ಉಕ್ರೇನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮುಂದಿನ ಓದಿಗೆ ವ್ಯವಸ್ಥೆ ಮಾಡುವಂತೆ ನವೀನ್ ತಂದೆ ಮುಖ್ಯಮಂತ್ರಿಗಳನ್ನು ವಿನಂತಿಸಿದರು

ಉಕ್ರೇನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮುಂದಿನ ಓದಿಗೆ ವ್ಯವಸ್ಥೆ ಮಾಡುವಂತೆ ನವೀನ್ ತಂದೆ ಮುಖ್ಯಮಂತ್ರಿಗಳನ್ನು ವಿನಂತಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 21, 2022 | 4:23 PM

ಒಬ್ಬ ವಿದ್ಯಾರ್ಥಿ ಹೇಳುವ ಪ್ರಕಾರ ಎಲ್ಲರಿಗಿಂತ ಮೊದಲು ನವೀನ್ ತಂದೆ ಶೇಖರಪ್ಪನವರೇ ಮುಖ್ಯಮಂತ್ರಿಗಳ ಎದುರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾತಾಡಿದರಂತೆ. ನನ್ನ ಮಗನ ಕತೆಯಂತೂ ಹೀಗಾಯ್ತು, ಸ್ವದೇಶಕ್ಕೆ ಮರಳಿರುವ ಮಿಕ್ಕಿದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ಏರ್ಪಾಟು ಮಾಡಿ ಅಂತ ಅವರು ವಿನಂತಿಸಿಕೊಂಡಿದ್ದಾರೆ.

ಉಕ್ರೇನಲ್ಲಿ ಶೆಲ್ಲಿಂಗ್ ಗೆ (Shelling) ಬಲಿಯಾ ಹಾವೇರಿ ಹುಡುಗ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gyangoudar) ಅವರ ಪಾರ್ಥೀವ ಶರೀರ ಸೋಮವಾರ ಮೊದಲು ಬೆಂಗಳೂರಿಗೆ ನಂತರ ಅವರ ಸ್ವಗ್ರಾಮ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಾಗೆ ಆಗಮಿಸಿತು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನವೀನ್ ದೇಹವನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಸ್ವಾಮೀಜಿಗಳು ಚಳಗೇರಾನಲ್ಲಿ ಉಪಸ್ಥಿತರಿದ್ದರು. ಉಕ್ರೇನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಅಲ್ಲಿ ಯುದ್ಧ ಶುರುವಾದ ಬಳಿಕ ಸ್ವದೇಶಕ್ಕೆ ವಾಪಸ್ಸಾದ ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ನವೀನ್ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು. ಟಿವಿ9 ಹಾವೇರಿ ವರದಿಗಾರ ಬಸವರಾಜ ಅವರು ಕೆಲ ವಿದ್ಯಾರ್ಥಿಗಳೊಂದಿಗೆ ಮಾತಾಡಿದ್ದಾರೆ. ಈ ವಿದ್ಯಾರ್ಥಿಗಳ ಓದು ತೂಗುಯ್ಯಾಲೆಯಲ್ಲಿದೆ. ಇವರು ಮುಖ್ಯಮಂತ್ರಿಗಳೊಂದಿಗೆ ತಮ್ಮ ಆತಂಕವನ್ನು ಹೇಳಿಕೊಂಡಿದ್ದಾರೆ.

ಒಬ್ಬ ವಿದ್ಯಾರ್ಥಿ ಹೇಳುವ ಪ್ರಕಾರ ಎಲ್ಲರಿಗಿಂತ ಮೊದಲು ನವೀನ್ ತಂದೆ ಶೇಖರಪ್ಪನವರೇ ಮುಖ್ಯಮಂತ್ರಿಗಳ ಎದುರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾತಾಡಿದರಂತೆ. ನನ್ನ ಮಗನ ಕತೆಯಂತೂ ಹೀಗಾಯ್ತು, ಸ್ವದೇಶಕ್ಕೆ ಮರಳಿರುವ ಮಿಕ್ಕಿದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ಏರ್ಪಾಟು ಮಾಡಿ ಅಂತ ಶೇಖರಪ್ಪನವರು ಬಸವರಾಜ ಬೊಮ್ಮಾಯಿ ಅವರನ್ನು ವಿನಂತಿಸಿಕೊಂಡರಂತೆ.

ಬೊಮ್ಮಾಯಿ ಅವರು ಕೇಂದ್ರ ಸರ್ಕಾರ ಮತ್ತು ಭಾರತದ ಮೆಡಿಕಲ್ ಕೌನ್ಸಿಲ್ ಮೇಲೆ ಒತ್ತಡ ಹೇರಿ ವಿದ್ಯಾರ್ಥಿಗಳ ಸಹಾಯ ಮಾಡುವ ಭರವಸೆ ನೀಡಿರುವರಂತೆ.

ತರಳಬಾಳು ಸ್ವಾಮೀಜಿ ಅವರ ಜೊತೆಯೂ ವಿದ್ಯಾರ್ಥಿಗಳು ಮಾತಾಡಿದ್ದಾರೆ. ಸರ್ಕಾರ ಏನಾದರೂ ವ್ಯವಸ್ಥೆ ಮಾಡುತ್ತದೆ, ಆತಂಕಪಡೋದು ಬೇಡ ಅಂತ ಜಗದ್ಗುರುಗಳು ಹೇಳಿದ್ದಾರೆ.

ನವೀನ್ ಅವರ ತಂದೆಯ ಹೃದಯ ವೈಶಾಲ್ಯತೆ, ಬೇರೆ ಮಕ್ಕಳ ಬಗ್ಗೆ ಅವರಿಗಿರುವ ಕಾಳಜಿ ಅಭಿನಂದನೀಯ. ಮುಖ್ಯಮಂತ್ರಿಗಳ ಜೊತೆ ಅವರೇ ಮೊದಲು ಮಾತಾಡಿರುವುದಕ್ಕೆ ವಿದ್ಯಾರ್ಥಿಗಳು ಸಂತೋಷಪಟ್ಟಿದ್ದಾರೆ. ಅವರು ಹೇಳುವ ಹಾಗೆ ಕರ್ನಾಟಕದ 792 ವಿದ್ಯಾರ್ಥಿಗಳು ಉಕ್ರೇನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ:   20 ದಿನಗಳ ಬಳಿಕ ಮಗನ ಮುಖ ನೋಡುವ ಅವಕಾಶ ಸಿಕ್ಕಿದೆ: ನವೀನ್ ನೆನೆದು ಭಾವುಕರಾದ ತಾಯಿ ವಿಜಯಲಕ್ಷ್ಮೀ

ಇದನ್ನೂ ಓದಿ: ಉಕ್ರೇನ್​ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹ: ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದ ಸಿಎಂ