Investment Plans: ಮಹಿಳೆಯರೇ ಗಮನಿಸಿ: ಎನ್​ಪಿಎಸ್, ಗೋಲ್ಡ್ ಇತ್ಯಾದಿ 5 ಹೂಡಿಕೆ ಆಯ್ಕೆಗಳು

Women Empowerment: ಹಣದ ಉಳಿತಾಯ, ಹಣದ ಗಳಿಕೆಗೆ ಸಮ ಎಂಬ ಸುಲಭ ಸೂತ್ರ ಕರಗತ ಮಾಡಿಕೊಂಡ ಮಹಿಳೆಯರಿರುವ ಮನೆ ಸದಾ ಸುಭಿಕ್ಷವೇ. ಉಳಿಸಿದ ಹಣವನ್ನು ಸೂಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿವುದು ಜಾಣತನ. ಅಂಥ ಹೂಡಿಕೆ ಅವಕಾಶಗಳು ಇಲ್ಲಿವೆ....

Investment Plans: ಮಹಿಳೆಯರೇ ಗಮನಿಸಿ: ಎನ್​ಪಿಎಸ್, ಗೋಲ್ಡ್ ಇತ್ಯಾದಿ 5 ಹೂಡಿಕೆ ಆಯ್ಕೆಗಳು
ಹೂಡಿಕೆ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 04, 2023 | 11:44 AM

ಭಾರತದಲ್ಲಿ ಇತ್ತೀಚೆಗೆ ಹೆಚ್ಚೆಚ್ಚು ಮಹಿಳೆಯರು (Women) ಸ್ವಾವಲಂಬಿಗಳಾಗುತ್ತಿದ್ದಾರೆ. ಅಪ್ಪ ಅಥವಾ ಗಂಡನ ದುಡಿಮೆಯ ದುಡ್ಡು ನಂಬಿ ಕೂರುವ ನಾರಿಯರ ಸಂಖ್ಯೆ ಕಡಿಮೆ ಆಗುತ್ತಿದೆ. ಕೆಲಸಕ್ಕೆ ಹೋಗಿ ದುಡಿಯುವ ಮಹಿಳೆಯರು, ಗೃಹಸ್ಥೆಯರಾದರೂ ಹಣಕಾಸು ಶಿಸ್ತು ಮೂಲಕ ಉಳಿತಾಯ ಮಾಡುವ ಮಹಿಳೆಯರು ಹೆಚ್ಚಾಗುತ್ತಿದ್ದಾರೆ. ದುಡ್ಡಿನ ಬೆಲೆ, ಹಣಕಾಸು ಭದ್ರತೆಯ ಬೆಲೆಯ ಅರಿವು ಇವರಿಗಿದೆ. ಹಣದ ಉಳಿತಾಯ, ಹಣದ ಗಳಿಕೆಗೆ ಸಮ ಎಂಬ ಸುಲಭ ಸೂತ್ರ ಕರಗತ ಮಾಡಿಕೊಂಡ ಮಹಿಳೆಯರಿರುವ ಮನೆ ಸದಾ ಸುಭಿಕ್ಷವೇ.

ಈಗ ಮಹಿಳೆಯರಿಗೆ ಸಾಕಷ್ಟು ಹೂಡಿಕೆ ಆಯ್ಕೆಗಳುಂಟು. ಅದರಲ್ಲಿ ಮಹಿಳೆಯರ ಮತ್ತು ಕುಟುಂಬದ ಭದ್ರತೆ ಸೂಕ್ತ ಎನಿಸುವ ಐದು ಪ್ರಮುಖ ಹೂಡಿಕೆ ಅವಕಾಶಗಳ ಬಗ್ಗೆ ವಿವರ ಇಲ್ಲಿದೆ:

ಮಹಿಳೆಯರಿಗೆ ಹೂಡಿಕೆ ಆಯ್ಕೆ: ಚಿನ್ನ

ಚಿನ್ನ ಮಹಿಳೆಯರಿಗೆ ಸದಾ ಇಷ್ಟವಾಗುವ ಅಪೂರ್ವ ಹಾಗೂ ಬಹೂಪಯೋಗಿ ಲೋಹ. ಚಿನ್ನವನ್ನು ಹೊಂದುವುದು ಅಪ್ಪಟ ಹೂಡಿಕೆಯೂ ಹೌದು. ಒಡವೆ, ಚಿನ್ನದ ಗಟ್ಟಿ, ಚಿನ್ನದ ನಾಣ್ಯ ಇತ್ಯಾದಿ ಭೌತಿಕ ಚಿನ್ನವನ್ನು ಖರೀದಿಸಬಹುದು. ಅಥವಾ ಸಾವರೀನ್ ಗೋಲ್ಡ್ ಬಾಂಡ್, ಗೋಲ್ಡ್ ಫಂಡ್, ಇಟಿಎಫ್ ಗೋಲ್ಡ್ ಇತ್ಯಾದಿ ಸ್ಕೀಮ್​ನಲ್ಲಿ ಹಣ ಹೂಡಿಕೆ ಮಾಡಬಹುದು. ಚಿನ್ನದ ಬೆಲೆ ಯಾವತ್ತಿದ್ದರೂ ಕಡಿಮೆ ಆಗುವುದಿಲ್ಲ. ವರ್ಷಕ್ಕೆ ಶೇ. 10ಕ್ಕಿಂತಲೂ ಹೆಚ್ಚು ಮೌಲ್ಯವೃದ್ಧಿ ಕಾಣುವ ಲೋಹ ಅದು.

ಮಹಿಳೆಯರಿಗೆ ಹೂಡಿಕೆ ಆಯ್ಕೆ: ಫಿಕ್ಸೆಡ್ ಡೆಪಾಸಿಟ್

ಇದು ಬಹಳ ಸುಲಭವಾಗಿ ಮಾಡಬಹುದಾದ ಹೂಡಿಕೆ. ಈಗಂತೂ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಇಡುವ ಹಣ ವರ್ಷಕ್ಕೆ ಶೇ. 8ರವರೆಗೂ ಬೆಳೆಯುತ್ತದೆ. ಬಹಳ ಮಂದಿಗೆ ಎಫ್​ಡಿಯಲ್ಲಿನ ಹೂಡಿಕೆ ತೀರಾ ಸಾಮಾನ್ಯ.

ಇದನ್ನೂ ಓದಿDuplicate PAN: ಆನ್​ಲೈನ್​ನಲ್ಲಿ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಡೌನ್​ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ

ಮಹಿಳೆಯರಿಗೆ ಹೂಡಿಕೆ ಆಯ್ಕೆ: ನ್ಯಾಷನಲ್ ಪೆನ್ಷನ್ ಸ್ಕೀಮ್

ಸರ್ಕಾರ ನಡೆಸುವ ನಿವೃತ್ತಿ ಯೋಜನೆಗಳಲ್ಲಿ ಒಂದು ನ್ಯಾಷನಲ್ ಪೆನ್ಷನ್ ಸ್ಕೀಮ್. ಇದು ಮಾರ್ಕೆಟ್ ಲಿಂಕ್ಡ್ ಸೇವಿಂಗ್ ಸ್ಕೀಮ್. ಅಂದರೆ ಷೇರು, ಕಾರ್ಪೊರೇಟ್ ಬಾಂಡ್, ಸರ್ಕಾರಿ ಬಾಂಡ್, ಎಫ್​ಡಿ ಇತ್ಯಾದಿ ಕಡೆ ಈ ಹಣ ಹೂಡಿಕೆಯಾಗಿ, ಅದರಿಂದ ಸಿಗುವ ಲಾಭದಲ್ಲಿ ಹಂಚಿಕೆ ಪಡೆಯುವಂತಹ ಯೋಜನೆ. ಇದು ಸರ್ಕಾರಿ ಸ್ವಾಮ್ಯದ ಪಿಎಫ್​ಆರ್​ಡಿಎ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಟ್ಟ ಸ್ಕೀಮ್.

ಮಹಿಳೆಯರಿಗೆ ಹೂಡಿಕೆ ಆಯ್ಕೆ: ಆರೋಗ್ಯ ವಿಮೆ

ಆರೋಗ್ಯವೇ ಭಾಗ್ಯ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾದ ಸತ್ಯ. ಇವತ್ತು ಚೆನ್ನಾಗಿದ್ದೇನೆ, ನಾಳೆಯೂ ಚೆನ್ನಾಗಿರುತ್ತೇನೆ ಎಂಬ ಭ್ರಮೆ ಬೇಡ. ಇವತ್ತಿನ ಆಧುನಿಕ ಜೀವನಶೈಲಿಯಲ್ಲಿ ಸದಾ ಆರೋಗ್ಯ ಉಳಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಅಪಘಾತವೋ ಅಥವಾ ಕೋವಿಡ್​ನಂಥ ಅನಿರೀಕ್ಷಿತ ದುರ್ಘಟನೆಗಳು ಬಂದು ಆಸ್ಪತ್ರೆ ಸೇರಬೇಕಾಗಬಹುದು. ಅಂಥ ಸಂದರ್ಭದಲ್ಲಿ ನಮ್ಮ ಉಳಿತಾಯ ಹಣ ನೀರಿನಂತೆ ಕರಗಿ ಹೋಗಿ ಸಾಲದ ಶೂಲಕ್ಕೂ ಸಿಲುಕಬಹುದು. ಇಂಥ ಸಂದರ್ಭ ತಪ್ಪಿಸಲು ಆರೋಗ್ಯ ವಿಮೆ ಬಹಳ ಸೂಕ್ತವಾದುದು. ನಿಮ್ಮ ಉಳಿತಾಯ ಹಣದಲ್ಲಿ ಒಂದಷ್ಟು ಭಾಗವನ್ನು ಆರೋಗ್ಯ ವಿಮೆಗೆ ತೊಡಗಿಸಿಕೊಳ್ಳುವುದು ಉತ್ತಮ. ಸಾಧ್ಯವಾದರೆ ಇಡೀ ಕುಟುಂಬಕ್ಕೆ ಸೇರಿಸಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಬಹುದು.

ಇದನ್ನೂ ಓದಿMoney Tips: ಉದ್ಯೋಗಸ್ಥ ಮಹಿಳೆಯರಿಗೆ ಹಣಕಾಸು ನಿಭಾಯಿಸುವ ಉಪಾಯಗಳು; ತೆರಿಗೆ ಉಳಿತಾಯ, ಹೂಡಿಕೆ ತಂತ್ರಗಳು

ಮಹಿಳೆಯರಿಗೆ ಹೂಡಿಕೆ ಆಯ್ಕೆ: ಮ್ಯೂಚುವಲ್ ಫಂಡ್ ಎಸ್​ಐಪಿ

ಕೆಲಸಕ್ಕೆ ಹೋಗುವ ಮಹಿಳೆಯರು ಈಗ ಹೆಚ್ಚೆಚ್ಚು ಇಚ್ಛಿಸುವ ಹೂಡಿಕೆ ಯೋಜನೆಗಳಲ್ಲಿ ಮ್ಯೂಚುವಲ್ ಫಂಡ್ ಎಸ್​ಐಪಿ ಇದೆ. ನೀವು ತಿಂಗಳಿಗೆ, 3 ತಿಂಗಳಿಗೆ, 6 ತಿಂಗಳಿಗೆ, ವರ್ಷಕ್ಕೆ ಹೇಗೆ ಬೇಕಾದರೂ ನಿಯಮಿತವಾಗಿ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು. ದೀರ್ಘಕಾಲೀನ ಹೂಡಿಕೆಗಳಿಗೆ ಇದು ಸೂಕ್ತ. ಹೆಚ್ಚು ರಿಟರ್ನ್ ಸಿಗುತ್ತದೆ. ಅದರಲ್ಲೂ ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್​ಗಳಿಂದ ತೆರಿಗೆ ಉಳಿತಾಯದ ಜೊತೆಗೆ ಒಳ್ಳೆಯ ಲಾಭ ದೊರೆಯುವ ಅವಕಾಶ ಇರುತ್ತದೆ. ಉಳಿತಾಯದ ಹಣವನ್ನು ಇದರಲ್ಲಿ ಹೂಡಿಕೆ ಮಾಡಿ ಬೆಳೆಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Tue, 4 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ