ್ಪ್ಲಿಟ್ ಮಾಡುತ್ತವೆ. 10,000 ರೂ ಬೆಲೆ ಇರುವ ಷೇರನ್ನು ಎರಡಾಗಿ ವಿಭಜಿಸಿದರೆ ತಲಾ 5,000 ರೂಗಳ ಎರಡು ಷೇರುಗಳು ಬರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ