Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Advice: ಈಗ ಷೇರುಪೇಟೆ ಚಿಂತೆ ಬೇಡ; ನಿಯಮಿತ ಹೂಡಿಕೆಯತ್ತ ಗಮನ ಕೊಡಿ: ದೇವೇನ್ ಚೋಕ್ಸಿ ಸಲಹೆಗಳಿವು

Deven Choksey On Investments: ಭಾರತೀಯ ಷೇರುಪೇಟೆ ಸಾರ್ವಕಾಲಿಕ ಎತ್ತರಕ್ಕೆ ಹೋಗಿದ್ದು, ಹಲವರಿಗೆ ಇದು ಮತ್ತೆ ಕುಸಿಯುವ ಭಯ ಹುಟ್ಟಿಸಿದೆ. ಆದರೆ, ಷೇರುಮಾರುಕಟ್ಟೆ ಸದ್ಯಕ್ಕೆ ಕುಸಿಯುವ ಸಾಧ್ಯತೆ ಇಲ್ಲ. ದೂರದೃಷ್ಟಿಯಿಂದ ಪ್ರತೀ ತಿಂಗಳು ಎಸ್​ಐಪಿ ಮೂಲಕ ಹೂಡಿಕೆ ಮಾಡಿ ಎಂದು ದೇವೇನ್ ಚೋಕ್ಸೀ ಹೇಳುತ್ತಾರೆ.

Stock Market Advice: ಈಗ ಷೇರುಪೇಟೆ ಚಿಂತೆ ಬೇಡ; ನಿಯಮಿತ ಹೂಡಿಕೆಯತ್ತ ಗಮನ ಕೊಡಿ: ದೇವೇನ್ ಚೋಕ್ಸಿ ಸಲಹೆಗಳಿವು
ಷೇರುಪೇಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 04, 2023 | 2:24 PM

ಭಾರತದ ಷೇರುಮಾರುಕಟ್ಟೆಗಳು ಉಚ್ಛ್ರಾಯ ಸ್ಥಿತಿ ತಲುಪಿವೆ. ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ ಸೂಚ್ಯಂಕಗಳು ಸಾರ್ವಕಾಲಿಕ ಎತ್ತರಕ್ಕೆ ಏರಿವೆ. ಈಗಲೂ ಏರುತ್ತಲೇ ಇವೆ. ಇಂಥದ್ದೊಂದು ಸ್ಥಿತಿ ಹಲವು ಹೂಡಿಕೆದಾರರಿಗೆ ಗೊಂದಲ ಸೃಷ್ಟಿ ಮಾಡುತ್ತದೆ. ಯಾಕೆಂದರೆ ಷೇರುಗಳು ಯಾವುದೋ ಟ್ರೆಂಡ್​ಗೆ ಒಳಗಾಗಿ ಅಸಹಜವಾಗಿ ಬೆಳೆದರೆ, ಮುಂದಿನ ದಿನಗಳಲ್ಲಿ ಕುಸಿಯುವ ಸಾಧ್ಯತೆ ಇರುತ್ತದೆ ಎಂಬ ಸಹಜ ಭಯ ಎಲ್ಲರಲ್ಲೂ ಇರುತ್ತದೆ. ಈಗ ಭಾರತದ ಷೇರುಮಾರುಕಟ್ಟೆ (Indian Stock Markets) ಇದೇ ರೀತಿ ಅಸಹಜವಾಗಿ ಏರುತ್ತಿದೆಯಾ? ಮುಂದಿನ ದಿನಗಳಲ್ಲಿ ಇದು ಪ್ರಪಾತಕ್ಕೆ ಬರುತ್ತದೆಯಾ? ಈ ಪ್ರಶ್ನೆಗಳಿಗೆ ಹೂಡಿಕೆ ಸಲಹೆಗಾರರು ಹಾಗೂ ಡಿಆರ್​ಚೋಕ್ಸೀ ಫಿನ್​ಸರ್ವ್ ಪ್ರೈ ಲಿ ಸಂಸ್ಥೆಯ (DRChoksey Finserv Pvt Ltd) ನಿರ್ದೇಶಕ ದೇವೇನ್ ಚೋಕ್ಸಿ ಅವರು ಈ ಕೆಲ ಅನುಮಾನಗಳಿಗೆ ಸಮಜಾಯಿಷಿ ಕೊಟ್ಟಿದ್ದಾರೆ. ಅವರ ಪ್ರಕಾರ ಭಾರತದ ಷೇರುಮಾರುಕಟ್ಟೆ ಸಹಜವಾಗಿ ಏರುತ್ತಿದೆ. ಮುಂದೆ ಒಂದಷ್ಟು ಇಳಿಕೆಯಾಗಬಹುದಾದರೂ, ಮತ್ತೆ ಏರಿಕೆ ಹಾದಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಷೇರುಪೇಟೆ ಏರಿಕೆ ಕಾಣುತ್ತಿರುವ ಹೊತ್ತಿನಲ್ಲಿ ಹೂಡಿಕೆ ಮಾಡುವ ಅವಕಾಶ ತಪ್ಪಿಸಿಕೊಂಡು ಪರಿತಪಿಸುತ್ತಿರುವ ಮಂದಿಗೆ ದೇವೇನ್ ಚೋಕ್ಸಿ ಒಂದಷ್ಟು ಸಲಹೆ ನೀಡಿದ್ದು, ಗತಿಸಿಹೋದ ಕಾಲಕ್ಕೆ ಚಿಂತಿಸಬೇಕಿಲ್ಲ. ಮಾರುಕಟ್ಟೆ ಯಾವ ಸ್ಥಿತಿಯಲ್ಲಿದೆ ಎಂಬುದು ಈಗ ಮುಖ್ಯವಲ್ಲ. ದೀರ್ಘಕಾಲ ಗಮನದಲ್ಲಿಟ್ಟುಕೊಂಡು ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋಗಿ ಎಂದು ಹೇಳಿದ್ದಾರೆ.

ದೊಡ್ಡ ಕಂಪನಿಗಳು ಓಡುವ ಕುದುರೆಗಳು

ದೇವೇನ್ ಚೋಕ್ಸೀ ಪ್ರಕಾರ ದೊಡ್ಡ ಕಂಪನಿಗಳು (ಲಾರ್ಜ್ ಕ್ಯಾಪ್) ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭ ತಂದುಕೊಡಲಿವೆಯಂತೆ. ಎಚ್​ಡಿಎಫ್​ಸಿ ಬ್ಯಾಂಕ್, ರಿಲಾಯನ್ಸ್ ಇಂಡಸ್ಟ್ರೀಸ್ ಇತ್ಯಾದಿ ಕಂಪನಿಗಳ ಪಾತ್ರ ಷೇರುಮಾರುಕಟ್ಟೆಯಲ್ಲಿ ಗಣನೀಯವಾಗಿ ಹೆಚ್ಚಲಿದೆ. ಮುಂದಿನ 3-4 ತಿಂಗಳು ಇಂಥ ದೊಡ್ಡ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಹೆಚ್ಚಲಿದೆ ಎಂದು ಅವರು ಭವಿಷ್ಯ ಹೇಳಿದ್ದಾರೆ.

ಇದನ್ನೂ ಓದಿInvestment Plans: ಮಹಿಳೆಯರೇ ಗಮನಿಸಿ: ಎನ್​ಪಿಎಸ್, ಗೋಲ್ಡ್ ಇತ್ಯಾದಿ 5 ಹೂಡಿಕೆ ಆಯ್ಕೆಗಳು

ಏಪ್ರಿಲ್ ಮತ್ತು ಮೇ ಹಾಗೂ ಈಗ ಜೂನ್ ತಿಂಗಳಲ್ಲಿ ಮಿಡ್​ಕ್ಯಾಪ್ ಕಂಪನಿಗಳು (ಮಧ್ಯಮ ಷೇರುಸಂಪತ್ತು ಹೊಂದಿರುವವು) ಹೊಸ ಎತ್ತರಕ್ಕೆ ಹೋಗಿರುವುದು ಕಂಡುಬಂದಿದೆ. ಏರಿಕೆ ಕಾಣುವ ಮುನ್ನ ಆ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಒಳ್ಳೆಯ ಲಾಭವಾಗಿದೆ. ಈ ಹಂತದಲ್ಲಿ ದೊಡ್ಡ ಕಂಪನಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಈಗ ಈ ದೊಡ್ಡ ಕಂಪನಿಗಳ ಷೇರುಗಳಿಗೆ ಬೇಡಿಕೆ ಬರಲಿದೆ. ಇಟಿಎಫ್ ಫಂಡ್​ಗಳು ಇತ್ಯಾದಿ ದೊಡ್ಡ ಹೂಡಿಕೆದಾರರು ಈಗ ಲಾರ್ಜ್ ಕ್ಯಾಪ್ ಕಂಪನಿಗಳ ಷೇರುಗಳ ಮೇಲೆ ಹಣ ಹೂಡಿಕೆ ಮಾಡಲಿವೆ ಎಂಬುದು ಡಿಆರ್​ಚೋಕ್ಸೀ ಸಂಸ್ಥೆಯ ಮುಖ್ಯಸ್ಥರ ಅನಿಸಿಕೆ.

ಈಕ್ವಿಟಿ ಎಸ್​ಐಪಿ ಮೂಲಕ ಹೂಡಿಕೆ ಮಾಡಿ

ದೇವೇನ್ ಚೋಕ್ಸಿ ಪ್ರಕಾರ ಸದ್ಯ ಷೇರುಮಾರುಕಟ್ಟೆಯಲ್ಲಿ ಒಳ್ಳೆಯ ಷೇರುಗಳು ಲಭ್ಯ ಇವೆ. ಕಡೆಗಣನೆಗೆ ಒಳಗಾದ ಒಳ್ಳೊಳ್ಳೆಯ ದೊಡ್ಡ ಟೆಕ್ ಕಂಪನಿಗಳ ಷೇರುಗಳು ಉತ್ತಮ ಬೆಲೆಗೆ ಸಿಗುತ್ತಿವೆ. ಇಂಥ ಷೇರುಗಳ ಮೇಲೆ ಜನರು ಹಂತ ಹಂತವಾಗಿ ಎಸ್​ಐಪಿ ಮೂಲಕ ಪ್ರತೀ ತಿಂಗಳು ಹೂಡಿಕೆ ಮಾಡುವುದು ಉತ್ತಮ. ಮಾರುಕಟ್ಟೆ ಹೇಗೇ ಇರಲಿ, ನಿಯಮಿತವಾಗಿ ಪ್ರತೀ ತಿಂಗಳು ಎಸ್​ಐಪಿ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಬಹುದು ಎಂದು ಹೇಳುತ್ತಾರೆ.

ಇದನ್ನೂ ಓದಿMultibagger: 1 ಲಕ್ಷ ಹಣಕ್ಕೆ 20 ವರ್ಷದಲ್ಲಿ 36 ಕೋಟಿ ಲಾಭ; ಕಜಾರಿಯಾ ಎಂಬ ವಂಡರ್ ಷೇರ್

ಇನ್ನೊಂದು ಮುಖ್ಯ ಸಂಗತಿ ಚೋಕ್ಸಿ ಹೇಳಿದ್ದೆಂದರೆ, ಇನ್ನೂ 8-10 ವರ್ಷ ಕಾಲ ಭಾರತದ ಷೇರುಮಾರುಕಟ್ಟೆ ಹೀನಾಯ ಸ್ಥಿತಿಗೆ ಇಳಿಯುವ ಸಾಧ್ಯತೆ ಇಲ್ಲ. ಇವರ ಊಹೆ ನಿಜವೇ ಆದಲ್ಲಿ ದೂರದೃಷ್ಟಿಯಿಂದ ಈಗಲೂ ಷೇರುಮಾರುಕಟ್ಟೆಯಲ್ಲಿ ಉತ್ತಮವೆನಿಸುವ ಷೇರುಗಳ ಮೇಲೆ ಹೂಡಿಕೆ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್