ಭವಿಷ್ಯವಿಲ್ಲದ ಅಡಿಕೆ ಬೆಳೆಯನ್ನು ನಿಮ್ಮ ತೋಟದಲ್ಲಿ ಮೊದಲು ನಾಶಪಡಿಸಿ, ಬೇರೆ ಬೆಳೆ ಬೆಳೆದು ತೋರಿಸಿ ಮಿ(ನಿ)ಸ್ಟರ್ ಆರಗ ಜ್ಞಾನೇಂದ್ರ- ಮಲೆನಾಡಿಗರು ಕಿಡಿಕಿಡಿ

areca nut: ಅಡಿಕೆಗೆ ಭವಿಷ್ಯ ಇಲ್ಲಾ ಅಂದ ಮೇಲೆ ನಿಮ್ಮ ಪಕ್ಷಕ್ಕೆ ಮತ್ತು ಮಂತ್ರಿಗಿರಿಗೆ ರಾಜಿನಾಮೆ ಕೊಡಿ ಇಲ್ಲಾ ಭವಿಷ್ಯವಿಲ್ಲದ ಅಡಿಕೆ ಬೆಳೆ ಬೆಳೆದಿರುವ ನೀವು ನಿಮ್ಮ ಅಡಿಕೆ ತೋಟವನ್ನು ನಾಶಪಡಿಸಿ. ಅಡಿಕೆಗೆ ಬೆಲೆ ಇಲ್ಲಾ ಎಂದು ಸಾಬೀತು ಪಡಿಸಲು ನೀವು ಮೊದಲು ಬೇರೆ ಬೆಳೆಯನ್ನು ಬೆಳೆದು ತೋರಿಸಿ ಮಿ(ನಿ)ಸ್ಟರ್ ಆರಗ ಜ್ಞಾನೇಂದ್ರ ಅವರೆ... ಮಲೆನಾಡಿಗರು ಕಿಡಿ

ಭವಿಷ್ಯವಿಲ್ಲದ ಅಡಿಕೆ ಬೆಳೆಯನ್ನು ನಿಮ್ಮ ತೋಟದಲ್ಲಿ ಮೊದಲು ನಾಶಪಡಿಸಿ, ಬೇರೆ ಬೆಳೆ ಬೆಳೆದು ತೋರಿಸಿ ಮಿ(ನಿ)ಸ್ಟರ್ ಆರಗ ಜ್ಞಾನೇಂದ್ರ- ಮಲೆನಾಡಿಗರು ಕಿಡಿಕಿಡಿ
ಭವಿಷ್ಯವಿಲ್ಲದ ಅಡಿಕೆ ಬೆಳೆಯನ್ನು ನಿಮ್ಮ ತೋಟದಲ್ಲಿ ಮೊದಲು ನಾಶಪಡಿಸಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 30, 2022 | 9:32 PM

ಶಿವಮೊಗ್ಗ:  ತೀರ್ಥಹಳ್ಳಿ ಕ್ಷೇತ್ರಕ್ಕೆ ನಾಲ್ಕನೇ ಬಾರಿ ಶಾಸಕರಾಗಿರುವ, ಹಾಲಿ ಗೃಹ ಮಂತ್ರಿಯಾದ ಆರಗ ಜ್ಞಾನೇಂದ್ರರವರು (araga jnanendra) ಮಲೆನಾಡಿನ ರೈತರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡಿದ್ದಾರೆ. ಜವಬ್ದಾರಿಯುತ ಸ್ಥಾನದ ಹೊಣೆಗಾರಿಕೆಯನ್ನೂ ಮರೆತಂತೆ ಇದೆ. ನಮ್ಮ ಮಲೆನಾಡಿಗರ ಸಾಂಪ್ರದಾಯಿಕ ಬೆಳೆ ಅಡಿಕೆಗೆ.  1990 ನಂತರದಲ್ಲಿನ ಬೆಲೆ ಏರಿಕೆಯಿಂದ ಅಡಿಕೆ ಬೆಳೆಗಾರರಿಗೆ (areca nut) ಗೌರವ ತಂದುಕೊಟ್ಟಿದ್ದು, ನಮ್ಮಗಳ ಆರ್ಥಿಕ ಭದ್ರತೆಯನ್ನು ಸಹ ಹೆಚ್ಚಿಸಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟಿದೆ. ಹಳೆಮನೆಗಳನ್ನು ಕೆಡವಿ ಹೊಸಮನೆಗಳನ್ನು ನಿರ್ಮಿಸುವಂತೆ ಮಾಡಿದೆ. ಮಕ್ಕಳ ಮದುವೆಯನ್ನು ಸಂಭ್ರಮದಿಂದ ಮಾಡುವಂತೆ ಮಾಡಿದೆ. ಮನೆ ಮನೆಗೂ ಬೈಕು- ಕಾರುಗಳು ಬರುವಂತೆ ಮಾಡಿದೆ. ಅಷ್ಟೇ ಅಲ್ಲಾ ಮಲೆನಾಡು ಭಾಗದ ಕೃಷಿ ಕೂಲಿಕಾರರ ಬದುಕನ್ನು ಸುಧಾರಿಸಿದೆ.  ಕನಿಷ್ಟ ಸಂಬಳದಿಂದ ಒಂದು ಹಂತದ ಗೌರವಯುತ ಸಂಬಳ ಪಡೆಯುವ ಹಂತಕ್ಕೆ ತಂದಿದೆ. ಒಟ್ಟಿನಲ್ಲಿ ಒಂದು ರೀತಿಯಲ್ಲಿ ಮಲೆನಾಡನ್ನು ಅಡಿಕೆ ಶ್ರೀಮಂತಗೊಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ಬದುಕು ರೂಪಿಸಿದ ಅಡಿಕೆ ಹಲವು ಸಮಸ್ಯೆಗಳನ್ನು ತನ್ನೊಂದಿಗೆ ಇಟ್ಟುಕೊಂಡಿದೆ, ಮಳೆಗಾಲದಲ್ಲಿ ನಿರಂತರವಾಗಿ ಬಾಧಿಸುವ ಕೊಳೆರೋಗ, ದಶಕಗಳಿಂದ ಇರುವ ಹಳದಿ ರೋಗ, ಹಿಂಡಿಮುಂಡೆ ರೋಗ ಭಾರೀ ನಷ್ಟವನ್ನು ಉಂಟು ಮಾಡಿದೆ. ಈ ರೋಗಗಳಿಂದ ಹಲವೆಡೆ ತೋಟಗಳು ಸಂಪೂರ್ಣ ನಾಶವಾಗಿದ್ದರೆ, ಹಲವೆಡೆ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತೋಟಗಳು ನಾಶವಾಗಿದ್ದನ್ನು ಸಹ ನೋಡಿದ್ದೇವೆ.

ಮೂರು ನಾಲ್ಕು ವರ್ಷದಿಂದ ಉತ್ತಮ ಮಳೆ ಆಗುತ್ತಿರುವುದರಿಂದ ನೀರಿನ ಸಮಸ್ಯೆ ಇಲ್ಲವಾಗಿದೆ. ಆದರೆ ಈ ವರ್ಷ ಕಾಣಿಸಿಕೊಂಡ ಎಲೆ ಚುಕ್ಕಿ ರೋಗ ಹಲವೆಡೆ ಅಡಿಕೆ ತೋಟವನ್ನು ಸರ್ವನಾಶ ಮಾಡಿದೆ, ಅತ್ಯಂತ ಹೆಚ್ವು ಮಳೆ ಮತ್ತು ಶೀತಕ್ಕೆ ಈ ರೋಗ ಬಂದಿದೆ ಎನ್ನಲಾಗುತ್ತಿದೆ. ಇದೊಂದು ಫಂಗಸ್ ಎಂತಲೂ ಹೇಳಲಾಗುತ್ತಿದೆ. ಆದರೆ ಇದಕ್ಕೆ ಇದುವರೆಗೂ ಸೂಕ್ತ ಔಷಧಿಯನ್ನು ಕಂಡುಹಿಡಿದಿಲ್ಲ.

ಈ ಬಗ್ಗೆ ನಡೆದ ಹೋರಾಟಗಳಿಂದ ಎಚ್ಚೆತ್ತ ಸರ್ಕಾರ ಈ ಎಲೆ ಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಂಡಿಯಲು ಸಂಶೋಧಕರ ತಂಡವನ್ನು ನೇಮಿಸಿದೆ. ಆದರೆ ಈ ತಂಡ ಇನ್ನೂ ನಮ್ಮ ರೈತರ ತೋಟಗಳಿಗೆ ಭೇಟಿ ನೀಡಿಲ್ಲ. ಬಿಸಿಲು ಆರಂಭವಾಗಿದ್ದರಿಂದ ರೋಗ ನಿಯಂತ್ರಣಕ್ಕೆ ಬರಬಹುದೆಂಬ ವಿಶ್ವಾಸದಲ್ಲಿ ರೈತರು ಇದ್ದಾರೆ,  ಹೊರತು ಸರ್ಕಾರ ಇದಕ್ಕೊಂದು ಶಾಶ್ವತ ಪರಿಹಾರ ನೀಡುತ್ತೆ ಎಂಬ ವಿಶ್ವಾಸ ಕಳೆದುಕೊಂಡಿದ್ದಾರೆ.

ಮಲೆನಾಡಿಗರ, ಅದರಲ್ಲೂ ಅಡಿಕೆ ಬೆಳೆಗಾರರ ಎಲ್ಲ ಸಮಸ್ಯೆ ನೀಗಿಸಲಿದ್ದೇವೆ ಎಂದು ಆಶ್ವಾಸನೆ ಕೊಟ್ಟಿದ್ದ ಆರಗ ಜ್ಞಾನೇಂದ್ರರವರಿಂದ ಹಿಡಿದು ಅಮಿತ್ ಶಾವರೆಗಿನ ಡಬಲ್ ಇಂಜಿನ್​ ಸರ್ಕಾರದ ಗೃಹ ಮಂತ್ರಿಗಳ ಆಡಳಿತದಲ್ಲೇ ಭೂತಾನ ದೇಶದ ಅಡಿಕೆ 17 ಲಕ್ಷ ಟನ್ ಸುಂಕ ರಹಿತವಾಗಿ ಆಮದಾಯಿತು. ಮತ್ತು ಇನ್ನಷ್ಟು ಅಡಿಕೆ ಆಮದು ಆಗುವ ಸಂಭವವಿದೆ. ಇದರ ಮೂಲ ಉದ್ದೇಶ ಮತ್ತು ಮೊನ್ನೆ ಆರಗ ಜ್ಞಾನೇಂದ್ರರವರು ಅಡಿಕೆ ಕುರಿತು ಅಧಿವೇಶನದಲ್ಲಿ “ಮುಂದೆ ಅಡಿಕೆಗೆ ಭವಿಷ್ಯವಿಲ್ಲ. ಮುಂದೆ ಅಡಿಕೆಗೆ ಹೆಚ್ಚಿನ ಮಾನ್ಯತೆ ನೀಡಬಾರದು, ಪ್ರೋತ್ಸಾಹಿಸಬಾರದು” ಎಂಬುವುದಕ್ಕೂ ಬಹಳ ವ್ಯತ್ಯಾಸವಿದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆಯನ್ನು ನಾವು ಇಂತಹ ರಾಜಕರಣಿಗಳಿಗೆ ಬರುವ ಚುನಾವಣೆಯಲ್ಲಿ ಅರ್ಥೈಸಿ ತೋರಿಸಬೇಕಾಗಿದೆ.

ಅಡಿಕೆ ಬೆಳೆ ನಿಯಂತ್ರಣದಲ್ಲಿ ಇರಬೇಕು ಇದಕ್ಕೆ ಕಡಿವಾಣ ಹೇರಬೇಕು ಎಂಬುವ ಪರಿಜ್ಞಾನ ಅಥವಾ ಜ್ಞಾನೋದಯ ಇವರಿಗೆ ಇಷ್ಟೊಂದು ತಡವಾಗಿ ಅಯಿತೆ. ಡ್ಯಾಂಗಳನ್ನು ಕಟ್ಟಿ ನಮ್ಮ ಮಲೆನಾಡಿಗರ ಬದುಕನ್ನು ಮುಳುಗಿಸಿ ಬಯಲು ಸೀಮೆಗೆ ನೀರು ಹರಿಸಿದಾಗ, ಸರ್ಕಾರದ ನಿಯಮಾವಳಿ ಪ್ರಕಾರ ಅದು ಆಹಾರ ಬೆಳೆಗಳನ್ನು ಬೆಳೆಯಲು ಮತ್ತು ಕುಡಿಯುವ ನೀರಿಗಾಗಿ ಇತ್ತು. ಅಲ್ಲಿಯ ರೈತರಿಗೆ ಆಹಾರದ ಬೆಳೆಗಳನ್ನು ಬೆಳೆಯಲು ಉತ್ತೇಜಿಸಬೇಕಿತ್ತು, ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಿ ಪ್ರೋತ್ಸಾಹ ನೀಡಿದ್ದರೆ, ಕಬ್ಬುಗಳು ಬೆಳೆಯುವಲ್ಲಿ ಕಬ್ಬಿಗೆ ಉತ್ತಮ ಬೆಲೆ ನೀಡಿದ್ದರೆ, ಸಕ್ಕರೆ ಕಾರ್ಖಾನೆಗಳನ್ನು ಅಭಿವೃದ್ದಿ ಪಡಿಸಿದ್ದರೆ ಮುಚ್ಚಿಹೋದ ಹಲವಾರು ಸಕ್ಕರೆ ಕಾರ್ಖಾನೆಗಳನ್ನು ಪುನರ್ ಚೇತನ ಗೊಳಿಸಿದ್ದರೆ ಮಲೆನಾಡಿಗರ ಸಂಪ್ರದಾಯಿಕ ಬೆಳೆಯಾಗಿದ್ದ ಅಡಿಕೆ ಬಯಲು ಸೀಮೆಯಲ್ಲಿ ಬೆಳೆಯುವ ಬೆಳೆ ಆಗುತ್ತಿರಲಿಲ್ಲ.

ಅಡಿಕೆ ಬಯಲು ಸೀಮೆಯ ಜನರ ಬದುಕನ್ನು ಹಸನುಗೊಳಿಸಿದೆ. ಅವರು ಅಡಿಕೆ ಬೆಳೆದಿದ್ದು ತಪ್ಪು ಎಂದು ಹೇಳುತ್ತಿಲ್ಲ, ಅವರು ಬೆಳೆದ ಆಹಾರಿಕ ಬೆಳೆಗೆ, ಕಬ್ಬಿಗೆ ಸರಿಯಾದ ಮಾರುಕಟ್ಟೆ ಒದಗಿಸದ ಸರ್ಕಾರದ ಹೊಣೆಗೆಡಿತನ ಅವರು ಅಡಿಕೆ ಬೆಳೆಯನ್ನು ಬೆಳೆಯುವ ಅನಿವಾರ್ಯ ಪರಿಸ್ಥಿತಿಗೆ ತಂದಿತು. ಈಗ ಇಡಿ ದೇಶದಲ್ಲಿಯೇ ನಾವು ಅತಿ ಹೆಚ್ವು ಅಡಿಕೆ ಬೆಳೆಯುತ್ತೇವೆ. ರಫ್ತು ಮಾಡುವಷ್ಟು ಪ್ರಮಾಣದ ಅಡಿಕೆ ನಮ್ಮಲ್ಲಿಯೆ ಇದ್ದರು ಸಹ ಯಾವ ಕಾರಣಕ್ಕಾಗಿ ಭೂತಾನ ದೇಶದಿಂದ ಅಡಿಕೆ ಅಮದು ಮಾಡಿಕೊಳ್ಳುತ್ತಿರುವರು?

Also read:

ಅಡಿಕೆ ನಿಷೇಧ ಮಾಡದಂತೆ ಕೇಂದ್ರಕ್ಕೆ ಮನವಿ; ಅಡಿಕೆ ಬೆಳೆಗಾರರಿಗೆ ಸಮಾಧಾನಕರ ಸುದ್ದಿ ಕೊಟ್ಟ ಆರಗ ಜ್ಞಾನೇಂದ್ರ

ನಮ್ಮಲ್ಲಿ ಭವಿಷ್ಯವೆ ಇಲ್ಲವೆಂಬ ಬೆಳೆಯನ್ನು ವಿದೇಶದಿಂದ ಯಾವ ಕಾರಣಕ್ಕಾಗಿ ಲಕ್ಷಾಂತರ ಟನ್ ಅಡಿಕೆಗಳನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳುತ್ತಿರುವಿರಿ? ವಿದೇಶಿ ಅಡಿಕೆ ಇಲ್ಲಿ ಭವಿಷ್ಯ ರೂಪಿಸಿ ಕೊಡುವ ಮತ್ತು ನಮ್ಮ ಅಡಿಕೆಗೆ ಭವಿಷ್ಯವಿಲ್ಲದ ನಿಮ್ಮ ಸರ್ಕಾರದಲ್ಲಿ ಸ್ವತಃ ಅಡಿಕೆ ಬೆಳೆಗಾರರಾದ ಮತ್ತು ಪ್ರಭಾವಿ ಹುದ್ದೆಯ ಗೃಹ ಮಂತ್ರಿಯಾಗಿರುವ ನೀವು ನಿಮ್ಮ ಪಕ್ಷದ ಡಬಲ್​ ಇಂಜಿನ್ ಸರ್ಕಾರದಲ್ಲಿ ಅಡಿಕೆಗೆ ಭವಿಷ್ಯವೆ ಇಲ್ಲ ಅಂದ ಮೇಲೆ ಒಂದು ನಿಮ್ಮ ಪಕ್ಷಕ್ಕೆ ಮತ್ತು ನಿಮ್ಮ ಮಂತ್ರಿಗಿರಿಗೆ ರಾಜಿನಾಮೆ ಕೊಡಿ. ಇಲ್ಲಾ ಭವಿಷ್ಯವಿಲ್ಲದ ಅಡಿಕೆ ಬೆಳೆ ಬೆಳೆದಿರುವ ನೀವು ನಿಮ್ಮ ಅಡಿಕೆ ತೋಟವನ್ನು ನಾಶಪಡಿಸಿ ಅಡಿಕೆಗೆ ಬೆಲೆ ಇಲ್ಲಾ ಎಂದು ಸಾಬೀತು ಪಡಿಸಲು ನೀವು ಮೊದಲು ಬೇರೆ ಬೆಳೆಯನ್ನು ಬೆಳೆದು ತೋರಿಸಿ.

ಮೊದಲೆ ಸಂಕಷ್ಟದಲ್ಲಿದ್ದ ರೈತರಿಗೆ ಆತ್ಮಸ್ಥೈರ್ಯ ತುಂಬಾ ಬೇಕಾದ ಜವಬ್ದಾರಿಯುತ ವ್ಯಕ್ತಿಯಾದ ನೀವು, ನಿಮ್ಮ ಹೇಳಿಕೆ ಖಂಡನೀಯ. ನಮ್ಮ ಮಲೆನಾಡಿಗರಿಗೆ ಏಕಾಎಕಿ ಅಡಿಕೆ ಬೆಳೆ ಬಿಟ್ಟು ಬೆರೆ ಬೆಳೆಯಲು ತೋಟ ನಿರ್ಮಿಸಿದ ಜಾಗದಲ್ಲಿ ಸಾಧ್ಯವೆ? ಲಕ್ಷಾಂತರ ಜನರು ಅಡಿಕೆ ಬೆಳೆಯನ್ನು ಬೆಳೆದು ಬದುಕು ಸಾಗಿಸುತ್ತಿದ್ದಾರೆ ಈ ಬೆಳೆಯ ಮಾರುಕಟ್ಟೆ ನಂಬಿಕೊಂಡು ಸಹ ಲಕ್ಷಾಂತರ ಜನ ದಲ್ಲಾಳಿಗಳು ಮಾರಾಟಗಾರರು ಹಾಗೂ ಈ ಅಡಿಕೆ ಕೃಷಿಯ ಕೂಲಿಯಿಂದ ಜೀವನ ನಿರ್ವಹಿಸುವ ಲಕ್ಷಾಂತರ ಜನ ಕೂಲಿ ಕಾರ್ಮಿಕರು ಎಲ್ಲಿ ಹೋಗಬೇಕು ಗೃಹ ಮಂತ್ರಿಗಳೆ?

ಇಂತಹವೇ ಅನೇಕ ವಿಚಾರಗಳು ಮಲೆನಾಡಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆ ಆಗುತ್ತಿವೆ.

ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ

Published On - 6:05 pm, Fri, 30 December 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ