AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhan Vriddhi Policy: ಎಲ್​ಐಸಿ ಧನ ವೃದ್ಧಿ ಯೋಜನೆ; ಇದು ನಿಮ್ಮ ಪಾಲಿನ ಮನಿಪ್ಲಾಂಟ್; ಬೇಕಷ್ಟು ಬೆಳೆಸಿ, ಬೇಕೆಂದಾಗ ಹಿಂಪಡೆಯಿರಿ

LIC New Policy Till 30 September: 2023 ಜೂನ್ 23ರಂದು ಬಿಡುಗಡೆ ಆದ ಎಲ್​ಐಸಿ ಧನ್ ವೃದ್ಧಿ ಸ್ಕೀಮ್ ಸೆಪ್ಟಂಬರ್ 30ರವರೆಗೂ ಲಭ್ಯ ಇದೆ. ಪಾಲಿಸಿಯನ್ನು ಯಾವಾಗ ಬೇಕಾದರೂ ಸರೆಂಡ್ ಮಾಡುವ ಅವಕಾಶ ಇರುವ ಈ ಪಾಲಿಸಿಯ ಬಗ್ಗೆ ಮಾಹಿತಿ ಇಲ್ಲಿದೆ...

Dhan Vriddhi Policy: ಎಲ್​ಐಸಿ ಧನ ವೃದ್ಧಿ ಯೋಜನೆ; ಇದು ನಿಮ್ಮ ಪಾಲಿನ ಮನಿಪ್ಲಾಂಟ್; ಬೇಕಷ್ಟು ಬೆಳೆಸಿ, ಬೇಕೆಂದಾಗ ಹಿಂಪಡೆಯಿರಿ
ಎಲ್​ಐಸಿ ಧನ್ ವೃದ್ಧಿ ಪಾಲಿಸಿ
TV9 Web
| Edited By: |

Updated on: Jun 30, 2023 | 2:50 PM

Share

ಭಾರತದ ನಂಬರ್ ಒನ್ ವಿಮಾ ಸಂಸ್ಥೆ ಎಲ್​ಐಸಿ (LIC) ವಿವಿಧ ರೀತಿಯ ಇನ್ಷೂರೆನ್ಸ್ ಸ್ಕೀಮ್​ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಮಾರುಕಟ್ಟೆಯ ಅಗತ್ಯಗಳಿಗೆ ಮತ್ತು ವಿವಿಧ ಸ್ತರಗಳ ಜನರ ಅಗತ್ಯಗಳಿಗೆ ತಕ್ಕಂತೆ ಹೊಸ ಪಾಲಿಸಿ ಬಿಡುಗಡೆ ಮಾಡುತ್ತದೆ. ಎಲ್​ಐಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಧನ್ ವೃದ್ಧಿ (LIC Dhan Vriddhi) ಎಂಬ ಹೊಸ ಸ್ಕೀಮ್ ಬಹಳ ಮಂದಿಯ ಗಮನ ಸೆಳೆದಿದೆ. ಇದು ಮಾಮೂಲಿಯ ಎಲ್​ಐಸಿ ಸ್ಕೀಮ್​ಗಿಂತ ತುಸು ಭಿನ್ನ. ಹೂಡಿಕೆದಾರರಿಗೆ ಹೆಚ್ಚಿನ ಹಣಕಾಸು ಸ್ವಾತಂತ್ರ್ಯ ಕೊಡುವ ಸ್ಕೀಮ್ ಇದು. 2023, ಸೆಪ್ಟಂಬರ್ 30ರವರೆಗೂ ಈ ಪಾಲಿಸಿ ಲಭ್ಯ ಇರುತ್ತದೆ. ಎಲ್​ಐಸಿ ಧನ್ ವೃದ್ಧಿ ಸ್ಕೀಮ್​ನಲ್ಲಿ ಕೆಲ ವಿಶೇಷ ಫೀಚರ್​ಗಳಿದ್ದು, ಅದರ ವಿವರ ಇಲ್ಲಿದೆ

ಯಾವಾಗ ಬೇಕಾದರೂ ಪಾಲಿಸಿ ಮರಳಿಸಿ

ಎಲ್​ಐಸಿ ಧನ್ ವೃದ್ಧಿ ಪಾಲಿಸಿಯ ವಿಶೇಷತೆಗಳಲ್ಲಿ ಒಂದೆಂದರೆ ಅದು ಪಾಲಿಸಿಯನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡುವ ಅವಕಾಶ ಇರುವುದು. ಪಾಲಿಸಿದಾರರು ತಮ್ಮ ಅಗತ್ಯತೆ ಮತ್ತು ಸಂದರ್ಭಗಳಿಗೆ ತಕ್ಕಂತೆ ಪ್ಲಾನ್​ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ಇರುತ್ತದೆ.

ಹಾಗೆಯೇ, ಪಾಲಿಸಿ ಅವಧಿಯಲ್ಲೂ ಫ್ಲೆಕ್ಸಿಬಿಲಿಟಿ ಇದೆ. ಅಲ್ಪ ಅವಧಿಯಿಂದ ಹಿಡಿದು ದೀರ್ಘ ಅವಧಿಯವರೆಗೆ ವಿವಿಧ ಕಾಲಗಳಿಗೆ ಪಾಲಿಸಿ ಪಡೆಯಬಹುದು. 10, 15 ಮತ್ತು 18 ವರ್ಷಗಳ ಅವಧಿಗೆ ಈ ಪಾಲಿಸಿ ಲಭ್ಯ ಇದೆ.

ಇದನ್ನೂ ಓದಿHealth Insurance: ತೂಕ ಕಡಿಮೆ ಮಾಡಿಕೊಂಡ್ರೆ ಸಿಗುತ್ತೆ ಅಗ್ಗದ ಆರೋಗ್ಯ ವಿಮೆ!

ನೀವು ಮಧ್ಯದಲ್ಲಿ ಯಾವಾಗ ಬೇಕಾದರೂ ಪಾಲಿಸಿ ಕೈಬಿಡಬಹುದು. ಪಾಲಿಸಿ ಆರಂಭಿಸಿ 3 ವರ್ಷದೊಳಗೆ ನೀವು ಹಿಂಪಡೆಯುವುದಾದರೆ, ನೀವು ಅಲ್ಲಿಯವರೆಗೆ ಕಟ್ಟಿದ ಪ್ರೀಮಿಯಮ್​ನ ಶೇ. 75ರಷ್ಟು ಮೊತ್ತವನ್ನು ಪಡೆಯಬಹುದು. 3 ವರ್ಷ ಮೇಲ್ಪಟ್ಟಿದ್ದರೆ ಶೇ. 90ರಷ್ಟು ಪ್ರೀಮಿಯಮ್ ಸಿಗುತ್ತದೆ.

ಎಲ್​ಐಸಿ ಧನ್ ವೃದ್ಧಿ ಪಾಲಿಸಿಯಲ್ಲಿ ಕನಿಷ್ಠ ವಯಸ್ಸು 90ದಿನದಿಂದ ಹಿಡಿದು 8 ವರ್ಷದವರೆಗೂ ಇದೆ. ಗರಿಷ್ಠ ವಯಸ್ಸು 32 ವರ್ಷದಿಂದ 60 ವರ್ಷದವರೆಗೂ ಇದೆ.

ಈ ಪಾಲಿಸಿಯಲ್ಲಿ ಕನಿಷ್ಠ ಭರವಸೆಯ ಮೊತ್ತ (ಬೇಸಿಕ್ ಸಮ್ ಅಶೂರ್ಡ್) 1,25,000 ರೂ ಇದೆ. ಇದರ ಜೊತೆಗೆ ಪ್ರತೀ 1,000 ರೂಗೆ 25ರಿಂದ 75 ರೂವರೆಗೆ ಪ್ರತೀ ವರ್ಷವೂ ಹೆಚ್ಚುವರಿ ಹಣ ಜಮೆಯಾಗುತ್ತಾ ಹೋಗುತ್ತದೆ.

ಇದನ್ನೂ ಓದಿLIC Saral Pension: ಲಕ್ಷ ರೂ ಆದಾಯ ಬರುವಂತಾಗಬೇಕಾ? ಇಲ್ಲಿದೆ ಎಲ್​ಐಸಿ ಸರಳ್ ಪೆನ್ಷನ್ ಪ್ಲಾನ್

ಪಾಲಿಸಿ ಮೆಚ್ಯೂರ್ ಆದಾಗ ಬೇಸಿಕ್ ಸಮ್ ಅಶೂರ್ಡ್​ನಲ್ಲಿರುವ ಮೊತ್ತದ ಜೊತೆಗೆ ಹೆಚ್ಚುವರಿ ಹಣವೂ ಸೇರಿ ಸಿಗುತ್ತದೆ. ಬೇರೆ ಸ್ಕೀಮ್​ಗಳಂತೆ ಇದರಲ್ಲೂ ಸಾಲ ಪಡೆಯುವ ಅವಕಾಶ ಇರುತ್ತದೆ. ಬಡ್ಡಿ ದರ ಬಹಳ ಕಡಿಮೆ ಇರುತ್ತದೆ.

ಎಲ್​ಐಸಿ ಧನ್ ವೃದ್ಧಿ ಪಾಲಿಸಿ ಎಲ್ಲಿ ಪಡೆಯಬಹುದು?

ಎಲ್​ಐಸಿ ಧನ್ ವೃದ್ಧಿ ಪಾಲಿಸಿಯು ಎಲ್​ಐಸಿಯ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯ ಇದೆ. ಯಾರಾದರೂ ಇನ್ಷೂರೆನ್ಸ್ ಏಜೆಂಟ್ ಮೂಲಕ ಪಾಲಿಸಿ ಪಡೆಯಬಹುದು. ಅಥವಾ ವಿಮಾ ಕೇಂದ್ರವೊಂದಕ್ಕೆ ಹೋಗಿ ಅಲ್ಲಿಯೂ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ