20 ದಿನಗಳ ಬಳಿಕ ಮಗನ ಮುಖ ನೋಡುವ ಅವಕಾಶ ಸಿಕ್ಕಿದೆ: ನವೀನ್ ನೆನೆದು ಭಾವುಕರಾದ ತಾಯಿ ವಿಜಯಲಕ್ಷ್ಮೀ
‘ಮಗನನ್ನು ನೆನೆದು ಭಾವುಕರಾದ ನವೀನ್ ತಾಯಿ ವಿಜಯಲಕ್ಷ್ಮೀ, ನನ್ನ ಪುತ್ರ ನವೀನ್ ವೈದ್ಯನಾಗಿ ಬರುತ್ತಾನೆಂದು ಕನಸು ಕಂಡಿದ್ದೆ. ಆದರೆ ಮಗ ಜೀವಂತವಾಗಿ ವಾಪಸ್ ಬರಲಿಲ್ಲ’ ಎಂದರು
ಹಾವೇರಿ: ಉಕ್ರೇನ್‌ನಲ್ಲಿ ಮೃತಪಟ್ಟಿದ್ದ ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹ ಸ್ವಗ್ರಾಮಕ್ಕೆ ತಲುಪಿದೆ. ಮಗನನ್ನು ನೆನೆದು ಭಾವುಕರಾದ ನವೀನ್ ತಾಯಿ ವಿಜಯಲಕ್ಷ್ಮೀ, ನನ್ನ ಪುತ್ರ ನವೀನ್ ವೈದ್ಯನಾಗಿ ಬರುತ್ತಾನೆಂದು ಕನಸು ಕಂಡಿದ್ದೆ. ಆದರೆ ಮಗ ಜೀವಂತವಾಗಿ ವಾಪಸ್ ಬರಲಿಲ್ಲ’ ಎಂದರು. 20 ದಿನಗಳ ಬಳಿಕ ಮಗನ ಮುಖ ನೋಡುವ ಅವಕಾಶ ಸಿಕ್ಕಿದೆ. ಮಗನ ಮುಖ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಸ್ವಲ್ಪ ನೆಮ್ಮದಿ ಎನಿಸಿತು ಎಂದರು.
ಸ್ವಗ್ರಾಮದ ಮಗನ ಫೋಟೊ ಎದುರು ಕುಳಿತಿದ್ದ ಅವರು, ಮಗನನ್ನ ನೆನೆದು ಭಾವುಕರಾದರು. ಮಗನ ಮೃತದೇಹ ನಿವಾಸಕ್ಕೆ ಆಗಮಿಸಿದ ಮೇಲೆ ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗುತ್ತದೆ ಎಂದರು.
ನವೀನ್ ಅವರ ತಂದೆ ಶೇಖರ್ ಗೌಡ ಮಾತನಾಡಿ, ಬೆಳಿಗ್ಗೆ ಒಂಬತ್ತು ಗಂಟೆಗೆ ನವೀನ ಪಾರ್ಥೀವ ಶರೀರ ನಿವಾಸಕ್ಕೆ ಬರಲಿದೆ. ವೀರಶೈವ ಸಂಪ್ರದಾಯದಂತೆ ಸ್ಥಳೀಯ ಸ್ವಾಮಿಗಳ ನೇತೃತ್ವದಲ್ಲಿ ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಯ ನಂತರ ಪಾರ್ಥಿವ ಶರೀರವನ್ನ ನಿವಾಸದ ಮುಂದೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ಸಾರ್ವಜನಿಕ ದರ್ಶನದ ನಂತರ ಗ್ರಾಮದಲ್ಲಿ ನವೀನ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ.
ಪೂಜೆ, ಸಾರ್ವಜನಿಕ ದರ್ಶನ, ಮೆರವಣಿಗೆ ಮುಗಿದ ಮೇಲೆ ಶರೀರವನ್ನು ದಾವಣಗೆರೆಯ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುತ್ತದೆ.
ಇದನ್ನೂ ಓದಿ: ಉಕ್ರೇನ್ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹ: ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದ ಸಿಎಂ
ಇದನ್ನೂ ಓದಿ: ನಾನು ಸಾಯುವರೆಗೆ ಅವನು ನನ್ನಲ್ಲಿ ಬದುಕಿರುತ್ತಾನೆ ಎಂದರು ನವೀನ್ ಶೇಖರಪ್ಪ ಗ್ಯಾನಗೌಡರ್ ತಾಯಿ