K Krithivasan: ಟಿಸಿಎಸ್ ಹೊಸ ಸಿಇಒ ಕೆ ಕೃತಿವಾಸನ್ ಸಂಬಳ, ಅನುಭವ ಇತ್ಯಾದಿ ವಿವರ

TCS CEO Krithivasan's Salary Package: ಟಿಸಿಎಸ್ ಸಂಸ್ಥೆಯ ಐದನೇ ಸಿಇಒ ಹಾಗೂ ಅತಿಹಿರಿಯ ವಯಸ್ಸಿನ ಸಿಇಒ ಆಗಿರುವ ಕೆ ಕೃತಿವಾಸನ್ ಅವರು ಒಂದು ವರ್ಷಕ್ಕೆ 1.9 ಕೋಟಿ ರೂ ಬೇಸಿಕ್ ಸ್ಯಾಲರಿ ಜೊತೆಗೆ ಇದರ ಭತ್ಯೆ ಪಡೆಯಲಿದ್ದಾರೆ.

K Krithivasan: ಟಿಸಿಎಸ್ ಹೊಸ ಸಿಇಒ ಕೆ ಕೃತಿವಾಸನ್ ಸಂಬಳ, ಅನುಭವ ಇತ್ಯಾದಿ ವಿವರ
ಟಿಸಿಎಸ್ ಸಿಇಒ ಕೆ ಕೃತಿವಾಸನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 16, 2023 | 4:29 PM

ಬೆಂಗಳೂರು: ಭಾರತದ ಅತಿದೊಡ್ಡ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ನಲ್ಲಿ (TCS) ಇತ್ತೀಚೆಗಷ್ಟೇ ಸಿಇಒ ಬದಲಾಗಿದ್ದಾರೆ. 58 ವರ್ಷದ ಕೆ ಕೃತಿವಾಸನ್ (K Krithivasan) ಅವರು ಹೊಸ ಸಿಇಒ ಆಗಿದ್ದಾರೆ. 52 ವರ್ಷದ ರಾಜೇಶ್ ಗೋಪಿನಾಥನ್ ಸ್ಥಾನವನ್ನು ಕೃತಿವಾಸನ್ ತುಂಬುತ್ತಿದ್ದಾರೆ. ಭಾರತದಲ್ಲಿ ಅತಿಹೆಚ್ಚು ಸ್ಯಾಲರಿ ಪ್ಯಾಕೇಜ್ ಪಡೆಯುವ ಸಿಇಒಗಳ ಪಟ್ಟಿಯಲ್ಲಿ ರಾಜೇಶ್ ಗೋಪಿನಾಥನ್ 5ನೇಯವರಾಗಿದ್ದರು. ಈಗ ಅವರು ಸೆಪ್ಟೆಂಬರ್ 16ರವರೆಗೂ ಟಿಸಿಎಸ್​ನಲ್ಲಿ ಸಲಹೆಗಾರರಾಗಿ ಉಳಿಯಲಿದ್ದಾರೆ. ಹಿಂದಿನ ಸಿಇಒ ಮತ್ತು ಹೊಸ ಸಿಇಒ ಇಬ್ಬರೂ ಕೂಡ ಟಿಸಿಎಸ್​ನ ಹಳೆಯ ಉದ್ಯೋಗಿಗಳೇ. ಹಲವಾರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಾ ಬಂದಿದ್ದವರು. ರಾಜೇಶ್ ಗೋಪಿನಾಥನ್ 22 ವರ್ಷಗಳ ಕಾಲ ಟಿಸಿಎಸ್​ನಲ್ಲಿ ಇದ್ದಾರೆ. ಹೊಸ ಸಿಇಒ ಕೆ ಕೃತಿವಾಸನ್ 30ಕ್ಕೂ ಹೆಚ್ಚು ವರ್ಷಗಳಿಂದ ಟಾಟಾ ಗ್ರೂಪ್​ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ರಾಜೇಶ್ ಗೋಪಿನಾಥನ್ ಟಿಸಿಎಸ್​ನ ಅತಿಕಿರಿಯ ವಯಸ್ಸಿನ ಸಿಇಒ ಎನಿಸಿದರೆ, ಕೃತಿವಾಸನ್ ಅತಿಹಿರಿಯ ವಯಸ್ಸಿನ ಸಿಇಒ ಎನಿಸಿದ್ದಾರೆ.

ಹಿಂದಿನ ಸಿಇಒ ಅವರಷ್ಟೇ ಸಂಬಳ ಕೃತಿವಾಸ್​ಗೂ?

ರಾಜೇಶ್ ಗೋಪಿನಾಥನ್ 2022-23ರ ಹಣಕಾಸು ವರ್ಷದಲ್ಲಿ ಬೇಸಿಕ್ ಸ್ಯಾಲರಿ ವರ್ಷಕ್ಕೆ 1.7 ಕೋಟಿ ರೂ ಇತ್ತು. ಬೇರೆ ಭತ್ಯೆ ಎಲ್ಲಾ ಸೇರಿ ಒಂದು ವರ್ಷದಲ್ಲಿ ಅವರ ಸ್ಯಾಲರಿ ಪ್ಯಾಕೇಜ್ 29.16 ಕೋಟಿ ರೂನಷ್ಟಿದೆ.

ಇದನ್ನೂ ಓದಿApple vs India GDP: ಆ್ಯಪಲ್ ಷೇರುಸಂಪತ್ತು 127 ದೇಶಗಳ ಜಿಡಿಪಿಗೆ ಸಮ; ಟಾಪ್-100 ಪಟ್ಟಿಯಲ್ಲಿ ಅಮೆರಿಕದವೇ 62 ಕಂಪನಿಗಳು; ಭಾರತದ್ದು ಎಷ್ಟಿವೆ?

ಇನ್ನು, ಎನ್ ಕ್ರುದಿವಾಸನ್ ಅವರ ಬೇಸಿಕ್ ಸ್ಯಾಲರಿ ತಿಂಗಳಿಗೆ 10 ಲಕ್ಷ ರೂ ಇದೆ. ಅಂದರೆ ವರ್ಷಕ್ಕೆ 1.2 ಕೋಟಿ ರೂನಷ್ಟಿದೆ. ಸಿಇಒ ಆಗಿ ಬಡ್ತಿ ಪಡೆದ ಬಳಿಕ ಅವರ ಸಂಬಳ ವರ್ಷಕ್ಕೆ 1.9 ಕೋಟಿ ರೂಗೆ ಏರಿರಬಹುದು. ಈ ಸಂಬಳದ ಜೊತೆಗೆ ಅವರಿಗೆ ಬೇರೆ ಬೇರೆ ಭತ್ಯೆ, ಪರಿಹಾರಗಳು ಸಿಗುತ್ತವೆ. ಹಿಂದಿನ ಸಿಇಒ ರಾಜೇಶ್ ಗೋಪಿನಾಥನ್ ಸಿಗುತ್ತಿದ್ದಷ್ಟೇ ಪ್ಯಾಕೇಜ್ ಕೃತಿವಾಸನ್​ಗೂ ಲಭಿಸಲಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಲ್ಲಿ ಬಹುತೇಕ ಎಲ್ಲಾ ಎಕ್ಸಿಕ್ಯೂಟಿವ್ಸ್​ಗೂ ಒಳ್ಳೆಯ ಸಂಬಳ ಇದೆ. ಚೀಫ್ ಆಪರೇಟಿಂಗ್ ಆಫೀಸರ್ ಎನ್.ಜಿ. ಸುಬ್ರಮಣಿಯಮ್ ಅವರು 2022-23ರ ವರ್ಷದಲ್ಲಿ 23.59 ಕೋಟಿ ರೂಗಳ ಪ್ಯಾಕೇಜ್ ಪಡೆದಿದ್ದಾರೆ.

ಇದನ್ನೂ ಓದಿNarendra Modi: ಅಮೆರಿಕಕ್ಕೆ ಮೋದಿ ಭೇಟಿ, ಎರಡೂ ದೇಶಗಳ ಸಂಬಂಧಕ್ಕೆ ಪುಷ್ಟಿ: ಅಲ್ಲಿನ ಸಂಸದ ಅಮಿ ಬೆರಾ ವಿಶ್ವಾಸ

ಇನ್ನು, ಕೆ ಕೃತಿವಾಸನ್ ಈ ಸಂಸ್ಥೆಯ ಹಿರಿಯ ತಲೆಮಾರಿಗೆ ಸೇರಿದವರು. ಟಿಸಿಎಸ್​ನ ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ಇನ್ಸೂರೆನ್ಸ್ ಬ್ಯುಸಿನೆಸ್ ಗ್ರೂಪ್​ನ ಜಾಗತಿಕ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. 1989ರಲ್ಲಿ ಟಿಸಿಎಸ್ ಸೇರಿದ ಅವರು ತಮ್ಮ ಸುದೀರ್ಘ ವೃತ್ತಿ ಅವಧಿಯಲ್ಲಿ ವಿವಿಧ ಸ್ತರಗಳ ನಾಯಕತ್ವ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ತಮಿಳುನಾಡಿನವರಾದ ಕೃತಿವಾಸನ್ ಮೆಕ್ಯಾನಿಕಲ್ ಎಂಜಿನಿಯರ್, ಹಾಗೂ ಐಐಟಿ ಕಾನ್​ಪುರ್​ನಲ್ಲಿ ಇಂಡಸ್ಟ್ರಿಯಲ್ ಅಂಡ್ ಮ್ಯಾನೇಜ್ಮೆಂಟ್ ಎಂಜಿನಿಯರಿಂಗ್​ನಲ್ಲಿ ಎಂಇ ಕೂಡ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್