Multibagger Stock: ಮಿಂಚಿನಂತೆ ಏರುತ್ತಿರುವ ಡಿದೇವ್ ಪ್ಲಾಸ್ಟಿಕ್ಸ್ ಷೇರು; 1 ವರ್ಷದಲ್ಲಿ 4 ಪಟ್ಟು ಬೆಳೆದಿದೆ ಮಲ್ಟಿಬ್ಯಾಗರ್

Ddev Plastiks Industries: ಪಾಲಿಮರ್ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆ ಕಳೆದ 1 ವರ್ಷದಲ್ಲಿ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿದೆ. 38 ರೂ ಇದ್ದ ಅದರ ಷೇರುಬೆಲೆ ಇದೀಗ 204 ರೂ ಗಡಿದಾಟಿದೆ.

Multibagger Stock: ಮಿಂಚಿನಂತೆ ಏರುತ್ತಿರುವ ಡಿದೇವ್ ಪ್ಲಾಸ್ಟಿಕ್ಸ್ ಷೇರು; 1 ವರ್ಷದಲ್ಲಿ 4 ಪಟ್ಟು ಬೆಳೆದಿದೆ ಮಲ್ಟಿಬ್ಯಾಗರ್
ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಷೇರು
Follow us
|

Updated on: Jun 30, 2023 | 4:33 PM

ಕೋಲ್ಕತಾ ಮೂಲದ ಪಾಲಿಮರ್ ಉತ್ಪನ್ನಗಳ ತಯಾರಕ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆ (Ddev Plastiks Industries) ಇದೀಗ ಅಪ್ಪಟ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿದೆ. ಕಳೆದ 1 ವರ್ಷದಲ್ಲಿ ಇದರ ಷೇರುಬೆಲೆ ಶೇ. 387ರಷ್ಟು ಬೆಳೆದಿದೆ. 2022-23ರ ಹಣಕಾಸು ವರ್ಷದಲ್ಲಿ ಇದರ ವ್ಯಾವಹಾರಿಕ ಲಾಭದಲ್ಲೂ ಗಮನಾರ್ಹ ಏರಿಕೆ ಆಗಿದೆ. ಇದರ ಷೇರುದಾರರಿಗೆ ಡಬಲ್ ಧಮಾಕ ಸಿಕ್ಕಿದೆ. ಡಿದೇವ್ ಪ್ಲಾಸ್ಟಿಕ್ಸ್​ನ ಷೇರುಬೆಲೆ ಒಂದು ವರ್ಷದಲ್ಲಿ ಶೇ. 429ರಷ್ಟು ಬೆಳೆದಿರುವ ಜೊತೆಗೆ ಕಂಪನಿಯು ಷೇರುದಾರರಿಗೆ ಬೋನಸ್ ಷೇರುಗಳನ್ನು ಪ್ರಕಟಿಸಿದೆ.

ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್​ನ ನಿರ್ದೇಶಕರ ಮಂಡಳಿ ತನ್ನ ಕಂಪನಿಯ ಷೇರುದಾರರಿಗೆ 1:10 ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸಲು ಅನುಮೋದನೆ ನೀಡಿರುವುದಾಗಿ ಜೂನ್ 19ರಂದು ತಿಳಿಸಲಾಗಿದೆ. ಅಂದರೆ ಪ್ರತೀ 10 ಷೇರಿಗೆ 1 ಹೆಚ್ಚುವರಿ ಷೇರು ಸಿಗುತ್ತದೆ. ಜುಲೈ 16ರಂದು ನಡೆಯುವ ಮಂಡಳಿ ಸಭೆ ಆಗಿ 2 ತಿಂಗಳೊಳಗೆ ಬೋನಸ್ ಷೇರುಗಳು ಜಮೆ ಆಗುತ್ತವೆ.

ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಬೋನ್ ಷೇರುಗಳ ವಿಶೇಷತೆ ಎಂದರೆ ಇದರ ಷೇರು ಮೌಲ್ಯದಲ್ಲಿ ಯಾವುದೇ ವ್ಯತ್ಯಯ ಮಾಡದೆಯೇ ಹೆಚ್ಚುವರಿ ಷೇರು ವಿತರಿಸಲಾಗುತ್ತದೆ. ಹಾಗೆ ಮಾಡುವ ಕೆಲವೇ ಕಂಪನಿಗಳಲ್ಲಿ ಡಿದೇವ್ ಒಂದು. ಈ ಬೋನಸ್ ಷೇರುಗಳ ವಿತರಣೆಯಿಂದ ಕಂಪನಿಯ ಷೇರುಗಳ ಸಂಖ್ಯೆ ಹೆಚ್ಚುತ್ತದೆ. ಷೇರುಗಳ ಹರಿವು ಹೆಚ್ಚಾಗುತ್ತದೆ.

ಇದನ್ನೂ ಓದಿMultibagger: ಮೂರು ವರ್ಷದಲ್ಲಿ 18 ಪಟ್ಟು ಲಾಭ; 1 ಲಕ್ಷಕ್ಕೆ 18 ಲಕ್ಷ ರಿಟರ್ನ್; ಮಲ್ಟಿಬ್ಯಾಗರ್ ಆಗಿದೆ ಆರಿಯಾನ್​ಪ್ರೋ

ಡಿದೇವ್ ಪ್ಲಾಸ್ಟಿಕ್ಸ್ ಷೇರುಬೆಲೆ 38ರೂನಿಂದ 200ರೂಗೆ ಏರಿಕೆ

2022ರ ಜುಲೈ ಕೊನೆಯ ವಾರದಲ್ಲಿ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಬೆಲೆ 38.55 ರೂ ಇತ್ತು. ಕೇವಲ 1 ವರ್ಷದೊಳಗಾಗಿ ಅದರ ಬೆಲೆ 200 ರೂ ಗಡಿದಾಟಿದೆ. ನಿನ್ನೆ ಜೂನ್ 29ರಂದು 197 ರೂ ಇದ್ದ ಅದರ ಬೆಲೆ ಇಂದು 204.20 ರೂ ಆಗಿದೆ. ಅಂದರೆ, ಅದರ ಬೆಲೆ ಒಂದು ವರ್ಷದಲ್ಲಿ ಶೇ. 429ರಷ್ಟು ಹೆಚ್ಚಾಗಿದೆ.

ಒಳ್ಳೆಯ ಲಾಭದಲ್ಲಿರುವ ಡಿದೇವ್ ಪ್ಲಾಸ್ಟಿಕ್ಸ್

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಮುಖ್ಯಕಚೇರಿ ಹೊಂದಿರುವ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆ ಪಾಲಿಮರ್ ಕೆಮಿಕಲ್ ಉತ್ಪನ್ನಗಳನ್ನು ತಯಾರಿಸುತ್ತದೆ. ಪಿಇ, ಪಿವಿಸಿ, ಫಿಲ್ಲರ್ ಕೌಂಪೌಂಡ್, ಮಾಸ್ಟರ್ ಬ್ಯಾಚಸ್, ಫೂಟ್​ವೇರ್ ಕಾಂಪೌಂಡ್, ಪೈಪ್ ಕಾಂಪೌಂಡ್, ಪೆರಾಕ್ಸೈಡ್ ಕಾಂಪೌಂಡ್ ಇತ್ಯಾದಿ ಉತ್ಪನ್ನಗಳನ್ನು ಇದು ತಯಾರಿಸುತ್ತದೆ.

ಇದರ ಆದಾಯ 2022-23ರ ವರ್ಷದಲ್ಲಿ 667 ಕೋಟಿ ರೂ ಇದೆ. ನಿವ್ವಳ ಆದಾಯ 48 ಕೋಟಿ ರೂಗೂ ಹೆಚ್ಚಿದೆ. ಇದರ ಒಟ್ಟು ಷೇರುಸಂಪತ್ತು 1928 ಕೋಟಿ ರೂನಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು