Accident Insurance: ಅಪಘಾತ ವಿಮೆ ಬಹಳ ಮುಖ್ಯ; ಆಕ್ಸಿಡೆಂಟ್ ಇನ್ಷೂರೆನ್ಸ್ ಖರೀದಿಸುವ ಮುನ್ನ ಈ ಅಂಶ ತಿಳಿದಿರಲಿ
Personal Accident Insurance, Important Update: ಅಗ್ನಿ ಅವಘಡ, ಸ್ಫೋಟ, ರಸ್ತೆ ಅಪಘಾತ, ರೈಲು ಅಪಘಾತ ಇತ್ಯಾದಿ ಅವಘಡಗಳನ್ನು ಈ ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರ್ ಮಾಡುತ್ತದೆ. ಇದರಲ್ಲಿ ಪರ್ಸನಲ್ ಇನ್ಷೂರೆನ್ಸ್ ಮತ್ತು ಗ್ರೂಪ್ ಇನ್ಷೂರೆನ್ಸ್ ಎಂಬ ಎರಡು ವಿಧ ಇರುತ್ತದೆ.
ನಾವು ಏನೇ ಹಣಕಾಸು ಯೋಜನೆ ಹಾಕಿಕೊಂಡರೂ ವಿಧಿಯ ಲೆಕ್ಕ ಬೇರೆ ರೀತಿ ಇರುತ್ತದೆ. ನಮ್ಮ ತಿಂಗಳ ಬಜೆಟ್ ಇಷ್ಟಿಷ್ಟು ಎಂದು ಫಿಕ್ಸ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಜೀವನಶೈಲಿ ರೂಪಿಸಿಕೊಂಡು ಜಾಣರೆನಿಸಿಕೊಳ್ಳುತ್ತೇವೆ. ಆದರೆ, ಆಪತ್ಕಾಲ ಎಂಬೊಂದು ಭೂತ ಯಾರದ್ದೇ ಜೀವನದಲ್ಲಿ ಯಾವ ಹಂತದಲ್ಲಿಯಾದರೂ ಬಂದೆರಗಬಹುದು. ಆಪತ್ಕಾಲ ಎಂದರೆ ನಾವು ನಿರೀಕ್ಷಿಸದ ಸಂದರ್ಭಗಳು (Unexpected Incidents). ಅನಾರೋಗ್ಯವೋ, ಅಪಘಾತವೋ ಏನಾದರೊಂದು ಸಂಭವಿಸಿ ನಮ್ಮನ್ನು ತನು, ಮನ, ಧನ ಸಮೇತ ಊನ ಮಾಡಬಹುದು. ಇಂಥ ಸಂದರ್ಭಗಳಲ್ಲಿ ಆಗುವ ಹಾನಿಯನ್ನು ಕಡಿಮೆ ಮಾಡುವ ಅವಕಾಶವಷ್ಟೇ ನಮ್ಮ ಕೈಲಿರುವುದು. ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಸಂಭವಿಸಿದ ರೈಲುದುರಂತವನ್ನು ಯಾರು ನಿರೀಕ್ಷಿಸಿದ್ದರು..? 290ಕ್ಕೂ ಹೆಚ್ಚು ಮಂದಿ ಅಸುನೀಗಿದರೆ, 1000 ಮಂದಿ ಗಾಯಗೊಂಡರು. ಅವರನ್ನು ನಂಬಿಕೊಂಡ ಕುಟುಂಬಗಳಿದ್ದರೆ ಅವರ ಕಥೆ ಏನು? ಹೀಗಾಗಿ, ಹೆಲ್ತ್ ಇನ್ಷೂರೆನ್ಸ್, ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಬಹಳ ಮುಖ್ಯ ಎನಿಸುತ್ತವೆ. ಈ ರೀತಿಯ ವಿಮೆಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…
ವೈಯಕ್ತಿಕ ಅಪಘಾತ ವಿಮೆ ಎಂದರೇನು?
ಇದು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯಲ್ಲೇ ಒಳಗೊಳ್ಳಲಾಗುವ ಪ್ಲಾನ್. ಅಪಘಾತವಾಗಿ ಗಾಯಗೊಂಡಾಗ ನಿಮಗೆ ಪರಿಹಾರ ಸಿಗುತ್ತದೆ. ಅಪಘಾತದಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದೇ, ಅದರಿಂದ ಸಂಬಳ ಬಂದಿಲ್ಲವಾದರೆ ಅದಕ್ಕೂ ಈ ವಿಮೆ ಪರಿಹಾರ ಕೊಡಬಲ್ಲುದು.
ಅಗ್ನಿ ಅವಘಡ, ಸ್ಫೋಟ, ರಸ್ತೆ ಅಪಘಾತ, ರೈಲು ಅಪಘಾತ ಇತ್ಯಾದಿ ಅವಘಡಗಳನ್ನು ಈ ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರ್ ಮಾಡುತ್ತದೆ. ಇದರಲ್ಲಿ ಪರ್ಸನಲ್ ಇನ್ಷೂರೆನ್ಸ್ ಮತ್ತು ಗ್ರೂಪ್ ಇನ್ಷೂರೆನ್ಸ್ ಎಂಬ ಎರಡು ವಿಧ ಇರುತ್ತದೆ.
ಗ್ರೂಪ್ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಪ್ಲಾನ್ನಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿಗೆ ಸೇರಿಸಿ ಮಾಡಲಾಗುವ ಸ್ಕೀಮ್. ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ನೊಳಗೆಯೇ ಇದೂ ಬರುತ್ತದೆ. ಸಾವಾದರೆ ವಾರಸುದಾರರಿಗೆ ಪರಿಹಾರ ಸಿಗುತ್ತದೆ. ಅಪಘಾತವಾದರೆ ಅದರಲ್ಲಿಯೂ ನಾನಾ ರೀತಿಯ ಪರಿಹಾರ ಲಭ್ಯ ಇರುತ್ತದೆ. ಆಸ್ಪತ್ರೆ ವೆಚ್ಚ, ನಿರ್ದಿಷ್ಟ ಅವಧಿ ಜೀವನ ವೆಚ್ಚ ಇತ್ಯಾದಿಯನ್ನು ಇನ್ಷೂರೆನ್ಸ್ ಕಂಪನಿಗಳೇ ಭರಿಸುತ್ತವೆ.
ಗ್ರೂಪ್ ಇನ್ಷೂರೆನ್ಸ್ಗಿಂತ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಪ್ಲಾನ್ನಲ್ಲಿ ಹೆಚ್ಚು ವ್ಯಾಪ್ತಿ ಇರುತ್ತದೆ. ಹೀಗಾಗಿ, ನೀವು ಹೆಲ್ತ್ ಇನ್ಷೂರೆನ್ಸ್ ಖರೀದಿಸುವಾಗ ಆ್ಯಕ್ಸಿಡೆಂಟ್ ವಿಮಾ ನೀತಿ ಬಗ್ಗೆ ಮಾಹಿತಿ ತಿಳಿದಿರಿ. ಪ್ರೀಮಿಯಂ ಕಟ್ಟುವುದು ತುಸು ಹೆಚ್ಚಾದರೂ ಅನಿರೀಕ್ಷಿತ ಸಂದರ್ಭಗಳು ಎದುರಾಗುವುದನ್ನು ಗಣನೆಗೆ ತೆಗೆದುಕೊಂಡರೆ ಇದು ಅನುಕೂಲ ಎನಿಸುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Mon, 5 June 23