AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mass Resignation: ಟಿಸಿಎಸ್​ನಲ್ಲಿ ಮಹಿಳೆಯರ ಸಾಮೂಹಿಕ ರಾಜೀನಾಮೆ; ವರ್ಕ್ ಫ್ರಂ ಹೋಂ ಬೇಡ ಎಂದಿದ್ದಕ್ಕೆ ನಡೆಯಿತಾ ಮಾಸ್ ರೆಸಿಗ್ನೇಶನ್?

Female Employees Leaving TCS: ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸಿದ ಬೆನ್ನಲ್ಲೇ ಟಿಸಿಎಸ್​ನಲ್ಲಿ ಮಾಸ್ ರೆಸಿಗ್ನೇಶನ್ ನಡೆದಿದೆ. ಅದೂ ರಾಜೀನಾಮೆ ನೀಡುತ್ತಿರುವವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ.

Mass Resignation: ಟಿಸಿಎಸ್​ನಲ್ಲಿ ಮಹಿಳೆಯರ ಸಾಮೂಹಿಕ ರಾಜೀನಾಮೆ; ವರ್ಕ್ ಫ್ರಂ ಹೋಂ ಬೇಡ ಎಂದಿದ್ದಕ್ಕೆ ನಡೆಯಿತಾ ಮಾಸ್ ರೆಸಿಗ್ನೇಶನ್?
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 13, 2023 | 3:38 PM

ನವದೆಹಲಿ: ಭಾರತದ ಅತಿದೊಡ್ಡ ಐಟಿ ಸಂಸ್ಥೆ ಎನಿಸಿರುವ ಮತ್ತು 6 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಟ್ಟಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS- Tata Consultancy Services) ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಮೂರು ವರ್ಷಗಳಿಂದ ವರ್ಕ್ ಫ್ರಂ ಹೋಮ್​ನಲ್ಲಿದ್ದ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸಿದ ಬೆನ್ನಲ್ಲೇ ಮಾಸ್ ರೆಸಿಗ್ನೇಶನ್ ನಡೆದಿದೆ. ಅದೂ ರಾಜೀನಾಮೆ ನೀಡುತ್ತಿರುವವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಟಿಸಿಎಸ್ ಸೇರಿದಂತೆ ಎಲ್ಲಾ ಐಟಿ ಕಂಪನಿಗಳು ತಮ್ಮ ಉದ್ಯೋಗಗಳಿಗೆ ಮನೆಯಿಂದ ಕೆಲಸ ಮಾಡಲು ಅನುಮತಿಸಿತ್ತು. ಈಗ ಜಗತ್ತಿನಲ್ಲೆಡೆ ಕಂಪನಿಗಳು ವರ್ಕ್ ಫ್ರಂ ಹೋಂ ನಿಲ್ಲಿಸಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸುತ್ತಿವೆ. ಉದ್ಯೋಗಿಗಳಿಗೆ ಕೆಲಸ ಮಾಡಲು ಪ್ರಶಸ್ತ ವಾತಾವರಣ ಹೊಂದಿದೆ ಎಂಬ ಕಾರಣಕ್ಕೆ ಖ್ಯಾತವಾಗಿರುವ ಟಿಸಿಎಸ್ ಕೂಡ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನು ನಿಲ್ಲಿಸಿದೆ. ಆದರೆ, ಮಹಿಳಾ ಉದ್ಯೋಗಿಗಳಿಗೆ ಇದು ಅಪಥ್ಯವಾದಂತಿದೆ.

ಟಿಸಿಎಸ್​ನ ಒಟ್ಟು ಉದ್ಯೋಗಿಗಳಲ್ಲಿ ಮಹಿಳೆಯರ ಸಂಖ್ಯೆ ಶೇ. 35ಕ್ಕಿಂತ ಹೆಚ್ಚಿದೆ. ಟಿಸಿಎಸ್​ನ ಉನ್ನತ ಸ್ತರ ಉದ್ಯೋಗಗಳಲ್ಲಿ ಮಹಿಳೆಯರೇ ಮುಕ್ಕಾಲು ಪಾಲು ಇದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಆದ್ಯತೆ ಕೊಡುವ ಐಟಿ ಕಂಪನಿಗಳಲ್ಲಿ ಟಿಸಿಎಸ್ ಕೂಡ ಒಂದು. ಈಗ ಎಷ್ಟು ಮಂದಿ ರಾಜೀನಾಮೆ ಕೊಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಕಳೆದ ವರ್ಷ ಟಿಸಿಎಸ್​ನಲ್ಲಿ ಶೇ. 20ರಷ್ಟು ಉದ್ಯೋಗಿಗಳು ಕೆಲಸ ಬಿಟ್ಟಿದ್ದರು.

ಇದನ್ನೂ ಓದಿIndian CEOs: ಭಾರತೀಯರನ್ನು ಸಿಇಒಗಳನ್ನಾಗಿ ನೇಮಿಸಿ; ಭಾರತೀಯರು ಪಾಲುದಾರರಾಗಲಿ: ಚೀನೀ ಸ್ಮಾರ್ಟ್​ಫೋನ್ ಕಂಪನಿಗಳಿಗೆ ಭಾರತ ತಾಕೀತು

ವರ್ಕ್ ಫ್ರಂ ಹೋಮ್ ನಿಂತಿದ್ದಕ್ಕೆ ಸಾಮೂಹಿಕ ರಾಜೀನಾಮೆ ಕೊಟ್ಟರಾ?

ನ್ಯೂಸ್18ನಲ್ಲಿ ಬಂದಿರುವ ವರದಿ ಪ್ರಕಾರ ಟಿಸಿಎಸ್​ನಲ್ಲಿ ಮಹಿಳಾ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲು ವರ್ಕ್ ಫ್ರಂ ಹೋಂ ಸೌಲಭ್ಯ ನಿಲ್ಲಿಸಿದ್ದು ಪ್ರಮುಖ ಕಾರಣ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಹೇಳಿದ್ದಾರೆ. ಕೆಲಸದಲ್ಲಿ ತಾರತಮ್ಯವಾಗಿ ಮಹಿಳೆಯರು ರಾಜೀನಾಮೆ ನೀಡಿರುವ ಸಾಧ್ಯತೆಯನ್ನು ಮಿಲಿಂದ್ ತಳ್ಳಿಹಾಕಿದ್ದಾರೆ. ಟಿಸಿಎಸ್​ನಲ್ಲಿ ಹಿಂದೆಲ್ಲ ಮಹಿಳೆಯರು ರಾಜೀನಾಮೆ ನೀಡುವ ಪ್ರಮಾಣ ಪುರುಷ ಉದ್ಯೋಗಿಗಳಿಗೆ ಹೋಲಿಸಿದರೆ ಕಡಿಮೆಯೇ. ಈ ಬಾರಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆಗೆ ಬೇರೆ ಬೇರೆ ಕಾರಣಗಳಿರಬಹುದಾದರೂ ಪ್ರಮುಖ ಕಾರಣ ಮಾತ್ರ ವರ್ಕ್ ಫ್ರಂ ಹೋಂ ರದ್ದತಿ ಎಂಬುದು ಮಿಲಿಂದ್ ವಾದ.

ವರ್ಕ್ ಫ್ರಂ ಹೋಮ್ ವಿಚಾರದಲ್ಲಿ ಕಂಪನಿ ವರ್ಸಸ್ ಉದ್ಯೋಗಿಗಳು

ಕೋವಿಡ್ ಕಾರಣಕ್ಕೆ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡಲಾಗಿತ್ತು. ಹಲವು ಸಮೀಕ್ಷೆಗ ಪ್ರಕಾರ, ಈ ಸೌಲಭ್ಯದಿಂದಾಗಿ ಕೆಲಸದ ಔಟ್​ಪುಟ್ ಹೆಚ್ಚಾಗಿದೆ. ಕಂಪನಿಗಳಿಗೂ ಕೆಲವೊಂದಿಷ್ಟು ಆಡಳಿತಾತ್ಮಕ ವೆಚ್ಚ ತಗ್ಗಿದೆ ಎನ್ನಲಾಗಿತ್ತು. ಆದರೆ, ಮನೆಯಿಂದ ಕೆಲಸ ಮಾಡಿದರೆ ತಂಡಗಳನ್ನು ನಿರ್ವಹಿಸುವುದು ಕಷ್ಟ ಎಂಬ ವಾದ ಕಂಪನಿಯ ಮ್ಯಾನೇಜ್ಮೆಂಟ್​ಗಳದ್ದು. ಹಲವು ಸಿಇಒಗಳು ವರ್ಕ್ ಫ್ರಂ ಹೋಮ್ ಅನ್ನು ಅಪರಾಧವೆಂಬಂತೆ ಪರಿಗಣಿಸಿರುವುದುಂಟು.

ಇದನ್ನೂ ಓದಿInspiration: ವಯಸ್ಸು 90 ವರ್ಷ… ಕೋಟಿ ಕೋಟಿಯ ಕುಬೇರನಾದರೂ ನಿತ್ಯ ಕಚೇರಿಗೆ ಹೋಗಿ ಕೆಲಸ; ಮೊಮ್ಮಕ್ಕಳಿಗೆ ಅಧಿಕಾರ ಬಿಟ್ಟುಕೊಡುವವರೆಗೂ ಸುಮ್ಮನಿರದು ಈ ಹಿರಿಜೀವ

ಆದರೆ, ಹೆಚ್ಚಿನ ಉದ್ಯೋಗಿಗಳು ಈಗಲೂ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನೇ ಇಷ್ಟಪಡುತ್ತಾ ಇದ್ದಾರಂತೆ. ಮ್ಯಾನೇಜ್ಮೆಂಟ್​ನ ಬಲವಂತಕ್ಕೆ ಕಚೇರಿಗೆ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಒಂದೆರಡು ಸಮೀಕ್ಷೆಗಳು ಹೇಳಿರುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ