Multibagger: 1 ಲಕ್ಷ ಹಣಕ್ಕೆ 20 ವರ್ಷದಲ್ಲಿ 36 ಕೋಟಿ ಲಾಭ; ಕಜಾರಿಯಾ ಎಂಬ ವಂಡರ್ ಷೇರ್

Kajaria Ceramics Shares: ದೇಶದ ಅತಿದೊಡ್ಡ ಸಿರಾಮಿಕ್ಸ್ ಟೈಲ್ ಕಂಪನಿ ಕಜಾರಿಯಾದ ಷೇರುಬೆಲೆ 20 ವರ್ಷದಲ್ಲಿ ಮೂರ್ನಾಲ್ಕು ಸಾವಿರ ಪಟ್ಟು ಬೆಳೆದಿದೆ. 1 ಲಕ್ಷ ಹೂಡಿಕೆ ಮಾಡಿದ್ದವರು 36ಕೋಟಿ ರೂ ಕುಬೇರರಾಗಿರುತ್ತಿದ್ದರು.

Multibagger: 1 ಲಕ್ಷ ಹಣಕ್ಕೆ 20 ವರ್ಷದಲ್ಲಿ 36 ಕೋಟಿ ಲಾಭ; ಕಜಾರಿಯಾ ಎಂಬ ವಂಡರ್ ಷೇರ್
ಷೇರುಪೇಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 03, 2023 | 4:27 PM

ಷೇರುಮಾರುಕಟ್ಟೆಯಲ್ಲಿ ಎರಡು ಥರಹದ ಹೂಡಿಕೆದಾರರನ್ನು ಕಾಣುತ್ತೇವೆ. ಒಂದು ವರ್ಗದವರು ಅಲ್ಪಾವಧಿಯಲ್ಲಿ ಲಾಭದ ಗುರಿ ಇಟ್ಟು ಷೇರುವಹಿವಾಟು ನಡೆಸುತ್ತಾರೆ. ಇನ್ನೊಂದು ವರ್ಗದವರು ದೀರ್ಘಾವಧಿ ಹೂಡಿಕೆ ಬಯಸುತ್ತಾರೆ. ಎರಡನೇ ವರ್ಗದ ಹೂಡಿಕೆದಾರರು ಮಾರುಕಟ್ಟೆಯನ್ನು ದೂರದೃಷ್ಟಿಯಿಂದ ಗಮನಿಸುತ್ತಾರೆ. ಒಂದು ಹಂತದಲ್ಲಿ ಷೇರು ಕುಸಿದರೂ ಸಂಯಮಗೆಡುವುದಿಲ್ಲ. ಇಂತಹವರಿಗೆ ಕೆಲವೊಂದಿಷ್ಟು ಷೇರುಗಳು ಜ್ಯಾಕ್​ಪಾಟ್​ಗಳಾಗಿ ಪರಿಣಮಿಸುವುದುಂಟು. ಅಂಥ ಷೇರುಗಳಲ್ಲಿ ಜಕಾರಿಯಾ ಸಿರಾಮಿಕ್ಸ್​ನದ್ದು (Kajaria Ceramics) ಒಂದು. ಭಾರತದ ಅತಿದೊಡ್ಡ ಹಾಗೂ ವಿಶ್ವದ 8ನೇ ಅತಿದೊಡ್ಡ ಸಿರಾಮಿಕ್ಸ್ ಟೈಲ್ಸ್ ಉತ್ಪಾದಕ ಸಂಸ್ಥೆ ಜಕಾರಿಯಾ ಸಿರಾಮಿಕ್ಸ್ ಕಳೆದ 20 ವರ್ಷದಲ್ಲಿ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಬೆಳೆದಿದೆ. ಅದರ ಷೇರುದಾರರು ಅಕ್ಷರಶಃ ಲಕ್ಷಾಧೀಶ್ವರ, ಕೋಟ್ಯಾಧೀಶ್ವರರಾಗಿದ್ದಾರೆ.

ಸರಿಯಾಗಿ 20 ವರ್ಷದ ಹಿಂದೆ, ಅಂದರೆ 2023ರ ಜುಲೈ 3ರಂದು ಕಜಾರಿಯಾ ಸಿರಾಮಿಕ್ಸ್ ಷೇರುಬೆಲೆ ಕೇವಲ 63 ಪೈಸೆ ಮಾತ್ರ ಇತ್ತು. ಇವತ್ತು ಅದರ ಬೆಲೆ 1,240 ರೂ ಅಗಿದೆ. ಆಗ ಇದರ ಷೇರುಗಳ ಮೇಲೆ 1 ಲಕ್ಷ ರೂ ಹೂಡಿಕೆಯನ್ನು ಯಾರಾದರೂ ಮಾಡಿದ್ದರೆ ಈಗ ಅವರ ಷೇರುಸಂಪತ್ತು 19.68 ಕೋಟಿ ರೂಗೆ ಏರುತ್ತಿತ್ತು.

ಇದನ್ನೂ ಓದಿMultibagger Stock: ಮಿಂಚಿನಂತೆ ಏರುತ್ತಿರುವ ಡಿದೇವ್ ಪ್ಲಾಸ್ಟಿಕ್ಸ್ ಷೇರು; 1 ವರ್ಷದಲ್ಲಿ 4 ಪಟ್ಟು ಬೆಳೆದಿದೆ ಮಲ್ಟಿಬ್ಯಾಗರ್

2023ರ ಮಾರ್ಚ್ 13ರಂದು ಷೇರುಬೆಲೆ ಕೇವಲ 34 ಪೈಸೆ ಇತ್ತು. ಆಗ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಈಗ 36.47 ಕೋಟಿ ರೂನಷ್ಟು ಕುಬೇರರಾಗಿರುತ್ತಿದ್ದರು. ಈ ಮೂಲಕ ಕಜಾರಿಯಾ ಸಿರಾಮಿಕ್ಸ್ ಅಪ್ಪಟ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಪರಿಣಿಮಿಸಿದೆ.

ಮೂರು ಹಂತಗಳಲ್ಲಿ ಕಜಾರಿಯಾ ಓಟ

ಕಜಾರಿಯಾ ಸಿರಾಮಿಕ್ಸ್ ಸಂಸ್ಥೆಯ ಅದ್ವಿತೀಯ ಷೇರುಪೇಟೆ ಓಟವನ್ನು ಮೂರು ಹಂತಗಳಾಗಿ ಗುರುತಿಸಬಹುದು. 2009ರಿಂದ 2012ರವರೆಗೆ ಇದರ ಷೇರುಬೆಲೆ 15ರೂನಿಂದ 100ರೂ ಮೇಲ್ಪಟ್ಟು ಹೋಯಿತು.

ಎರಡನೇ ಹಂತದ ಬೆಳವಣಿಗೆಯು 2013ರಿಂದ 2016ರವರೆಗೆ ಎಂಬುದನ್ನು ಗಮನಿಸಬಹುದು. ಈ ಅವಧಿಯಲ್ಲಿ ಕಜಾರಿಯಾ ಸಿರಾಮಿಕ್ಸ್​ನ ಷೇರುಬೆಲೆ 115ರೂನಿಂದ 725 ರೂಗೆ ಏರಿದೆ.

ಇದನ್ನೂ ಓದಿMultibagger: ಮೂರು ವರ್ಷದಲ್ಲಿ 18 ಪಟ್ಟು ಲಾಭ; 1 ಲಕ್ಷಕ್ಕೆ 18 ಲಕ್ಷ ರಿಟರ್ನ್; ಮಲ್ಟಿಬ್ಯಾಗರ್ ಆಗಿದೆ ಆರಿಯಾನ್​ಪ್ರೋ

ಇನ್ನು, ಮೂರನೇ ಹಂತವನ್ನು 2020ರಿಂದ ನಂತರದ ಅವಧಿಯದ್ದೆಂದು ಪರಿಗಣಿಸಬಹುದು. ಜಕಾರಿಯಾ ಸಿರಾಮಿಕ್ಸ್ ಸಂಸ್ಥೆಯ ಷೇರಬೆಲೆ ಈ ಹಂತದಲ್ಲಿ 340 ರೂನಿಂದ 1,257 ರೂವರೆಗೂ ಏರಿದೆ. 2022ರ ಒಂದು ಹಂತದಲ್ಲಿ ಅದರ ಬೆಲೆ 1350 ರೂಗಿಂತ ಮೇಲೆ ಹೋಗಿತ್ತು.

ಕಜಾರಿಯಾ ಸಿರಾಮಿಕ್ಸ್ ಸಂಸ್ಥೆಯ ಷೇರುಬೆಲೆ ಇಷ್ಟೊಂದು ಅಗಾಧವಾಗಿ ಬೆಳೆದಿರುವುದು ಸುಮ್ಮನೆ ನೀರಮೇಲಿನ ಗುಳ್ಳೆಯಂತಲ್ಲ. ಈ ಸಂಸ್ಥೆ ವಿಶ್ವದ 8ನೇ ಅತಿದೊಡ್ಡ ಸಿರಾಮಿಕ್ಸ್ ಟೈಲ್​ಗಳ ತಯಾರಕ ಸಂಸ್ಥೆಯಾಗಿದೆ. ಬಹಳ ದೊಡ್ಡ ಡೀಲರ್ಸ್ ನೆಟ್ವರ್ ಹೊದಿದೆ. ವ್ಯಾವಹಾರಿಕವಾಗಿ ಬಹಳ ಲಾಭದಲ್ಲಿದೆ. ಸಿರಾಮಿಕ್ಸ್ ಟೈಲ್ಸ್ ಎಂದರೆ ಡೀಫಾಲ್ಟ್ ಆಗಿ ಕಜಾರಿಯಾ ಕಂಪನಿಯೇ ಬಹಳ ಮಂದಿಯ ಆದ್ಯತೆಯಾಗಿದೆ. ಇವೆಲ್ಲವೂ ಕಾರಣ ಸೇರಿ ಕಜಾರಿಯಾ ಸಿರಾಮಿಕ್ಸ್​ನ ಷೇರಿಗೆ ಬಹುಬೇಡಿಕೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Mon, 3 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ