AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN Aadhaar Linking: ಪ್ಯಾನ್, ಆಧಾರ್ ಲಿಂಕ್ ಮಾಡಲು ಇಂದೇ ಕೊನೆಯ ದಿನ; ಮಾಡದಿದ್ದರೆ ಏನಾಗುತ್ತದೆ? ಇಲ್ಲಿದೆ ಡೀಟೇಲ್ಸ್

What Happens To PAN After June 30: ಆಧಾರ್ ಕಾರ್ಡ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡುವುದಕ್ಕೆ ಜೂನ್ 30ಕ್ಕೆ ಡೆಡ್​ಲೈನ್ ಇದೆ. ಇದನ್ನು ಮೀರಿದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ನಿಷ್ಕ್ರಿಯಗೊಂಡ ಪ್ಯಾನ್ ಬಳಸುವುದು ಅಪರಾಧವಾಗುತ್ತದೆ.

PAN Aadhaar Linking: ಪ್ಯಾನ್, ಆಧಾರ್ ಲಿಂಕ್ ಮಾಡಲು ಇಂದೇ ಕೊನೆಯ ದಿನ; ಮಾಡದಿದ್ದರೆ ಏನಾಗುತ್ತದೆ? ಇಲ್ಲಿದೆ ಡೀಟೇಲ್ಸ್
ಐಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 30, 2023 | 11:43 AM

ನವದೆಹಲಿ: ಪ್ಯಾನ್ ನಂಬರ್​ಗಳನ್ನು ಆಧಾರ್ ಜೊತೆ ಜೋಡಿಸಬೇಕೆಂದು (Aadhaar PAN Linking) ಸರ್ಕಾರ ಕಡ್ಡಾಯಗೊಳಿಸಿದ್ದು, ಜೂನ್ 30 ಡೆಡ್​ಲೈನ್ ಕೊಡಲಾಗಿದೆ. ಈ ಬಾರಿ ಗಡುವು ವಿಸ್ತರಣೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಆದರೆ, ಇಂದು ಸಂಜೆಯೊಳಗೆ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಸಿಗಬಹುದು. ಈ ಹಿಂದೆ ಐಟಿ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜೂನ್ 30ರ ಬಳಿಕ ಮತ್ತೆ ಒಂದು ತಿಂಗಳು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ಕಾಲಾವಕಾಶ ಕೊಡಬಹುದು. ಇದಕ್ಕೆ 1,000 ರೂ ದಂಡ ಪಾವತಿಸಬೇಕು. ಆದರೆ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ನಂಬರ್ ಜೂನ್ 30ರ ಬಳಿಕ ನಿಷ್ಕ್ರಿಯಗೊಳ್ಳುವುದು ಹೌದು. ಅದಾದ ಬಳಿಕ ಪ್ಯಾನ್ ಅನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನಂತೂ ಇಲಾಖೆ ಕೊಡಬಹುದು.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬೇಕೆಂದು ಹೇಳಿದ್ದು ಯಾಕೆ?

ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್​ಗಳು ಕೊಡಲಾಗಿರುವುದು; ಹಾಗೂ ಒಂದೇ ಪ್ಯಾನ್ ನಂಬರ್ ಅನ್ನು ಒಬ್ಬರಿಗಿಂತ ಹೆಚ್ಚು ಮಂದಿಗೆ ಅಲಾಟ್ ಮಾಡಲಾದ ಹಲವು ಪ್ರಕರಣಗಳು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದ್ದವು. 2017ರಲ್ಲಿ ಈ ಸಮಸ್ಯೆ ನಿವಾರಿಸಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬೇಕೆನ್ನುವ ಕಾನೂನನ್ನು ತರಲಾಯಿತು. 2017 ಜುಲೈನಿಂದ ಪ್ಯಾನ್ ಪಡೆಯಲು ಆಧಾರ್ ದಾಖಲೆ ಕಡ್ಡಾಯಗೊಳಿಸಲಾಯಿತು. ಅದಕ್ಕಿಂತ ಮುಂಚೆ ಮಾಡಿಸಿದ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವಂತೆ ಸರ್ಕಾರ ಸೂಚಿಸಿತು.

ಪ್ರಾಯೋಗಿಕವಾಗಿ ನೋಡಿದರೆ 2017, ಜೂನ್ 30ಕ್ಕೆ ಮುಂಚೆ ಪ್ಯಾನ್ ಮಾಡಿಸಿದವರೆಲ್ಲರೂ ತಮ್ಮ ಆಧಾರ್​ಗೆ ಲಿಂಕ್ ಮಾಡಿಸಬೇಕಾಗುತ್ತದೆ.

ಇದನ್ನೂ ಓದಿChanges in July 2023: ಎಲ್​ಪಿಜಿ ಬೆಲೆ ಸೇರಿದಂತೆ ಜುಲೈ ತಿಂಗಳಲ್ಲಿ ನೀವು ಗಮನಿಸಬೇಕಾದ ಕೆಲ ಬದಲಾವಣೆಗಳು

ಪ್ಯಾನ್ಆಧಾರ್ ಲಿಂಕ್ ಯಾರಿಗೆ ಅಗತ್ಯ ಇಲ್ಲ?

  • 80 ವರ್ಷ ವಯಸ್ಸು ದಾಟಿದವರು
  • ಭಾರತೀಯ ನಾಗರಿಕರಲ್ಲದ ಪ್ಯಾನ್ ಕಾರ್ಡ್​ದಾರರು
  • ಐಟಿ ಕಾಯ್ದೆ ಪ್ರಕಾರ ಅನಿವಾಸಿ ವ್ಯಕ್ತಿಗಳು

ಜೂನ್ 30ರ ಬಳಿಕ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

  • ಜೂನ್ 30ರೊಳಗೆ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇಂಥ ಪ್ಯಾನ್ ಕಾರ್ಡನ್ನು ಬಳಸಿದರೆ ಅಪರಾಧವಾಗುತ್ತದೆ.
  • ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ. ಈಗಾಗಲೇ ಐಟಿಆರ್ ಫೈಲ್ ಮಾಡಿದ್ದರೆ ಅದು ಪ್ರೋಸಸ್ ಆಗುವುದಿಲ್ಲ. ರೀಫಂಡ್ ಕೂಡ ಆಗುವುದಿಲ್ಲ.
  • ಪ್ಯಾನ್ ನಿಷ್ಕ್ರಿಯಗೊಂಡರೆ ಹೆಚ್ಚು ತೆರಿಗೆ ಕಡಿತ ಆಗುತ್ತದೆ.
  • ಬ್ಯಾಂಕುಗಳಲ್ಲಿ 50,000 ರೂಗಿಂತ ಹೆಚ್ಚು ಮೊತ್ತದ ಹಣ ವಹಿವಾಟು ಸಾಧ್ಯವಾಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ