ಹಿರಿಯಣ್ಣನಾಗಿ ನಿಮ್ಮ ಭವಿಷ್ಯ ಉಜ್ವಲಗೊಳಿಸುವೆ, ರಾಜ್ಯದಲ್ಲೇ ನಿಮ್ಮ ಶಿಕ್ಷಣ ಮುಂದುವರಿಸಿ -ಉಕ್ರೇನ್ ಮೆಡಿಕಲ್ ವಿದ್ಯಾರ್ಥಿಗಳಿಗೆ ಡಾ. ಸುಧಾಕರ್ ಅಭಯ
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಉಕ್ರೇನ್ನಿಂದ(Ukraine Returned Karnataka Medical Students) ಬಂದ ವಿದ್ಯಾರ್ಥಿಗಳ ಜೊತೆಯಲ್ಲಿ ಸಭೆ ನಡೆಸಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಸರ್ಕಾರ ಹೇಗೆ ಸಹಕರಿಸಬಹುದು. ವಿದ್ಯಾರ್ಥಿಗಳ ಮನವಿ ಏನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ .
ಬೆಂಗಳೂರು: ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್(K. Sudhakar), ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಉಕ್ರೇನ್ನಿಂದ(Ukraine Returned Karnataka Medical Students) ಬಂದ ವಿದ್ಯಾರ್ಥಿಗಳ ಜೊತೆಯಲ್ಲಿ ಸಭೆ ನಡೆಸಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಸರ್ಕಾರ ಹೇಗೆ ಸಹಕರಿಸಬಹುದು. ವಿದ್ಯಾರ್ಥಿಗಳ ಮನವಿ ಏನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ಹಿರಿಯಣ್ಣನಾಗಿ ನಿಮ್ಮ ಭವಿಷ್ಯ ಉಜ್ವಲಗೊಳಿಸುವೆ, ನಿಮ್ಮ ಶೈಕ್ಷಣಿಕ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ ಎಂದು ಉಕ್ರೇನ್ ಮೆಡಿಕಲ್ ವಿದ್ಯಾರ್ಥಿಗಳಿಗೆ ಡಾ. ಸುಧಾಕರ್ ಅಭಯ ನೀಡಿದ್ದಾರೆ.
ಯಾವುದೇ ಶುಲ್ಕ ಪಾವತಿಸದೆ ಶಿಕ್ಷಣ ಮುಂದುವರಿಸಬಹುದು ಸಭೆಯ ಬಳಿಕ ಮಾತನಾಡಿರುವ ಸಚಿವ ಸುಧಾಕರ್, ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿದ್ದೇವೆ. ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಕ್ಷೇಮವಾಗಿ ಹಿಂತಿರುಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಇವರ ಜೊತೆ ಸಭೆ ಮಾಡಿ ಅವರ ಭವಿಷ್ಯ ರೂಪಿಸುವುದರ ಬಗ್ಗೆ ಚರ್ಚೆ ಮಾಡಿ ಎಂದಿದ್ದರು. ಅದರಂತೆ ಇವತ್ತು ವಿದ್ಯಾರ್ಥಿಗಳ ಜೊತೆ ಚರ್ಚೆ ಮಾಡಿ ಅವರ ಅಭಿಪ್ರಾಯಗಳನ್ನ ಪಡೆದುಕೊಂಡಿದ್ದೇವೆ. ಪರಸ್ಪರ ವಿನಿಮಯದ ಬಳಿಕ ತಾತ್ಕಾಲಿಕ ಅಭಿಪ್ರಾಯಕ್ಕೆ ಬಂದಿದ್ದೇವೆ. ಮೊದಲಿಗೆ ಅವರ ಕಲಿಕೆ ನಿಂತುಹೋಗದೇ ಮುಂದುವರಿಯಬೇಕು. ಫಸ್ಟ್ ಇಯರ್ ನಿಂದ ಫೈನಲ್ ಇಯರ್ ವರೆಗಿನ ವಿದ್ಯಾರ್ಥಿಗಳಿದ್ದಾರೆ. ನಮ್ಮಲ್ಲಿರುವ 60 ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುತ್ತೆ.
ನಾನು ಒಂದು ಸಮಿತಿಯನ್ನ ನೇಮಕ ಮಾಡಿದ್ದೇನೆ. ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ಬಗ್ಗೆ ಕೇಂದ್ರಕ್ಕೆ ಹಾಗೂ ಎನ್ಎಂಸಿಗೆ ನಾವೂ ಏನ್ ಕೊಡಬೇಕು ಅನ್ನೋದರ ಬಗ್ಗೆ ಸಮಿತಿ ವರದಿ ನೀಡಲಿದೆ. ಇದರ ಜೊತೆಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಅವರಿಗೆ ಯಾವ ರೀತಿ ನ್ಯಾಯ ಕೊಡಿಸಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇರುವ ಕಾನೂನಿನಡಿ ನಮ್ಮ ಲಾ ಪ್ರಕಾರ ಇವರ ಶೈಕ್ಷಣಿಕ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಅಲ್ಲಿವರೆಗೂ ನಾನೊಬ್ಬ ಹಿರಿಯ ಅಣ್ಣನಾಗಿ ನಿಮ್ಮ ಭವಿಷ್ಯ ಬಹಳ ಉಜ್ವಲವಾಗಬೇಕು. ಮನೋಸ್ಥೈರ್ಯ ದಿಂದ ಇರಬೇಕು ಯಾರು ಕೂಡ ಕುಗ್ಗಬಾರದು. ನಾವೂ ವಿಸಿಯವರು ಎಲ್ಲಾ ಚಿಂತನೆ ಮಾಡಿ ಅಡಚಣೆ ಇಲ್ಲದೇ ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶಮಾಡಿಕೊಡಲಾಗಿದೆ. ಮುಂದೆ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಅವರಿಗೆ ನಮ್ಮ ಸರ್ಕಾರ ಅವರಿಗೆ ಉತ್ತಮ ಭವಿಷ್ಯ ರೂಪಿಸಲಿದೆ. ಅವರಿಗೆ ಅಧಿಕೃತವಾಗಿ ನೋಂದಣಿ ಮಾಡ್ತಿಲ್ಲ. ಅವರು ಸಧ್ಯ ಯಾವ ಫೀಸ್ ಕೂಡ ಕಟ್ಟುವ ಅವಶ್ಯಕತೆ ಇಲ್ಲ. ಸಮಿತಿಯ ವರದಿ ಬಂದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ‘ಅಪ್ಪು ದೇಹಬಿಟ್ಟು ಹೋಗಿರಬಹುದು, ಆದರೆ ನಮ್ಮ ಮನಸ್ಸನ್ನು ಬಿಟ್ಟುಹೋಗಲು ಸಾಧ್ಯವಿಲ್ಲ’: ರಾಘಣ್ಣ
ಭಗವದ್ಗೀತೆ ಮೂಲ ಪುಸ್ತಕದ ಬಗ್ಗೆ ಕೇಂದ್ರ ಸರ್ಕಾರದ ಬಳಿಯೇ ಮಾಹಿತಿ ಇಲ್ಲ: ವಕೀಲ ಸುರೇಂದ್ರ ಉಗಾರೆ
Published On - 3:37 pm, Mon, 21 March 22