ಅಡಿಕೆ ನಿಷೇಧ ಮಾಡದಂತೆ ಕೇಂದ್ರಕ್ಕೆ ಮನವಿ; ಅಡಿಕೆ ಬೆಳೆಗಾರರಿಗೆ ಸಮಾಧಾನಕರ ಸುದ್ದಿ ಕೊಟ್ಟ ಆರಗ ಜ್ಞಾನೇಂದ್ರ
ಹಿಂದೆ ಕಾಂಗ್ರೆಸ್ ಸರ್ಕಾರದಿಂದ ಅಡಿಕೆ ಬಗ್ಗೆ ಅಫಿಡವಿಟ್ ಸಲ್ಲಿಸಲಾಗಿತ್ತು. ಅಡಿಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಾಗಿತ್ತು. ಅಫಿಡವಿಟ್ ತೆರವು ಮಾಡಲು ಸರ್ಕಾರ ಯತ್ನಿಸುತ್ತಿದೆ. ಅಡಿಕೆ ನಿಷೇಧದ ಬಗ್ಗೆ ಯಾರೂ ಮಾತನಾಡಬಾರದು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರು: ಅಡಿಕೆ ನಿಷೇಧ ಮಾಡುವ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಬಳಿಕ ಕರ್ನಾಟಕದ ಅಧಿಕಾರಿಗಳಿಂದ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ. ಅಡಿಕೆ ದೇಹಕ್ಕೆ ಹಾನಿಕಾರಕವಲ್ಲ ಎಂದು ತಿಳಿಸಿದ್ದೇವೆ. ದೇಶದಲ್ಲಿ ಅಡಿಕೆ ನಿಷೇಧ ಮಾಡದಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧಿಕಾರಿಗಳಿಂದ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸಚಿವರು ಸ್ಪಂದನೆ ನೀಡಿದ್ದಾರೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರದಿಂದ ಅಡಿಕೆ ಬಗ್ಗೆ ಅಫಿಡವಿಟ್ ಸಲ್ಲಿಸಲಾಗಿತ್ತು. ಅಡಿಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಾಗಿತ್ತು. ಅಫಿಡವಿಟ್ ತೆರವು ಮಾಡಲು ಸರ್ಕಾರ ಯತ್ನಿಸುತ್ತಿದೆ. ಅಡಿಕೆ ನಿಷೇಧದ ಬಗ್ಗೆ ಯಾರೂ ಮಾತನಾಡಬಾರದು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇತ್ತ ಕರ್ನಾಟಕ ರಾಜ್ಯದಲ್ಲಿ 25,000 ಕ್ಕೂ ಹೆಚ್ಚು ರೈತರು ಶ್ರೀಗಂಧ ಬೆಳೆದಿದ್ದಾರೆ. ಶ್ರೀಗಂಧಕ್ಕೆ ನಿಗದಿತ ಬೆಲೆ ಸಿಗುತ್ತಿಲ್ಲ, ರೈತರಿಗೆ ಮೋಸ ಆಗ್ತಿದೆ ಎಂದು ವಿಧಾನಪರಿಷತ್‌ನಲ್ಲಿ ಸದಸ್ಯ ಎಸ್. ರವಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶ್ರೀಗಂಧದ ಪಾಲಿಸಿ ಮಾಡ್ತಿದ್ದೇವೆಂದು ಉಮೇಶ್ ಕತ್ತಿ ಉತ್ತರ ನೀಡಿದ್ದಾರೆ. 2-3 ತಿಂಗಳಲ್ಲಿ ಶ್ರೀಗಂಧ ಪಾಲಿಸಿ ತರುತ್ತೇವೆ ಎಂದು ಕತ್ತಿ ಹೇಳಿದ್ದಾರೆ. ಅರಣ್ಯ ಇಲಾಖೆ ರೈತರಿಗೆ ಮೋಸ ಮಾಡ್ತಿದೆ ಎಂದು ಎಸ್.ರವಿ ಹೇಳಿದ್ದಾರೆ. ಶ್ರೀಗಂಧದ ಗಿಡಕ್ಕೆ 2.42 ಲಕ್ಷ ಕೊಡಬೇಕು ಅಂತ ಹೇಳಿದೆ. ಆದರೆ ಅರಣ್ಯ ಇಲಾಖೆ 10 ವರ್ಷದ ಗಿಡಕ್ಕೆ ₹1177 ನೀಡ್ತಿದೆ ಎಂದು ವಿಧಾನಪರಿಷತ್‌ನಲ್ಲಿ ಸದಸ್ಯ ಎಸ್. ರವಿ ಹೇಳಿಕೆ ನೀಡಿದ್ದಾರೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2022 ಇಂದು ವಿಧಾನಸಭೆಯಲ್ಲಿ ಮಂಡನೆ
ವಿಧಾನಸಭೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿದ್ದುಪಡಿ ವಿಧೇಯಕ ಮಂಡನೆ ಮಾಡಿದ್ದಾರೆ.
ತಾಲೂಕು ಪಂಚಾಯತ್ ಜನಸಂಖ್ಯೆ ಆಧಾರದಲ್ಲಿ ಸದಸ್ಯರ ಆಯ್ಕೆಗೆ ಅವಕಾಶ ಕಲ್ಪಿಸಲು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಸದ್ಯ ತಾಲೂಕು ಪಂಚಾಯತ್ ಗಳಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕನಿಷ್ಠ 11 ಸದಸ್ಯರನ್ನು ಆಯ್ಕೆ ಮಾಡಲು ಇರುವ ಅವಕಾಶ, ಹೊಸದಾಗಿ ರಚನೆ ಮಾಡಿರುವ ಕೆಲವು ತಾಲೂಕುಗಳಲ್ಲಿ 15 ಸಾವಿರ ಜನಸಂಖ್ಯೆ ಇರುವ ತಾಲೂಕು ಪಂಚಾಯತ್ ಗಳಿಗೂ ಕನಿಷ್ಠ 11 ಸದಸ್ಯರನ್ನು ಆಯ್ಕೆ ಮಾಡಲು ಇರುವ ಅವಕಾಶ, ಕಡಿಮೆ ಜನಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿನ ಸದಸ್ಯರಿಂದ ಅನಗತ್ಯ ಖರ್ಚು ಜೊತೆಗೆ ಸುಲಭ ಆಡಳಿತ ನಡೆಸಲೂ ಸಮಸ್ಯೆ ಎಂಬ ಕಾರಣಕ್ಕೆ ತಿದ್ದುಪಡಿಗೆ ತೀರ್ಮಾನ ಮಾಡಲಾಗಿದೆ.
ಈಗಿರುವ ಕಾನೂನಿನಲ್ಲಿ 12,500 ರಿಂದ 15,000 ಜನಸಂಖ್ಯೆಗೆ ಒಬ್ಬ ಸದಸ್ಯರ ಆಯ್ಕೆಯ ಅವಕಾಶ ಇದೆ. ಕಡಿಮೆ ಜನಸಂಖ್ಯೆ ಇರುವ ತಾಲೂಕುಗಳಲ್ಲಿ ಕನಿಷ್ಠ 11 ಸದಸ್ಯರ ಆಯ್ಕೆ ಪದ್ದತಿ ಸ್ಪಷ್ಟವಾಗಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಈಗಿರುವ ಕಾನೂನು ತಿದ್ದುಪಡಿ ಮಾಡುವಂತೆ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಸಲಹೆ ನೀಡಿದೆ.
ತಾಲೂಕಿನ ಜನಸಂಖ್ಯೆ 2 ಲಕ್ಷಕ್ಕಿಂತ ಹೆಚ್ಚಿದ್ದರೆ, ಕನಿಷ್ಠ 12 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರ ಆಯ್ಕೆ ಅವಕಾಶ ಕಲ್ಪಿಸಲು ತಿದ್ದುಪಡಿ. ತಾಲೂಕಿನ ಜನಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚು ಹಾಗೂ 2 ಲಕ್ಷಕ್ಕಿಂತ ಕಡಿಮೆ ಇದ್ದರೆ, ಕನಿಷ್ಠ 10 ಸಾವಿರ ಜನ ಸಂಖ್ಯೆಗೆ ಒಬ್ಬ ಸದಸ್ಯರ ಆಯ್ಕೆ ಅವಕಾಶ ಕಲ್ಪಿಸಲು ತಿದ್ದುಪಡಿ. ತಾಲೂಕಿನ ಜನಸಂಖ್ಯೆ 50 ಸಾವಿರದಿಂದ 1 ಲಕ್ಷದೊಳಗೆ ಇದ್ದರೆ ಕನಿಷ್ಠ 9 ಸದಸ್ಯರ ಆಯ್ಕೆ ಮಾಡಲು ಅವಕಾಶ ಕಲ್ಪಿಸಲು ತಿದ್ದುಪಡಿ. ತಾಲೂಕಿನ ಜನಸಂಖ್ಯೆ ಕನಿಷ್ಠ 50 ಸಾವಿರಕ್ಕಿಂತ ಕಡಿಮೆ ಇದ್ದಲ್ಲಿ ಕನಿಷ್ಠ 7 ಜನ ಸದಸ್ಯರ ಆಯ್ಕೆ ಅವಕಾಶ ಕಲ್ಪಿಸಲು ತಿದ್ದುಪಡಿ. ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವಾಗ ನೌಕರಿಯಿಂದ ವಜಾಗೊಂಡಿರುವ, ಕಡ್ಡಾಯ ನಿವೃತ್ತಿ ಹಾಗೂ ಸೇವೆಯಿಂದ ತೆಗೆದು ಹಾಕಿರುವ ನೌಕರರಿಗೆ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸದಿರಲು ಕಾನೂನು ತಿದ್ದುಪಡಿ. ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು ಮತ್ತು ನೌಕರರು ವಜಾಗೊಂಡಿದ್ದರೆ ಅಥವಾ ಅವರನ್ನು ತೆಗೆದುಹಾಕಿದ್ದರೆ, ಅವರಿಗೂ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸದಿರಲು ಕಾನೂನು ತಿದ್ದುಪಡಿ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 167(ಎಫ್) ಕಲಂಗೆ ತಿದ್ದುಪಡಿ ತರಲು ಸರ್ಕಾರ ನಿರ್ಧಾರ ಮಾಡಿದೆ.
ಇದನ್ನೂ ಓದಿ: ಅಡಿಕೆ ರಂಗದಲ್ಲಿ ಬದಲಾವಣೆಯ ಹವಾ ಫೈಬರ್ ದೋಟಿ
ಇದನ್ನೂ ಓದಿ: ನಮ್ಮ ರಾಜ್ಯ ವಿದೇಶಿಗರ ಪಾಲಿಗೆ ಧರ್ಮಛತ್ರ ಅಲ್ಲ: ವಿಧಾನ ಪರಿಷತ್ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ