AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಪ್ಪು ದೇಹಬಿಟ್ಟು ಹೋಗಿರಬಹುದು, ಆದರೆ ನಮ್ಮ ಮನಸ್ಸನ್ನು ಬಿಟ್ಟುಹೋಗಲು ಸಾಧ್ಯವಿಲ್ಲ’: ರಾಘಣ್ಣ

‘ಅಪ್ಪು ದೇಹಬಿಟ್ಟು ಹೋಗಿರಬಹುದು, ಆದರೆ ನಮ್ಮ ಮನಸ್ಸನ್ನು ಬಿಟ್ಟುಹೋಗಲು ಸಾಧ್ಯವಿಲ್ಲ’: ರಾಘಣ್ಣ

TV9 Web
| Updated By: ಮದನ್​ ಕುಮಾರ್​|

Updated on: Mar 21, 2022 | 3:23 PM

Share

Raghavendra Rajkumar: ‘ಪುನೀತ್ ರಾಜ್​ಕುಮಾರ್​ ಹೆಸರು ನಿರಂತರವಾಗಿ ಇರುತ್ತದೆ. ಅವರ ಕೆಲಸಗಳನ್ನು ಅಭಿಮಾನಿಗಳು ಮುಂದುವರಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್ ನಟನೆಯ ‘ಜೇಮ್ಸ್​’ (James Movie) ರಿಲೀಸ್​ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಭಾನುವಾರ (ಮಾ.20) ‘ಜೇಮ್ಸ್​’ ಸಿನಿಮಾ ಸಲುವಾಗಿ ಫ್ಯಾನ್ಸ್​ ಮೆರವಣಿಗೆ ನಡೆಸಿದರು. ಅದರಲ್ಲಿ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar)​ ಭಾಗಿ ಆಗಿದ್ದರು. ಆ ವೇಳೆ ಪುನೀತ್​ ರಾಜ್​ಕುಮಾರ್​ ಸಾಧನೆ ಬಗ್ಗೆ ರಾಘಣ್ಣ ಮಾತನಾಡಿದರು. ‘ಅಪ್ಪು ಸಂಪಾದನೆ ಮಾಡಿರುವುದು ಇದನ್ನೇ. ಜನರ ಪ್ರೀತಿ-ವಿಶ್ವಾಸ, ಅಭಿಮಾನವನ್ನು ಅವರು ಗಳಿಸಿದ್ದಾರೆ. ಇವತ್ತು ಪ್ರಕೃತಿ ಮಳೆ ಕೊಟ್ಟಿದೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಜನರು ಕೊಂಡಾಡುತ್ತಾ ಇದ್ದಾರೆ. ಅದನ್ನು ನಾನು ಕಣ್ತುಂಬಿಕೊಳ್ಳುತ್ತಾ ಇದೀನಿ. ಅವರ ಬಗ್ಗೆ ನಾವೇನು ಹೇಳೋದು? ಅಭಿಮಾನಿ ದೇವರುಗಳು ಇವರು. ಅಪ್ಪು ದೇಹಬಿಟ್ಟು ಹೋಗಿರಬಹುದು. ಆದರೆ ನಮ್ಮ ಮನಸ್ಸನ್ನು ಬಿಟ್ಟುಹೋಗಲು ಸಾಧ್ಯವಿಲ್ಲ. ನೆನಪುಗಳನ್ನು ಬಿಡಲು ಆಗುವುದಿಲ್ಲ. ಜನರ ಪ್ರೀತಿ ವಿಶ್ವಾಸಕ್ಕೆ ಪ್ರತಿಯಾಗಿ ನಾವು​ ಏನು ಕೊಡಬೇಕು ಅಂತ ಗೊತ್ತಾಗುತ್ತಿಲ್ಲ. ಭೂಮಿ ಇರುವವರೆಗೆ ಪುನೀತ್ ಹೆಸರು ಇರುತ್ತದೆ. ಅವರ ಕೆಲಸಗಳನ್ನು ಅಭಿಮಾನಿಗಳು ಮುಂದುವರಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

ಈಗ ಜನರು ಯಾರಲ್ಲಿ ಪುನೀತ್​ ಅವರನ್ನು ಕಾಣ್ತಾರೆ? ಉತ್ತರ ನೀಡಿದ ಯುವ ರಾಜ್​ಕುಮಾರ್​

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ