ಒಂದೇ ವಾರದಲ್ಲಿ ಇಬ್ಬರು ನುರಿತ ಟೆಕ್ ಎಕ್ಸಿಕ್ಯೂಟಿವ್ಸ್ ರಾಜೀನಾಮೆ; ಆ್ಯಪಲ್​ಗೆ ತಲೆನೋವು

|

Updated on: Dec 11, 2023 | 1:04 PM

Apple's Top Engineers Leaving: ಕಳೆದ ವಾರ ಆ್ಯಪಲ್ ವೈಸ್ ಪ್ರೆಸಿಡೆಂಟ್ ಸ್ಟೀವ್ ಹೋಟೆಲಿಂಗ್ ರಾಜೀನಾಮೆ ನೀಡಿದ್ದರು. ಹಲವು ಪೇಟೆಂಟ್​ಗಳಿಗೆ ಅವರು ಕಾರಣರಾಗಿದ್ದರು. ಈಗ ಆ್ಯಪಲ್ ಉತ್ಪನ್ನಗಳ ಮುಖ್ಯ ಡಿಸೈನರ್ ಆಗಿರುವ ಟ್ಯಾಂಗ್ ಟ್ಯಾನ್ ರಾಜೀನಾಮೆ ನೀಡಿದ್ದಾರೆ. 2024ರ ಫೆಬ್ರುವರಿಯಲ್ಲಿ ಅವರು ಹೊರಹೋಗಲಿದ್ದಾರೆ. ನುರಿತ ತಂತ್ರಜ್ಞರೆನಿಸಿದ್ದ ಸ್ಟೀವ್ ಹೋಟೆಲಿಂಗ್ ಮತ್ತು ಟ್ಯಾಂಗ್ ಟ್ಯಾನ್ ನಿರ್ಗಮನವು ಆ್ಯಪಲ್ ಸಂಸ್ಥೆಗೆ ತಲೆನೋವಾಗಲಿದೆ.

ಒಂದೇ ವಾರದಲ್ಲಿ ಇಬ್ಬರು ನುರಿತ ಟೆಕ್ ಎಕ್ಸಿಕ್ಯೂಟಿವ್ಸ್ ರಾಜೀನಾಮೆ; ಆ್ಯಪಲ್​ಗೆ ತಲೆನೋವು
ಆ್ಯಪಲ್
Follow us on

ಕ್ಯಾಲಿಫೋರ್ನಿಯಾ, ಡಿಸೆಂಬರ್ 11: ವಿಶ್ವದ ಅತಿ ಪ್ರತಿಷ್ಠಿತ ಟೆಕ್ ಕಂಪನಿ ಆ್ಯಪಲ್ ಇತ್ತೀಚಿನ ದಿನಗಳಲ್ಲಿ ಪ್ರಮುಖ ಉದ್ಯೋಗಿಗಳನ್ನು ಕಳೆದುಕೊಳ್ಳುತ್ತಿದೆ. ಐಫೋನ್ ಮತ್ತು ಆ್ಯಪಲ್ ವಾಚ್ ಡಿಸೈನ್ ವಿಭಾಗದ ಮುಖ್ಯಸ್ಥ ಟ್ಯಾಂಗ್ ಟ್ಯಾನ್ (Tang Tan) ಅವರು ರಾಜೀನಾಮೆ ನೀಡಿದ್ದಾರೆ. 2024ರ ಫೆಬ್ರುವರಿಯಲ್ಲಿ ಅವರು ಸಂಸ್ಥೆ ತೊರೆದು ಹೋಗಲಿದ್ದಾರೆ. ಕಳೆದ ವಾರ ಆ್ಯಪಲ್​ನ ಐಫೋನ್​ನಲ್ಲಿ ಬಯೋಮೆಟ್ರಿಕ್​ಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟೀವ್ ಹೋಟೆಲಿಂಗ್ (Steve Hotelling) ಅವರು ರಾಜೀನಾಮೆ ನೀಡಿದ್ದರು. ಒಂದೇ ವಾರದಲ್ಲಿ ಇಬ್ಬರು ಅತಿಮುಖ್ಯ ಎಕ್ಸಿಕ್ಯೂಟಿವ್​ಗಳು ಸಂಸ್ಥೆ ತೊರೆಯುತ್ತಿರುವುದು ಆ್ಯಪಲ್ ಸಂಸ್ಥೆಯಲ್ಲಿ ಆಂತರಿಕ ತೊಳಲಾಟಕ್ಕೆ ಕಾರಣವಾಗಬಹುದು ಎಂದು ವರದಿಗಳು (Blooberg Report) ಹೇಳುತ್ತಿವೆ.

ಟ್ಯಾಂಗ್ ಟ್ಯಾನ್ ಸ್ಥಾನ ತುಂಬಲು ಆ್ಯಪಲ್​ನೊಳಗೆ ಸರ್ಕಸ್

ಆ್ಯಪಲ್ ಸಂಸ್ಥೆಯ ವಿವಿಧ ಉತ್ಪನ್ನಗಳಿಗೆ ಟ್ಯಾಂಗ್ ಟ್ಯಾನ್ ಪ್ರಮುಖ ಡಿಸೈನರ್ ಆಗಿದ್ದವರು. ಐಫೋನ್, ಆ್ಯಪಲ್ ವಾಚ್​ಗಳ ವಿನ್ಯಾಸದಲ್ಲಿ ಅವರ ಪಾತ್ರ ಬಹಳ ದೊಡ್ಡದು. ಒಟ್ಟಾರೆ ಆ್ಯಪಲ್ ಕಂಪನಿಯ ಪ್ರಮುಖ ಎಂಜಿನಿಯರುಗಳಲ್ಲಿ ಅವರು ಒಬ್ಬರು. ಅವರ ಅನುಪಸ್ಥಿತಿ ತುಂಬಲು ಆ್ಯಪಲ್​ನೊಳಗೆ ಸಿದ್ಧತೆ ನಡೆದಿದೆ. ಟ್ಯಾಂಗ್ ನಿರ್ವಹಿಸುತ್ತಿದ್ದ ಹೊಣೆಗಾರಿಕೆಯನ್ನು ಬೇರೆ ಪ್ರಮುಖ ತಂತ್ರಜ್ಞರಿಗೆ ಹಂಚಿಕೆ ಮಾಡಲಾಗುತ್ತಿದೆ. ಹಾರ್ಡ್​ವೇರ್ ಎಂಜಿನಿಯರಿಂಗ್ ವಿಭಾಗದ ಕೆಲ ಮುಖ್ಯ ತಂತ್ರಜ್ಞರಿಗೆ ಜವಾಬ್ದಾರಿ ಕೊಡಲಾಗುತ್ತಿದೆ.

ಇದನ್ನೂ ಓದಿ: Inspiration: ಕರ್ನಾಟಕದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಮನೆಗೆಲಸ ಮಾಡುತ್ತಿದ್ದ ವ್ಯಕ್ತಿ ಇವತ್ತು 40 ಕೋಟಿ ರೂ ಕಂಪನಿಯ ಒಡೆಯ

ಟ್ಯಾಂಗ್ ಟ್ಯಾನ್ ಇನ್ನೆರಡು ತಿಂಗಳು ಇರುವುದರಿಂದ ಅಷ್ಟರೊಳಗೆ ಸರಿದೂಗಿಸುವ ನಿರೀಕ್ಷೆಯಲ್ಲಿ ಆ್ಯಪಲ್ ಇದೆ.

ಆ್ಯಪಲ್​ಗೆ ಕಾಡಲಿದೆ ಸ್ಟೀವ್ ಹೋಟೆಲಿಂಗ್ ಅನುಪಸ್ಥಿತಿ

ಕಳೆದ ವಾರ ರಾಜೀನಾಮೆ ಸ್ಟೀವ್ ಹೋಟೆಲಿಂಗ್ ನುರಿತ ತಂತ್ರಜ್ಞರಾಗಿದ್ದವರು. ನೂರಾರು ಆ್ಯಪಲ್ ಪೇಟೆಂಟ್​ಗಳ ಹಿಂದೆ ಅವರಿದ್ದರು. ಐಫೋನ್, ಐಪ್ಯಾಡ್, ಆ್ಯಪಲ್ ವಾಚ್ ಉತ್ಪನ್ನಗಳ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಅವರೂ ಒಬ್ಬರಾಗಿದ್ದವರು. ಸದ್ಯ ಅವರ ಆ್ಯಪಲ್​ನ ವೈಸ್ ಪ್ರೆಸಿಡೆಂಟ್ ಆಗಿದ್ದು, ಅವರ ನಿರ್ಗಮನದ ಬಳಿಕ ಆ ಸ್ಥಾನ ಯಾರು ತುಂಬುತ್ತಾರೆ ಎಂಬುದು ಸಂಸ್ಥೆಗೆ ಇರುವ ತಲೆನೋವಿನ ಪ್ರಶ್ನೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:26 am, Mon, 11 December 23