‘RRR’ ಇವೆಂಟ್ನಲ್ಲಿ ಕಳ್ಳರ ಕೈಚಳಕ; ಬೈಕ್, ಮೊಬೈಲ್ ಕಳೆದುಕೊಂಡು ಕಣ್ಣೀರು ಹಾಕಿದ ಫ್ಯಾನ್ಸ್
ಮಾ.25ರಂದು ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾದ ಪ್ರೀ-ಬುಕಿಂಗ್ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳು ಮುಗಿಬಿದ್ದು, ಸಿನಿಮಾ ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ರಾಜಮೌಳಿ (Rajamouli)ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ತಂಡ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಮಟ್ಟದ ಪ್ರೀ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಲಕ್ಷಾಂತರ ಜನರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬೇಸರದ ವಿಚಾರ ಎಂದರೆ, ಈ ಕಾರ್ಯಕ್ರಮದಲ್ಲಿ ಕಳ್ಳರು ಕೈಚಳಕ ಮೆರೆದಿದ್ದಾರೆ. 100 ಎಕರೆ ಜಾಗದಲ್ಲಿ ಭಾರಿ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಹಲವರು ತಮ್ಮ ಅಮೂಲ್ಯ ವಸ್ತುವನ್ನು ಕಳೆದುಕೊಂಡ ಬಗ್ಗೆ ವರದಿ ಆಗಿದೆ. ಮೂರು ಬೈಕ್ ಹಾಗೂ ಹಲವು ಮೊಬೈಲ್ಗಳು ಕಳ್ಳತನವಾಗಿದೆ. ಇದರಿಂದ ಫ್ಯಾನ್ಸ್ ಕಣ್ಣೀರು ಹಾಕುವಂತೆ ಆಗಿದೆ. ಮಾ.25ರಂದು ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾದ ಪ್ರೀ-ಬುಕಿಂಗ್ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳು ಮುಗಿಬಿದ್ದು, ಸಿನಿಮಾ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ (Bengaluru) ಹಲವು ಶೋಗಳ ಟಿಕೆಟ್ಗಳು ಸೋಲ್ಡ್ಔಟ್ ಆಗಿದೆ.
ಇದನ್ನೂ ಓದಿ: ‘ನಿಜವಾದ ದೇಶಪ್ರೇಮಿಗಳು ದುಡ್ಡು ಕೊಟ್ಟು RRR ಚಿತ್ರ ನೋಡ್ಬೇಕು’: ಸಿಎಂ ಬೊಮ್ಮಾಯಿ ಬಹಿರಂಗ ಮನವಿ