AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12,500 Bogus Entities: ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೃಷ್ಟಿಸುವ 12,500 ನಕಲಿ ಸಂಸ್ಥೆಗಳನ್ನು ಗುರುತಿಸಿದ ಸಿಬಿಐಸಿ

CBIC Special Drive Against Fake ITC: ನಕಲಿ ಕಂಪನಿಗಳ ಮೂಲಕ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೃಷ್ಟಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಸಿಬಿಐಸಿ ಇದೂವರೆಗೂ 12,500ದಷ್ಟು ಇಂಥ ನಕಲಿ ಸಂಸ್ಥೆಗಳನ್ನು ಗುರುತಿಸಿದೆ.

12,500 Bogus Entities: ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೃಷ್ಟಿಸುವ 12,500 ನಕಲಿ ಸಂಸ್ಥೆಗಳನ್ನು ಗುರುತಿಸಿದ ಸಿಬಿಐಸಿ
ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 02, 2023 | 11:53 AM

ನವದೆಹಲಿ: ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೃಷ್ಟಿಸುವ ಮೂಲಕ ತೆರಿಗೆ ವಂಚನೆ ನಡೆಸಲಾಗುತ್ತಿರುವ ಪ್ರಕರಣಗಳ ಜಾಡುಹಿಡಿದ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (CBIC- Cetral Board of Indirect Tax and Customs) ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೆ 12,500 ನಕಲಿ ಸಂಸ್ಥೆಗಳನ್ನು (Fake Entities) ಗುರುತಿಸಿದೆ. ಜುಲೈ 15ರವರೆಗೂ ಸಿಬಿಐಸಿ ಕಾರ್ಯಾಚರಣೆ ಮುಂದುವರಿಯಲಿದ್ದು, ಇನ್ನೂ ಹಲವಾರು ನಕಲಿ ಕಂಪನಿಗಳನ್ನು ಬಯಲಿಗೆಳೆಯುವ ಸಾಧ್ಯತೆ ಇದೆ. ಸಿಬಿಐಸಿಯ ವಿಶೇಷ ಕಾರ್ಯಾಚರಣೆಯಲ್ಲಿ (Special Drive) ಈವರೆಗೂ ಪರಿಶೀಲಿಸಲಾದ 50,000 ಕಂಪನಿಗಳ ಪೈಕಿ ಕಾಲುಭಾಗದಷ್ಟು ನಕಲಿಯಾಗಿರುವುದು ತಿಳಿದುಬಂದಿದೆ ಎಂದು ಸಿಬಿಐಸಿ ಛೇರ್ಮನ್ ವಿವೇಕ್ ಜೋಹ್ರಿ ಹೇಳಿದ್ದಾರೆ. ಈ ಹೆಚ್ಚಿನ ನಕಲಿ ಕಂಪನಿಗಳು ಗುಜರಿ, ಮಾನವಸಂಪನ್ಮೂಲ ಸರಬರಾಜು ಕ್ಷೇತ್ರಗಳಿಗೆ ಸೇರಿದ್ದಾಗಿರುವುದು ಕಂಡುಬಂದಿದೆ.

ಭಾರತದಲ್ಲಿ ಜಿಎಸ್​ಟಿ ವ್ಯವಸ್ಥೆ ಜಾರಿಗೆ ಬಂದು 6 ವರ್ಷಗಳಾದವು. ತೆರಿಗೆ ವಂಚನೆಗಳನ್ನು ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ತೆರಿಗೆಪಾವತಿದಾರರು ಅಕ್ರಮ ಎಸಗದ ರೀತಿಯಲ್ಲಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುತ್ತಿದೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೃಷ್ಟಿಸುತ್ತಿರುವ ಪ್ರಕರಣಗಳು ಬಹಳ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬರುತ್ತಿದ್ದರಿಂದ ಮೇಲ ತಿಂಗಳಲ್ಲಿ ಸಿಬಿಐಸಿ ಸ್ಪೆಷಲ್ ಡ್ರೈವ್ ಆರಂಭಿಸಿತ್ತು. ಎರಡು ತಿಂಗಳ ಈ ಕಾರ್ಯಾಚರಣೆ ಜುಲೈ 15ರವರೆಗೂ ನಡೆಯಲಿದೆ. ಆದರೆ, ಅದಕ್ಕೆ ಮುನ್ನ ಜುಲೈ 11ರಂದು ನಡೆಯುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಶೇಷ ಕಾರ್ಯಾಚರಣೆಯ ವಿವರಗಳನ್ನು ಅವಲೋಕಿಸುವ ಸಾಧ್ಯತೆ ಇದೆ.

ಇದನ್ನೂ ಓದಿApple Market Cap: ಆ್ಯಪಲ್, 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಪಡೆದ ವಿಶ್ವದ ಮೊದಲ ಕಂಪನಿ

ಏನಿದು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್?

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎಂಬುದು ಒಂದು ಉತ್ಪನ್ನಕ್ಕೆ ಎರಡೆರಡು ಬಾರಿ ತೆರಿಗೆ ಕಟ್ಟುವುದನ್ನು ತಪ್ಪಿಸಲು ಸರ್ಕಾರ ಮಾಡಿರುವ ವ್ಯವಸ್ಥೆ. ಉದಾಹರಣೆಗೆ, ಒಂದು ಉತ್ಪನ್ನವನ್ನು ತಯಾರಿಸುವಾಗ ವಿವಿಧ ಹಂತಗಳಲ್ಲಿ ತೆರಿಗೆ ತೆರಬೇಕಾಗುತ್ತದೆ. ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ಕಚ್ಛಾ ಸಾಮಗ್ರಿಯನ್ನು ಖರೀದಿಸುವಾಗ ಜಿಎಸ್​ಟಿ ಪಾವತಿಸಬೇಕು. ಉತ್ಪನ್ನ ಸಿದ್ಧಗೊಂಡು ಮಾರುವಾಗ ಜಿಎಸ್​ಟಿ ಕಟ್ಟಬೇಕು. ಆದರೆ, ಕಚ್ಛಾ ಸಾಮಗ್ರಿ ಖರೀದಿಸುವಾಗ ಪಾವತಿಸಲಾದ ತೆರಿಗೆಯನ್ನು ನಂತರದಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆ ಮೂಲಕ ಕ್ಲೈಮ್ ಮಾಡಿಕೊಳ್ಳಬಹುದು.

ಇದನ್ನೂ ಓದಿGST Collection: ಜೂನ್ ತಿಂಗಳ ಜಿಎಸ್​​ಟಿ ಸಂಗ್ರಹದಲ್ಲಿ ಭರ್ಜರಿ ಹೆಚ್ಚಳ; ಕಳೆದ ವರ್ಷಕ್ಕಿಂತ ಶೇ 12ರಷ್ಟು ಹೆಚ್ಚು

ಅದರೆ, ಅನೇಕ ಸಂಸ್ಥೆಗಳು ಈ ವ್ಯವಸ್ಥೆಯನ್ನು ದುರುಪಯೋಗಿಸಿಕೊಳ್ಳುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು 60,000 ಸಂಸ್ಥೆಗಳನ್ನು ಇಂಥ ಸಂಶಯದ ಮೇಲೆ ಪಟ್ಟಿ ಮಾಡಿದ್ದವು. ಈ ಪೈಕಿ ಈವರೆಗೂ 50,000 ಸಂಸ್ಥೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಈ ಪೈಕಿ 12,500 ಸಂಸ್ಥೆಗಳು ನಕಲಿ ಎಂಬುದು ಗೊತ್ತಾಗಿದೆ. ಹೆಚ್ಚಿನ ಇಂಥ ನಕಲಿ ಕಂಪನಿಗಳು ಗುಜರಿ, ಪ್ಲಾಸ್ಟಿಕ್, ಪೇಪರ್ ರದ್ದಿ, ಮಾನವಸಂಪನ್ಮೂಲ ಸರಬರಾಜು, ಜಾಹೀರಾತು ಕ್ಷೇತ್ರಗಳಲ್ಲಿ ಇವೆ. ದೆಹಲಿ, ಹರ್ಯಾಣ, ರಾಜಸ್ಥಾನ, ಗುಜರಾತ್, ನೋಯ್ಡಾ, ಕೋಲ್ಕತಾ, ಅಸ್ಸಾಮ್, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಈ ನಕಲಿ ಕಂಪನಿಗಳ ವಿಳಾಸ ಇರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್