Sign In

By signing in or creating an account, you agree with Associated Broadcasting Company's Terms & Conditions and Privacy Policy.

YES Bank: ಯೆಸ್ ಬ್ಯಾಂಕ್​ನಲ್ಲಿ ಬಡ್ಡಿದರ ಭರ್ಜರಿ ಏರಿಕೆ; 18ರಿಂದ 36 ತಿಂಗಳವರೆಗಿನ ಠೇವಣಿಗೆ ಶೇ. 8.25ರಷ್ಟು ಬಡ್ಡಿ

FD Rates Hiked By YES Bank: ಖಾಸಗಿ ವಲಯ ಯೆಸ್ ಬ್ಯಾಂಕ್ ತನ್ನ ಎಲ್ಲಾ ಅವಧಿಯ ನಿಶ್ಚಿತ ಠೇವಣಿಗಳಿಗೆ ಬಡ್ಡಿದರ ಹೆಚ್ಚಿಸಿದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.75ರವರೆಗೆ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ 0.5ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ.

YES Bank: ಯೆಸ್ ಬ್ಯಾಂಕ್​ನಲ್ಲಿ ಬಡ್ಡಿದರ ಭರ್ಜರಿ ಏರಿಕೆ; 18ರಿಂದ 36 ತಿಂಗಳವರೆಗಿನ ಠೇವಣಿಗೆ ಶೇ. 8.25ರಷ್ಟು ಬಡ್ಡಿ
ಯೆಸ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2023 | 2:05 PM

ನವದೆಹಲಿ: ಯೆಸ್ ಬ್ಯಾಂಕ್ ತನ್ನಲ್ಲಿನ ಬಡ್ಡಿ ದರಗಳನ್ನು (Fixed Deposit Rates) ಪರಿಷ್ಕರಿಸಿದೆ. 2 ಕೋಟಿ ರೂವರೆಗಿನ ನಿಶ್ಚಿತ ಠೇವಣಿಗಳಿಗೆ ನೀಡುವ ಬಡ್ಡಿಯನ್ನು ಯೆಸ್ ಬ್ಯಾಂಕ್ ಹೆಚ್ಚಿಸಿದೆ. ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷದವರೆಗಿನ ವಿವಿಧ ಎಫ್​ಡಿಗಳಿಗೆ ಶೇ. 3.25ರಿಂದ ಶೇ. 7.75ರಷ್ಟು ಹೆಚ್ಚಿಸಿದೆ. ಹಿರಿಯ ನಾಗರಿಕರಿಗೆ (Senior Citizens) ಶೇ. 0.50ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಜುಲೈ 3, ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ ಎಂದು ಯೆಸ್ ಬ್ಯಾಂಕ್ ಮಾಹಿತಿ ನೀಡಿದೆ.

7ರಿಂದ 14 ದಿನಗಳ ಅವಧಿಯ ಠೇವಣಿಗಳಿಗೆ ಶೇ. 3.25ರಷ್ಟು ಬಡ್ಡಿ ಸಿಗುತ್ತದೆ. ಒಂದೂವರೆ ವರ್ಷದಿಂದ ಮೂರು ವರ್ಷದ ಅವಧಿಯ ಠೇವಣಿಗೆ ಗರಿಷ್ಠ ಬಡ್ಡಿ ನೀಡಲಾಗುತ್ತದೆ. ಯೆಸ್ ಬ್ಯಾಂಕ್ ಪ್ರಕಟಣೆ ಪ್ರಕಾರ ಈ ಎಫ್​ಡಿಗಳಿಗೆ ಶೇ. 7.75ರಷ್ಟು ಬಡ್ಡಿ ಸಿಗುತ್ತದೆ. ಇದೇ ಎಫ್​ಡಿಗೆ ಹಿರಿಯ ನಾಗರಿಕರು ಶೇ. 8.25ರಷ್ಟು ಬಡ್ಡಿ ಪಡೆಯಬಹುದು. ಪ್ರತಿಯೊಂದು ನಿಶ್ಚಿತ ಠೇವಣಿಗೂ ಸಾಮಾನ್ಯ ಗ್ರಾಹಕರು ಪಡೆಯುವುದಕ್ಕಿಂತ ಶೇ. 0.5ರಷ್ಟು ಹೆಚ್ಚು ಬಡ್ಡಿಯನ್ನು ಹಿರಿಯ ನಾಗರಿಕರಿಗೆ ಕೊಡಲಾಗುತ್ತದೆ.

ಇದನ್ನೂ ಓದಿMoney Tips: ಉದ್ಯೋಗಸ್ಥ ಮಹಿಳೆಯರಿಗೆ ಹಣಕಾಸು ನಿಭಾಯಿಸುವ ಉಪಾಯಗಳು; ತೆರಿಗೆ ಉಳಿತಾಯ, ಹೂಡಿಕೆ ತಂತ್ರಗಳು

ಸಾಮಾನ್ಯ ಗ್ರಾಹಕರಿಗೆ ಯೆಸ್ ಬ್ಯಾಂಕ್​ನ ಹೊಸ ಎಫ್​ಡಿ ದರಗಳು

7 ರಿಂದ 14 ದಿನಗಳು: ಶೇ. 3.25 ಬಡ್ಡಿ

15ರಿಂದ 45 ದಿನಗಳು: ಶೇ. 3.70

46ರಿಂದ 90 ದಿನಗಳು: ಶೇ. 4.10

90ರಿಂದ 120 ದಿನಗಳು: ಶೇ. 4.75

121ರಿಂದ 180 ದಿನಗಳು: ಶೇ. 5

181 ದಿನದಿಂದ 271 ದಿನಗಳು: ಶೇ. 6.10

272 ದಿನದಿಂದ 1 ವರ್ಷದೊಳಗಿನ ಅವಧಿ: ಶೇ. 6.35

1 ವರ್ಷದಿಂದ 18 ತಿಂಗಳೊಳಗಿನ ಅವಧಿ: ಶೇ. 7.50

18 ತಿಂಗಳಿಂದ 36 ತಿಂಗಳಿಗಿಂತ ಕಡಿಮೆ: ಶೇ. 7.75

36 ತಿಂಗಳಿಂದ 60 ತಿಂಗಳಿಗಿಂತ ಕಡಿಮೆ: ಶೇ. 7.25

60 ತಿಂಗಳಿಂದ 120 ತಿಂಗಳಿಗಿಂತ ಕಡಿಮೆ: ಶೇ. 7

ಈ ಮೇಲಿನ ದರಗಳು 2 ಕೋಟಿ ರೂವರೆಗಿನ ಹೂಡಿಕೆಗಳಿಗೆ ಅನ್ವಯ ಆಗುತ್ತವೆ. ಈ ಪ್ರತಿಯೊಂದು ಎಫ್​ಡಿಗೂ ಹಿರಿಯ ನಾಗರಿಕರಿಗೆ ಅರ್ಧಪ್ರತಿಶತದಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಪ್ರಮುಖ ಬ್ಯಾಂಕುಗಳ ಪೈಕಿ ಅತಿಹೆಚ್ಚು ಬಡ್ಡಿ ದರಗಳಲ್ಲಿ ಇದೂ ಒಂದಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ