Home Loan: ಸಾಲಕ್ಕೆ ಇಎಂಐ ಹುಷಾರ್..! 50 ಲಕ್ಷ ಸಾಲ ಪಡೆದು 40 ವರ್ಷ ಇಎಂಐ ಆದರೆ ಕಟ್ಟುವ ಬಡ್ಡಿಯೇ 1.27 ಕೋಟಿ ರೂ

Higher The EMI, Bigger The Interest: ಬಜಾಜ್ ಹೌಸಿಂಗ್ ಫೈನಾನ್ಸ್ ಸಂಸ್ಥೆ ಗೃಹಸಾಲಕ್ಕೆ ಗರಿಷ್ಠ ಇಎಂಐ ಅವಧಿಯನ್ನು 40 ವರ್ಷಕ್ಕೆ ವಿಸ್ತರಿಸಿದೆ. 50 ಲಕ್ಷ ರೂ ಸಾಲವನ್ನು 40 ವರ್ಷಕ್ಕೆ ಪಡೆದರೆ ಅಸಲಿಗಿಂತ ಶೇ. 133ರಷ್ಟು ಹೆಚ್ಚು ಬಡ್ಡಿಯೇ ಕಟ್ಟಿರುತ್ತೀರಿ.

Home Loan: ಸಾಲಕ್ಕೆ ಇಎಂಐ ಹುಷಾರ್..! 50 ಲಕ್ಷ ಸಾಲ ಪಡೆದು 40 ವರ್ಷ ಇಎಂಐ ಆದರೆ ಕಟ್ಟುವ ಬಡ್ಡಿಯೇ 1.27 ಕೋಟಿ ರೂ
ಗೃಹಸಾಲ
Follow us
|

Updated on: Jun 30, 2023 | 3:44 PM

ಮನೆ ಕಟ್ಟುವ ಅಥವಾ ಮನೆ ಕೊಳ್ಳಲು ಬಯಸುವವರ ಪೈಕಿ ಹೆಚ್ಚಿನವರು ಗೃಹಸಾಲ (Home Loan) ಪಡೆಯುತ್ತಾರೆ. ಹೆಚ್ಚು ಸಾಲ, ಕಡಿಮೆ ಬಡ್ಡಿ ಎಂಬ ಕಾರಣಕ್ಕೆ ಹೋಮ್ ಲೋನ್​ಗಳಿಗೆ ಬೇಡಿಕೆ ಹೆಚ್ಚಿದೆ. ಸದ್ಯ, ಬಹಳ ಬ್ಯಾಂಕುಗಳು ಗೃಹ ಸಾಲಕ್ಕೆ ಇಎಂಐ ಅವಧಿಯನ್ನು 20ರಿಂದ 30 ವರ್ಷಕ್ಕೆ ಮಿತಿಗೊಳಿಸಿವೆ. ಇದೇ ಹೊತ್ತಿನಲ್ಲಿ ಬಜಾಜ್ ಹೌಸಿಂಗ್ ಫೈನಾನ್ಸ್ ಸಂಸ್ಥೆ (Bajaj Housing Finance Ltd) ಇತ್ತೀಚೆಗೆ ಗೃಹಸಾಲಕ್ಕೆ ಗರಿಷ್ಠ ಅವಧಿಯನ್ನು 40 ವರ್ಷಕ್ಕೆ ವಿಸ್ತರಿಸಿದೆ. ಅಂದರೆ ಗೃಹಸಾಲಕ್ಕೆ 40 ವರ್ಷದವರೆಗೂ ಕಂತುಗಳನ್ನು ಕಟ್ಟಬಹುದು. ಕಂತಿನ ಅವಧಿ ಹೆಚ್ಚಾದರೆ ಇಎಂಐ ಹಣ ಕಡಿಮೆ ಆಗುವುದು ಹೌದು. ಈ ಕಾರಣಕ್ಕೆ ಬಹಳ ಮಂದಿ ಯಾವುದೇ ಸಾಲಕ್ಕಾದರೂ ಕಂತಿನ ಸಂಖ್ಯೆ ಹೆಚ್ಚಿಸಿ ಕಂತಿನ ಹಣ ಕಡಿಮೆ ಮಾಡಿಕೊಳ್ಳುವುದುಂಟು. ಆದರೆ, ಗೃಹಸಾಲದ ವಿಚಾರದಲ್ಲಿ ಇದು ತಪ್ಪು ನಿರ್ಧಾರವಾಗಬಹುದು. ನಿಮ್ಮ ಸಾಲದ ಅವಧಿ ಹೆಚ್ಚಾದಷ್ಟೂ ಬಡ್ಡಿಯ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಇದು ನೆನಪಿರಲಿ

ಗೃಹಸಾಲ ಪಡೆಯುವಾಗ ಹುಷಾರ್…!

ಸ್ವಂತ ಮನೆ ಎಂಬುದು ಬಹುತೇಕ ಎಲ್ಲರ ಕನಸು. ನಮ್ಮ ಜೀವನದಲ್ಲಿ ಒಂದು ಸುಂದರ ಮನೆ ಕಟ್ಟಿ ಸುಂದರ ಸಂಸಾರದೊಂದಿಗೆ ವಾಸವಿರಬೇಕೆಂಬ ಸುಂದರ ಸ್ವಪ್ನ ನಮ್ಮೆಲ್ಲರದ್ದು. ಆದರೆ, ಮನೆ ಕಟ್ಟುವುದು ಅಥವಾ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಂದು ಸಾಧಾರಣ ಮನೆಗೆ 20 ಲಕ್ಷ ರೂನಿಂದ 1 ಕೋಟಿ ರೂವರೆಗೂ ವೆಚ್ಚವಾಗುತ್ತದೆ. ಅಷ್ಟು ದೊಡ್ಡ ಮೊತ್ತದ ಸಾಲ ಪಡೆದು ತೀರಿಸುವುದು ಜೀವನಪರ್ಯಂತದ ಸಾಹಸವಾಗಿಹೋಗುತ್ತದೆ.

ಇದನ್ನೂ ಓದಿDhan Vriddhi Policy: ಎಲ್​ಐಸಿ ಧನ ವೃದ್ಧಿ ಯೋಜನೆ; ಇದು ನಿಮ್ಮ ಪಾಲಿನ ಮನಿಪ್ಲಾಂಟ್; ಬೇಕಷ್ಟು ಬೆಳೆಸಿ, ಬೇಕೆಂದಾಗ ಹಿಂಪಡೆಯಿರಿ

ಬಜಾಜ್ ಹೌಸಿಂಗ್ ಫೈನಾನ್ಸ್ ಸಂಸ್ಥೆಯಲ್ಲಿ ಗೃಹಸಾಲಕ್ಕೆ ಶೇ. 8.5ರಷ್ಟು ಮಾತ್ರವೇ ಬಡ್ಡಿ ಇರುವುದು. ಬಜಾಜ್ ಹೌಸಿಂಗ್ ಫೈನಾನ್ಸ್ ಕಂಪನಿ 40 ವರ್ಷ ಹೋಮ್ ಲೋನ್​ನಲ್ಲಿ ಸಾಲದ ಪ್ರತೀ ಒಂದು ಲಕ್ಷ ಹಣಕ್ಕೆ 733 ರೂನಂತೆ ಇಎಂಐ ನಿಗದಿ ಪಡಿಸುತ್ತದೆ. ಆದರೂ ನೀವು 40 ವರ್ಷದ ಅವಧಿಗೆ ಸಾಲ ಪಡೆದರೆ ಶೇ. 133ರಷ್ಟು ಬಡ್ಡಿಯನ್ನೇ ಕಟ್ಟಿಹೋಗುತ್ತೀರಿ. ಉದಾಹರಣೆಗೆ, ನೀವು 50 ಲಕ್ಷ ರೂ ಸಾಲ ಪಡೆದಿದ್ದೀರಿ. 40 ವರ್ಷದ ಅವಧಿಯ ಸಾಲ ಇದಾಗಿದ್ದರೆ ನೀವು ತಿಂಗಳಿಗೆ ಕಟ್ಟುವ ಇಎಂಐ 37,036 ರೂ ಆಗುತ್ತದೆ. 40 ವರ್ಷ ಅವಧಿಯಲ್ಲಿ ನೀವು 50 ಲಕ್ಷ ರೂ ಅಸಲು ಹಣದ ಜೊತೆಗೆ 1,27,77,052 ರೂ (1.27 ಕೋಟಿ) ಬಡ್ಡಿ ಹಣ ಕಟ್ಟಿರುತ್ತೀರಿ. ಅಂದರೆ 50 ಲಕ್ಷ ರೂ ಮೌಲ್ಯದ ನಿಮ್ಮ ಮನೆಗೆ ನೀವು ಪಾವತಿಸುವ ಹಣ 1.77 ಕೋಟಿ ರೂ ಆಗುತ್ತದೆ.

ಇನ್ನು, ನೀವು 50 ಲಕ್ಷ ರೂ ಮೊತ್ತದ ಸಾಲವನ್ನು 15 ವರ್ಷಕ್ಕೆ ತೆಗೆದುಕೊಂಡರೆ ತಿಂಗಳಿಗೆ ಕಟ್ಟುವ ಇಎಂಐ 49,531 ರೂ ಆಗುತ್ತದೆ. 15 ವರ್ಷದಲ್ಲಿ ನೀವು 50 ಲಕ್ಷ ರು ಅಸಲಿನ ಜೊತೆಗೆ 39.15 ಲಕ್ಷ ರೂ ಬಡ್ಡಿ ಕಟ್ಟುತ್ತೀರಿ. ಸಾಲ ಬೇಗ ತೀರುತ್ತದೆ.

ಇದನ್ನೂ ಓದಿEPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ

ಯಾವುದೇ ಸಾಲದಿಂದ ಬೇಗ ಮುಕ್ತರಾಗಿ

ಸಾಲ ಎನ್ನುವುದು ಶೂಲಕ್ಕೆ ಸಮಾನ. ಅನಿವಾರ್ಯವಲ್ಲದ ವೆಚ್ಚಕ್ಕೆ ನೀವು ಸಾಲ ಮಾಡುವುದು ನಿಮಗೆ ನೀವೇ ಮಾಡಿಕೊಂಡ ದ್ರೋಹವಾಗುತ್ತದೆ. ತುರ್ತು ಸಂದರ್ಭಕ್ಕೆ ಸಾಲ ಮಾಡಿದ್ದರೆ ಅದನ್ನು ಸಾಧ್ಯವಾದಷ್ಟೂ ಬೇಗ ತೀರಿಸುವತ್ತ ಗಮನ ಇರಲಿ.

ಗೃಹಸಾಲ ಪಡೆದಿದ್ದಾಗಲೂ ಬೇಗ ತೀರಿಸುವ ದಾರಿ ಯೋಚಿಸಿ. ಬ್ಯಾಂಕಿನೊಂದಿಗೆ ಮಾತನಾಡಿ ಇಎಂಐ ಅವಧಿ ಕಡಿಮೆ ಮಾಡಿಕೊಳ್ಳಿ. ಮಧ್ಯ ಮಧ್ಯದಲ್ಲಿ ನಿಮಗೆ ಹೆಚ್ಚುವರಿ ಹಣ ಸಿಕ್ಕಾಗೆಲ್ಲಾ ಅದನ್ನು ಸಾಲ ತೀರಿಸಲು ಬಳಸಬಹುದಾ ಎಂದು ಕೇಳಿ ತಿಳಿದಿರಿ.

ನೀವು ಸಾಲದಿಂದ ಮುಕ್ತರಾದ ಬಳಿಕವಷ್ಟೇ ಎಲ್ಲಿಯಾದರೂ ನಿಮ್ಮ ಉಳಿತಾಯ ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು