Tata AIA: ವಾಟ್ಸಾಪ್, ಯುಪಿಐ ಮೂಲಕ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ: ಟಾಟಾ ಎಐಎ ಗ್ರಾಹಕರಿಗೆ ಹೊಸ ಅನುಕೂಲ

Pay Insurance Premium Digitally: ಇನ್ಷೂರೆನ್ಸ್ ಪ್ರೀಮಿಯಮ್ ಅನ್ನು ವಾಟ್ಸಾಪ್ ಮತ್ತು ಯುಪಿಐ ಮೂಲಕ ಪಾವತಿಸುವ ಅವಕಾಶವನ್ನು ಟಾಟಾ ಎಐಎ ಲೈಫ್ ಇನ್ಷೂರೆನ್ಸ್ ಕಂಪನಿ ತನ್ನ ಗ್ರಾಹಕರಿಗೆ ನೀಡಿದೆ.

Tata AIA: ವಾಟ್ಸಾಪ್, ಯುಪಿಐ ಮೂಲಕ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ: ಟಾಟಾ ಎಐಎ ಗ್ರಾಹಕರಿಗೆ ಹೊಸ ಅನುಕೂಲ
ವಾಟ್ಸಾಪ್
Follow us
|

Updated on: Jul 03, 2023 | 7:55 AM

ನವದೆಹಲಿ: ಗ್ರಾಹಕರಿಗೆ ಅನುಕೂಲವಾಗುವಂತಹ ವ್ಯವಹಾರ ನೀತಿ ಹೊಂದಿರುವ ಟಾಟಾ ಎಐಎ ಲೈಫ್ ಇನ್ಷೂರೆನ್ಸ್ ಸಂಸ್ಥೆ (TATA AIA Life Insurance Company) ಇದೀಗ ವಿಮಾ ಪ್ರೀಮಿಯಮ್ ಪಾವತಿಗೆ ಡಿಜಿಟಲ್ ಪಾವತಿಯನ್ನು (Digital Payment) ಇನ್ನಷ್ಟು ಸುಲಭಗೊಳಿಸಿದೆ. ಯುಪಿಐ ಜೊತೆಗೆ ವಾಟ್ಸಾಪ್ ಮೂಲಕ ಟಾಟಾ ಎಐಸಿ ಲೈಫ್ ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಮ್ ಪಾವತಿಸಬಹುದಾಗಿದೆ. ಇನ್ಷೂರೆನ್ಸ್ ವಲಯದಲ್ಲಿ ವಾಟ್ಸಾಪ್ ಮೂಲಕ ಪ್ರೀಮಿಯಮ್ ಪಾವತಿಗೆ ಅವಕಾಶ ಕೊಡಲಾಗಿರುವುದು ಇದೇ ಮೊದಲು. ಈ ಮೂಲಕ ಭಾರತೀಯರಿಗೆ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ ವಿಚಾರದಲ್ಲಿ ಹೆಚ್ಚಿನ ತಲೆನೋವು ಇಲ್ಲದಂತೆ ವ್ಯವಸ್ಥೆ ಸರಳಗೊಂಡಿದೆ.

ಭಾರತದಲ್ಲಿ 30 ಕೋಟಿ ಮಂದಿ ಯುಪಿಐ ಆ್ಯಪ್​ಗಳನ್ನು ಬಳಸುತ್ತಾರೆ. 50 ಕೋಟಿ ಮಂದಿ ವಾಟ್ಸಾಪ್ ಬಳಸುತ್ತಾರೆ. ಇದರಿಂದ ಇನ್ಷೂರೆನ್ಸ್ ಡಿಜಿಟಲ್ ಪಾವತಿ ಕಾರ್ಯ ಬಹಳ ಸುಗಮಗೊಂಡಂತಾಗುತ್ತದೆ.

ಇದನ್ನೂ ಓದಿCancer Insurance: ನೀವು ಕ್ಯಾನ್ಸರ್ ಇನ್ಷೂರೆನ್ಸ್ ಪ್ಲಾನ್ ಪಡೆಯುವ ಮುನ್ನ ಈ 7 ಅಂಶಗಳು ಗಮನದಲ್ಲಿರಲಿ

ಎಲ್​ಐಸಿ ಸೇರಿದಂತೆ ಬಹುತೇಕ ಇನ್ಷೂರೆನ್ಸ್ ಕಂಪನಿಗಳು ಯುಪಿಐ ಪ್ಲಾಟ್​ಫಾರ್ಮ್​ಗಳಲ್ಲಿ ಲಭ್ಯ ಇವೆ. ಫೋನ್ ಪೇ, ಪೇಟಿಎಂ ಇತ್ಯಾದಿ ಆ್ಯಪ್​ಗಳಲ್ಲಿ ನೀವು ಇನ್ಷೂರೆನ್ಸ್ ಪ್ರೀಮಿಯಂ ಪಾವತಿಸಬಹುದಾಗಿದೆ.

ಟಾಟಾ ಎಐಎ ಇನ್ಷೂರೆನ್ಸ್ ಸಂಸ್ಥೆ ಇಂಗ್ಲೀಷನ್ನೂ ಒಳಗೊಂಡಂತೆ ಐದು ಭಾಷೆಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದು, ವಿವಿಧ ಡಿಜಿಟಲ್ ಮೋಡ್​ಗಳ ಮೂಲಕ ಇನ್ಷೂರೆನ್ಸ್ ರಿನಿವಲ್ ಪ್ರೀಮಿಯಮ್​ಗಳನ್ನು ಸಂಗ್ರಹಿಸುತ್ತಿದೆ. ವಾಟ್ಸಾಪ್ ಮೂಲಕ ಸಂವಹನಕ್ಕೆ ವ್ಯವಸ್ಥೆ ಮಾಡಿದೆ. ಅಡೋಬ್ ಆಧಾರಿತ ಕೆಂಪೇನ್ ಮ್ಯಾನೇಜ್ಮೆಂಟ್ ಸಿಸ್ಟಂ ಬಳಸಿ ಸ್ವಯಂಚಾಲಿತ ಎಸ್ಸೆಮ್ಮೆಸ್ ಸೇವೆಗಳನ್ನು ನೀಡುತ್ತಿದೆ.

ಇದನ್ನೂ ಓದಿAccident Insurance: ಅಪಘಾತ ವಿಮೆ ಬಹಳ ಮುಖ್ಯ; ಆಕ್ಸಿಡೆಂಟ್ ಇನ್ಷೂರೆನ್ಸ್ ಖರೀದಿಸುವ ಮುನ್ನ ಈ ಅಂಶ ತಿಳಿದಿರಲಿ

ಅದೇ ವೇಳೆ, ಟಾಟಾ ಎಐಎ ಇನ್ಷೂರೆನ್ಸ್ ಕಂಪನಿಯ ವೈಯಕ್ತಿಕ ಡೆತ್ ಕ್ಲೈಮ್ ಅನುಪಾತವೂ ಶೇ. 98.53ರಿಂದ ಶೇ. 99.01ಕ್ಕೆ ಉತ್ತಮಗೊಂಡಿದೆ. ಇನ್ಷೂರೆನ್ಸ್ ರಿನಿವಲ್ ಮಾಡುವ ಪ್ರಮಾಣವೂ ಹೆಚ್ಚಾಗಿದೆ. ಅಂದರೆ, ಇನ್ಷೂರೆನ್ಸ್ ಗ್ರಾಹಕರು ಮತ್ತೊಂದು ವರ್ಷಕ್ಕೆ ಪಾಲಿಸಿ ನವೀಕರಣ ಮಾಡುವುದು ಹೆಚ್ಚಾಗಿದೆ. ಯಾವುದೇ ಇನ್ಷೂರೆನ್ಸ್ ಕಂಪನಿಯ ಉಪಯುಕ್ತತೆ ಮತ್ತು ಜನಪ್ರಿಯತೆಗೆ ಅದರ ರಿನಿವಲ್ ಅಂಶ ಬಹಳ ಮುಖ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್