ಬೆಂಗಳೂರು: ಕಳೆದ ವರ್ಷಾಂತ್ಯದಲ್ಲಿ ಕುಸಿತ ಕಂಡಿದ್ದ ಅಡಿಕೆ ಧಾರಣೆ (Areca Nut Price) ಮತ್ತೆ ಚೇತರಿಕೆ ಕಂಡಿದ್ದು, 47,000 ರೂ. ಗಡಿ ದಾಟಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕ್ವಿಂಟಲ್ ರಾಶಿ ಅಡಿಕೆಯ ದರ ಗರಿಷ್ಠ 47,299 ರೂ. ಆಗಿರುವುದು ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವೆಬ್ಸೈಟ್ನಿಂದ ತಿಳಿದುಬಂದಿದೆ. ಕಳೆದ ವರ್ಷ ಭೂತಾನ್ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಸರ್ಕಾರ ಆಮದು ನೀಡಿದ ಬೆನ್ನಲ್ಲೇ ದರ ತುಸು ಇಳಿಕೆಯಾಗಿತ್ತು. ಡಿಸೆಂಬರ್ನಲ್ಲಿ ಕ್ವಿಂಟಲ್ಗೆ 39,000 ರೂ.ವರೆಗೆ ದರ ಕುಸಿತವಾಗಿತ್ತು. ಆದರೆ, ಇದೀಗ ಮತ್ತೆ ಚೇತರಿಕೆಯ ಹಾದಿಯಲ್ಲಿದೆ. ಕೆಲವೊಂದು ಮೂಲಗಳ ಪ್ರಕಾರ, ಅಡಿಕೆ ಧಾರಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ದರ ವಿವಿಧ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ತುಸು ವ್ಯತ್ಯಾಸ ಹೊಂದಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಕ್ವಿಂಟಲ್ ರಾಶಿ ಅಡಿಕೆ ಬೆಲೆ 51,000 ರೂ. ದಾಟಿದೆ. ಉಳಿದಂತೆ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹಳೆ ಅಡಿಕೆ ಕ್ವಿಂಟಲ್ಗೆ 48,000 ರೂ.ನಿಂದ 54,500 ರೂ.ವರೆಗೂ ಮಾರಾಟವಾಗುತ್ತಿದೆ. ಶಿವಮೊಗ್ಗದಲ್ಲಿಯೂ ಕ್ವಿಂಟಲ್ ರಾಶಿ ಅಡಿಕೆ ದರ 47,599 ರೂ. ಆಗಿದೆ.
ಕೊಪ್ಪದಲ್ಲಿ ಕ್ವಿಂಟಲ್ ರಾಶಿ ಅಡಿಕೆ ದರ 41,119 ರೂ. ಇದ್ದರೆ, ದಾವಣಗೆರೆಯ ಚನ್ನಗಿರಿಯಲ್ಲಿ 47,659 ರೂ, ದಾವಣೆಗೆರೆ ಮಾರುಕಟ್ಟೆಯಲ್ಲಿ 46,169 ರೂ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 46,629 ರೂ, ಶಿರಸಿಯಲ್ಲಿ 46,208 ರೂ, ಯಲ್ಲಾಪುರದಲ್ಲಿ 51,475 ರೂ. ಇದೆ.
ಮಂಗಳೂರಿನಲ್ಲಿ ಹೊಸ ಅಡಿಕೆ ದರ ಕ್ವಿಂಟಲ್ಗೆ 25,876 ರೂ.ನಿಂದ 31,000 ರೂ.ವರೆಗೆ ಇದ್ದರೆ, ಪುತ್ತೂರಿನಲ್ಲಿ 32,000 ರೂ.ನಿಂದ 38,000 ರೂ.ವರೆಗೆ ಇದೆ. ರಾಶಿ ಅಡಿಕೆ ಕ್ವಿಂಟಲ್ಗೆ ಭದ್ರಾವತಿಯಲ್ಲಿ 47,319 ರೂ, ಹೊಸನಗರದಲ್ಲಿ 47,349 ರೂ, ಸಾಗರದಲ್ಲಿ 46,929 ರೂ, ಶಿಕಾರಿಪುರದಲ್ಲಿ 45,900 ರೂ, ತೀರ್ಥಹಳ್ಳಿಯಲ್ಲಿ 46,899 ರೂ, ತುಮಕೂರಿನಲ್ಲಿ 45,900 ರೂ. ಇದೆ.
Published On - 1:45 pm, Wed, 25 January 23