Green FD: ಗ್ರೀನ್ ಫಿಕ್ಸೆಡ್ ಡೆಪಾಸಿಟ್; ಗ್ರಾಹಕರ ಹಣದಿಂದ ಯಾರಿಗೆ ಸಾಲ? ಬ್ಯಾಂಕುಗಳಿಂದ ಆರ್​ಬಿಐಗೆ ಮಾಹಿತಿ ಕಡ್ಡಾಯ; ಇದೇನಿದು ಗ್ರೀನ್ ಎಫ್​ಡಿ?

RBI New Rules On Green Fixed Deposits: ಬದಲಾದ ನಿಯಮದ ಪ್ರಕಾರ, ಗ್ರೀನ್ ಡೆಪಾಸಿಟ್ ಪ್ಲಾನ್​ನಲ್ಲಿ ಗ್ರಾಹಕ ಇರಿಸುವ ಠೇವಣಿ ಹಣವನ್ನು ಬ್ಯಾಂಕುಗಳು ಎಲ್ಲಿ ಹೂಡಿಕೆ ಮಾಡುತ್ತವೆ ಎಂಬುದನ್ನು ಆರ್​ಬಿಐಗೆ ತಿಳಿಸುವುದು ಕಡ್ಡಾಯಪಡಿಸಲಾಗಿದೆ.

Green FD: ಗ್ರೀನ್ ಫಿಕ್ಸೆಡ್ ಡೆಪಾಸಿಟ್; ಗ್ರಾಹಕರ ಹಣದಿಂದ ಯಾರಿಗೆ ಸಾಲ? ಬ್ಯಾಂಕುಗಳಿಂದ ಆರ್​ಬಿಐಗೆ ಮಾಹಿತಿ ಕಡ್ಡಾಯ; ಇದೇನಿದು ಗ್ರೀನ್ ಎಫ್​ಡಿ?
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2023 | 1:46 PM

ಗ್ರೀನ್ ಬಾಂಡ್ ಬಗ್ಗೆ ನೀವು ಕೇಳಿರಬಹುದು. ಈಗ ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳು (Green FD) ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಈ ಹಸಿರು ನಿಶ್ಚಿತ ಠೇವಣಿ ಯೋಜನೆ ಸಂಬಂಧ ಆರ್​ಬಿಐ ಹೊಸ ನಿಯಮ ಮಾಡಿದ್ದು, ಜೂನ್ 1ರಿಂದ ಇದು ಚಾಲ್ತಿಗೆ ಬಂದಿದೆ. ಈ ಬದಲಾದ ನಿಯಮದ ಪ್ರಕಾರ, ಗ್ರೀನ್ ಡೆಪಾಸಿಟ್ ಪ್ಲಾನ್​ನಲ್ಲಿ ಗ್ರಾಹಕ ಇರಿಸುವ ಠೇವಣಿ ಹಣವನ್ನು ಬ್ಯಾಂಕುಗಳು ಎಲ್ಲಿ ಹೂಡಿಕೆ ಮಾಡುತ್ತವೆ ಎಂಬುದನ್ನು ಆರ್​ಬಿಐಗೆ ತಿಳಿಸುವುದು ಕಡ್ಡಾಯಪಡಿಸಲಾಗಿದೆ. ಪರಿಸರ ಕಾಳಜಿಯಿಂದ ಠೇವಣಿ ಇಡುವ ಗ್ರಾಹಕರ ಹೂಡಿಕೆ ನೈಜ ಉದ್ದೇಶಕ್ಕೆ ಬಳಕೆ ಆಗುವುದನ್ನು ಖಾತ್ರಿಪಡಿಸಲು ರಿಸರ್ವ್ ಬ್ಯಾಂಕ್ ಇಂತಹದ್ದೊಂದು ನಿಯಮ ರೂಪಿಸಿದೆ.

ಏನಿದು ಗ್ರೀನ್ ಡೆಪಾಸಿಟ್?

ಗ್ರೀನ್ ಡೆಪಾಸಿಟ್​ನಲ್ಲಿ ಗ್ರಾಹಕರು ಇರಿಸುವ ಠೇವಣಿ ಹಣವನ್ನು ಪರಿಸರಸ್ನೇಹಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತದೆ. ಮರುಬಳಕೆ ಇಂಧನ ಯೋಜನೆ, ಎಲೆಕ್ಟ್ರಿಕ್ ವಾಹನ ತಯಾರಿಕೆ, ಕಸ ತ್ಯಾಜ್ಯ ನಿರ್ವಹಣೆ ಇತ್ಯಾದಿ ಯೋಜನೆಗಳಿಗೆ ಬ್ಯಾಂಕುಗಳು ಸಾಲ ಕೊಡಲು ಗ್ರೀನ್ ಡೆಪಾಸಿಟ್ ಹಣವನ್ನು ಬಳಸುತ್ತವೆ. ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಗುರಿ (ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ಸ್) ಈಡೇರಿಸುವ ಯೋಜನೆಗಳಿಗೆ ಈ ಹಣ ವ್ಯಯವಾಗಬೇಕು. ಬೇರೆ ಯಾವ ಯೋಜನೆಗಳಿಗೂ ಗ್ರೀನ್ ಡೆಪಾಸಿಟ್​ನ ಹಣವನ್ನು ಸಾಲವಾಗಿ ನೀಡುವಂತಿಲ್ಲ. ಗ್ರೀನ್ ಬಾಂಡ್​ಗಳಂತೆಯೇ ಗ್ರೀನ್ ಡೆಪಾಸಿಟ್​ಗಳೂ ಬಳಕೆಯ ಅಗುತ್ತವೆ.

ಇದನ್ನೂ ಓದಿLocker Rules: ಬ್ಯಾಂಕ್ ಲಾಕರ್ ಹಾಳಾದರೆ ಯಾರು ಹೊಣೆ? ಆರ್​ಬಿಐ ನಿಯಮಗಳು ಬದಲಾಗಿವೆ; ಒಪ್ಪಂದ ನವೀಕರಿಸುವ ಮುನ್ನ ತಿಳಿದಿರಿ, ಇಲ್ಲಿದೆ ಡೀಟೇಲ್ಸ್

ತಮ್ಮ ಹಣ ಪರಿಸರಸ್ನೇಹಿ ಕಾರ್ಯಗಳಿಗೆ ಸಹಾಯವಾಗಲಿ ಎಂಬ ಉದ್ದೇಶ ಇರುವವರು ಇಂಥ ಗ್ರೀನ್ ಸ್ಕೀಮ್​ಗಳನ್ನು ಪಡೆದುಕೊಳ್ಳಬಹುದು. ಪರಿಸರಸ್ನೇಹಿ ಯೋಜನೆಗಳಿಗೆ ತಮ್ಮ ಕೈಲಾದ ಸಹಾಯ ಮಾಡಿದ ತೃಪ್ತಿ ಹೂಡಿಕೆದಾರರಿಗೆ ಸಿಗುತ್ತದೆ.

ಗ್ರೀನ್ ಡೆಪಾಸಿಟ್ ಸ್ಕೀಂ​ಗೆ ಬಡ್ಡಿ ಎಷ್ಟು ಇತ್ಯಾದಿ ವಿವರ

ಯೂನಿಯನ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್, ಎಚ್​ಎಸ್​ಬಿಸಿ, ಎಚ್​ಡಿಎಫ್​ಸಿ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಹೀಗೆ ಬಹುತೇಕ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲೂ ಗ್ರಾಹಕರು ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಇಡಬಹುದು. ಇದಕ್ಕೆ ನೀಡಲಾಗುವ ಬಡ್ಡಿ ವಿವಿಧ ಬ್ಯಾಂಕುಗಳಲ್ಲಿ ವಿವಿಧ ದರಗಳಿವೆ.

ಇದನ್ನೂ ಓದಿUPI: ಪೇಟಿಎಂ, ಫೋನ್​ಪೇ ಇತ್ಯಾದಿ ಬಳಸಿ ಜನರು ಮೇ ತಿಂಗಳಲ್ಲಿ ನಡೆಸಿದ ವಹಿವಾಟು 14 ಲಕ್ಷ ಕೋಟಿ ರೂ

ಎಚ್​ಡಿಎಫ್​ಸಿಯ ಗ್ರೀನ್ ಎಫ್​ಡಿ ಸ್ಕೀಮ್​ನಲ್ಲಿ 3 ವರ್ಷದಿಂದ 5 ವರ್ಷದವರೆಗಿನ ಅವಧಿಯ ಠೇವಣಿಗೆ ವರ್ಷಕ್ಕೆ ಶೇ. 7.3ರಷ್ಟು ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 0.25ರಷ್ಟು ಹೆಚ್ಚು ಬಡ್ಡಿ ಬರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ