ಕೆನಡಾದಲ್ಲಿ ‘ಜೇಮ್ಸ್’ ನೋಡಿ ಹುಚ್ಚೆದ್ದು ಕುಣಿದ ಕನ್ನಡಿಗರು
ಪುನೀತ್ ಸಿನಿಮಾಗೆ ವಿದೇಶದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಾಣುತ್ತಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಹೀರೊ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿ ಮಾಡುತ್ತಿದೆ. ಈ ಚಿತ್ರವನ್ನು ನೋಡೋಕೆ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 9.9 ರೇಟಿಂಗ್ ಸಿಕ್ಕಿರೋದು ವಿಶೇಷ. ಪುನೀತ್ ಸಿನಿಮಾಗೆ ವಿದೇಶದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ‘ಜೇಮ್ಸ್’ (James Movie) ಪ್ರದರ್ಶನ ಕಾಣುತ್ತಿದೆ. ಈಗ ದೂರದ ಕೆನಡಾದಲ್ಲಿ ಪುನೀತ್ ಚಿತ್ರ ರಿಲೀಸ್ ಆಗಿದೆ. ಈ ಚಿತ್ರವನ್ನು ನೋಡಿದ ಅಲ್ಲಿನ ಕನ್ನಡಿಗರು ಥಿಯೇಟರ್ನಲ್ಲಿ ಸಖತ್ ಖುಷಿಪಟ್ಟಿದ್ದಾರೆ. ಮೊಬೈಲ್ನಲ್ಲಿ ಟಾರ್ಚ್ ಆನ್ ಮಾಡಿ ಪ್ರದರ್ಶಿಸುವ ಮೂಲಕ ಅಪ್ಪುಗೆ ವಿಶೇಷ ನಮನ ಸಲ್ಲಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದೆ. ಮಾರ್ಚ್ 17ರಂದು ‘ಜೇಮ್ಸ್’ ಸಿನಿಮಾ ತೆರೆಗೆ ಬಂದಿದೆ. ಚೇತನ್ ಕುಮಾರ್ ನಿರ್ದೇಶನದ ಈ ಸಿನಿಮಾಗೆ ಪ್ರಿಯಾ ಆನಂದ್ ನಾಯಕಿ.
ಇದನ್ನೂ ಓದಿ: ಪುನೀತ್ ನಾಮಫಲಕ, ಕನ್ನಡ ಭಾವುಟಕ್ಕೆ ಅವಮಾನ; ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ದೃಶ್ಯವೇ ಸಾಕ್ಷಿ
‘ಪುನೀತ್ ನಟನೆಯ ಜೇಮ್ಸ್ ನೋಡಿದ್ರಾ?’; ಈ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಜ್ಯೂ.ಎನ್ಟಿಆರ್