AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಅಮೆರಿಕಕ್ಕೆ ಮೋದಿ ಭೇಟಿ, ಎರಡೂ ದೇಶಗಳ ಸಂಬಂಧಕ್ಕೆ ಪುಷ್ಟಿ: ಅಲ್ಲಿನ ಸಂಸದ ಅಮಿ ಬೆರಾ ವಿಶ್ವಾಸ

US Visit By Narendra Modi: ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 21ರಿಂದ 24ರವರೆಗೂ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯಿಂದ ಎರಡೂ ದೇಶಗಳ ಸಂಬಂದಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.

Narendra Modi: ಅಮೆರಿಕಕ್ಕೆ ಮೋದಿ ಭೇಟಿ, ಎರಡೂ ದೇಶಗಳ ಸಂಬಂಧಕ್ಕೆ ಪುಷ್ಟಿ: ಅಲ್ಲಿನ ಸಂಸದ ಅಮಿ ಬೆರಾ ವಿಶ್ವಾಸ
ಅಮಿ ಬೆರಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 16, 2023 | 1:35 PM

ವಾಷಿಂಗ್ಟನ್: ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕಕ್ಕೆ ಭೇಟಿ ಮಾಡುತ್ತಿರುವುದು ಅಲ್ಲಿನ ರಾಜಕೀಯ ಮತ್ತು ಉದ್ಯಮ ವಲಯದ ನಿರೀಕ್ಷೆಗಳು ಹೆಚ್ಚಾಗಿವೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 (ಬುಧವಾರ) ರಿಂದ ಜೂನ್ 24 (ಶನಿವಾರ) ವರೆಗೂ ಅಮೆರಿಕದ ಭೇಟಿ ಮಾಡಲಿದ್ದಾರೆ. ಈ ವೇಳೆ ಅವರು ಅಮೆರಿಕದ ಸಂಸತ್ತಿನಲ್ಲಿ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಟ್ರಂಪ್ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಮೋದಿ ಅವರು ಅಮೆರಿಕ ಸಂಸತ್ತಿನಲ್ಲಿ ಮಾತನಾಡಿದ್ದರು. ಜೂನ್ 22ರಂದು ಅವರು ಅಮೆರಿಕ ಅಧ್ಯಕ್ಷರ ಗೃಹ ಕಚೇರಿ ಎನಿಸಿದ ವೈಟ್ ಹೌಸ್​ನಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತವರ ಪತ್ನಿ ಜಿಲ್ ಬೈಡನ್ ಅವರು ನರೇಂದ್ರ ಮೋದಿಗೆ ಔತಣಕೂಟದ ಆತಿಥ್ಯ ವಹಿಸಲಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ನರೇಂದ್ರ ಮೋದಿ ಅವರ ಭೇಟಿಯಿಂದ ಭಾರತ ಮತ್ತು ಅಮೆರಿಕದ ನಡುವಿನ ವಿವಿಧ ರೀತಿಯ ಸಂಬಂಧ, ಬಾಂಧವ್ಯಗಳು ವೃದ್ಧಿಸಬಹುದು ಎಂಬ ನಿರೀಕ್ಷೆ ಅಲ್ಲಿನವರಲ್ಲಿದೆ. ಜಾಗತಿಕವಾಗಿ ಬದಲಾಗುತ್ತಿರುವ ರಾಜಕೀಯ ಮತ್ತು ಭೌಗೋಳಿಕ ಸಮೀಕರಣದಲ್ಲಿ ಭಾರತದ ಅವಶ್ಯಕತೆ ಅಮೆರಿಕಕ್ಕೆ ಬಹಳ ಇದೆ. ಹೀಗಾಗಿ, ಭಾರತದೊಂದಿಗೆ ಸಂಬಂಧವೃದ್ಧಿಗೆ ಇರುವ ಯಾವ ಅವಕಾಶವನ್ನೂ ಅಮೆರಿಕ ತಪ್ಪಿಸದು. ಈಗ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ಕೊಡುತ್ತಿರುವ ಬಗ್ಗೆ ಹಾಗೂ ಈ ಭೇಟಿಯಿಂದ ಆಗಬಹುದಾದ ಲಾಭದ ಬಗ್ಗೆ ಅಲ್ಲಿನ ಸಂಸದ ಅಮಿ ಬೆರಾ ಒಂದಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿApple vs India GDP: ಆ್ಯಪಲ್ ಷೇರುಸಂಪತ್ತು 127 ದೇಶಗಳ ಜಿಡಿಪಿಗೆ ಸಮ; ಟಾಪ್-100 ಪಟ್ಟಿಯಲ್ಲಿ ಅಮೆರಿಕದವೇ 62 ಕಂಪನಿಗಳು; ಭಾರತದ್ದು ಎಷ್ಟಿವೆ?

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಬೆಳೆಯುತ್ತಿರುವುದನ್ನು ನೋಡುತ್ತಿದ್ದೀರಿ. ಈ ಸಂಬಂಧಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಅವಕಾಶ ಇದೆ. ಕೋವಿಡ್ ಸಾಂಕ್ರಾಮಿಕದಿಂದ ಹೊರಬರುವ ಮತ್ತು ಸರಬರಾಜು ಸರಪಳಿ ವ್ಯವಸ್ಥೆ ಸುಧಾರಿಸುವ ಬಗ್ಗೆ ನಾವು ಬಹಳಷ್ಟು ಮಾತನಾಡುತ್ತಿದ್ದೇವೆ. ಈಗ ಎರಡೂ ದೇಶಗಳು ಒಟ್ಟಿಗೆ ಬೆಳೆಯಲು ನೈಜ ಅವಕಾಶ ಇದೆ ಎಂದು ಅಮಿ ಬೇರಾ ಅಭಿಪ್ರಾಯಪಟ್ಟಿದ್ದಾರೆ.

F

ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿರುವುದು ಗಮನಾರ್ಹ. ಆಡಳಿತಾರೂಢ ಡೆಮಾಕ್ರಾಟ್ ಪಕ್ಷ ಹಾಗೂ ವಿಪಕ್ಷ ರಿಪಬ್ಲಿಕನ್ ಇಬ್ಬರೂ ಕೂಡ ಒಮ್ಮತದಿಂದ ಮೋದಿ ಭೇಟಿಗೆ ಅಸ್ತು ಎಂದಿದ್ದಾರೆ. ಮೋದಿ ಅವರ ಈ ಭೇಟಿಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಜೊತೆಗಾರಿಕೆಗೆ ಪುಷ್ಟಿ ಸಿಗಬಹುದಾ ಎಂಬ ಕುತೂಹಲವೂ ಇದೆ. ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಚೀನಾ ಮೇಲೆ ಅಮೆರಿಕ ಹಾಗೂ ವಿಶ್ವದ ಹಲವು ದೇಶಗಳು ಅವಲಂಬಿತವಾಗಿವೆ. ಈ ಹಿನ್ನೆಲೆಯಲ್ಲಿ ಸಪ್ಲೈ ಚೈನ್ ವ್ಯವಸ್ಥೆಗೆ ಚೀನಾಗೆ ಭಾರತ ಪರ್ಯಾಯ ಅವಕಾಶ ಎನಿಸಿದೆ. ಆ್ಯಪಲ್ ಸಂಸ್ಥೆ ತನ್ನ ಉತ್ಪನ್ನಗಳ ತಯಾರಿಕೆಯನ್ನು ಹಂತ ಹಂತವಾಗಿ ಭಾರತಕ್ಕೆ ವರ್ಗಾವಣೆ ಮಾಡುತ್ತಿರುವುದು ಇಲ್ಲಿ ಪ್ರಸ್ತುತ. ಇದು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ವ್ಯಾಪಕವಾಗಿ ನಡೆಯಬಹುದು. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ಕೊಡುತ್ತಿರುವುದು ಗಮನಾರ್ಹ ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Fri, 16 June 23

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ