‘ನಿಜವಾದ ದೇಶಪ್ರೇಮಿಗಳು ದುಡ್ಡು ಕೊಟ್ಟು RRR ಚಿತ್ರ ನೋಡ್ಬೇಕು’: ಸಿಎಂ ಬೊಮ್ಮಾಯಿ ಬಹಿರಂಗ ಮನವಿ

CM Basavaraj Bommai | RRR Movie: ‘ಆರ್​ಆರ್​ಆರ್​’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ವೇದಿಕೆಯಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡರು. ಚಿತ್ರತಂಡಕ್ಕೆ ಅವರು ಶುಭ ಕೋರಿದರು.

‘ನಿಜವಾದ ದೇಶಪ್ರೇಮಿಗಳು ದುಡ್ಡು ಕೊಟ್ಟು RRR ಚಿತ್ರ ನೋಡ್ಬೇಕು’: ಸಿಎಂ ಬೊಮ್ಮಾಯಿ ಬಹಿರಂಗ ಮನವಿ
ಆರ್​ಆರ್​ಆರ್​ ಸಿನಿಮಾ ಪೋಸ್ಟರ್​, ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 22, 2022 | 10:53 AM

ಬಹುನಿರೀಕ್ಷಿತ ‘ಆರ್​ಆರ್​ಆರ್​’ ಸಿನಿಮಾ (RRR Movie) ಮಾ.25ರಂದು ಬಿಡುಗಡೆ ಆಗಲಿದೆ. ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿರುವ ಚಿತ್ರತಂಡವು ಚಿಕ್ಕಬಳ್ಳಾಪುರದಲ್ಲಿ ಪ್ರೀ-ರಿಲೀಸ್​ ಇವೆಂಟ್​ (RRR Movie Pre-release Event) ನಡೆಸಿದೆ. ಶನಿವಾರ (ಮಾ.19) ಬೃಹತ್​ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ‘ಆರ್​ಆರ್​ಆರ್​’ ಸಿನಿಮಾ ತಂಡದವರಿಗೆ ಕರುನಾಡಿನ ಜೊತೆ ಇರುವ ನಂಟು ಎಂಥದ್ದು ಎಂಬುದನ್ನು ಅವರು ಮೆಲುಕು ಹಾಕಿದರು. ಈ ಕಾರ್ಯಕ್ರಮದಲ್ಲಿ ನಟರಾದ ಶಿವರಾಜ್​ಕುಮಾರ್​, ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ನಿರ್ದೇಶಕ ರಾಜಮೌಳಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್​ ಸೇರಿದಂತೆ ಅನೇಕರು ಭಾಗಿ ಆಗಿದ್ದರು. ಲಕ್ಷಾಂತರ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅಕ್ಕ-ಪಕ್ಕದ ರಾಜ್ಯಗಳಿಂದ ಅಭಿಮಾನಿಗಳು ಆಗಮಿಸಿದ್ದರು. ‘ಆರ್​ಆರ್​ಆರ್​’ ಪ್ರೀ-ರಿಲೀಸ್​ ಇವೆಂಟ್​ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಿದ ಮಾತುಗಳು ಇಲ್ಲಿವೆ..

‘ನಮಸ್ತ ಕರ್ನಾಟಕದ ಜನತೆಯ ಪರವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಿರ್ದೇಶಕ ರಾಜಮೌಳಿ ನಮ್ಮವರು. ನಮ್ಮ ರಾಯಚೂರಿನವರು. ಅದೇ ರೀತಿ ಜ್ಯೂ. ಎನ್​ಟಿಆರ್ ಅವರು ತಾಯಿ ಮೂಲಕ ಕನ್ನಡದ ನಂಟು ಹೊಂದಿದ್ದಾರೆ. ರಾಮ್​ ಚರಣ್​ ಅವರ ತಂದೆ ಚಿರಂಜೀವಿ ಅವರು ಕನ್ನಡದಲ್ಲಿಯೂ ಮೆಗಾಸ್ಟಾರ್​’ ಎಂದು ಬಸವರಾಜ ಬೊಮ್ಮಾಯಿ ಅವರು ಮಾತು ಆರಂಭಿಸಿದರು.

‘ಆರ್​ಆರ್​ಆರ್​’ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಥೆ ಇದೆ. ‘ಬಹಳಷ್ಟು ಜನರಿಗೆ ಈ ವಿಷಯ ತಿಳಿದಿಲ್ಲ. ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ರಣ ಕಹಳೆ ಊದಿದ ಮಹಿಳೆ ನಮ್ಮ ಕಿತ್ತೂರು ರಾಣಿ ಚೆನ್ನಮ್ಮ. ಝಾನ್ಸಿ ಲಕ್ಷ್ಮೀಬಾಯಿಗೂ ಮುನ್ನ ಚೆನ್ನಮ್ಮ ವೀರತ್ವ ತೋರಿಸಿದ್ದರು. ನಮಗೆ ಸ್ವಾತಂತ್ರ್ಯ ಬರಲು ಅನೇಕ ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಇಂದಿನ ನಮ್ಮ ಯುವ ಪೀಳಿಗೆಗೆ ಸತ್ಯ ತಿಳಿಯಬೇಕು. ಆಗ ಮಾತ್ರ ನಾವು ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯ. ಅದಕ್ಕಾಗಿ ನಾನು ರಾಜಮೌಳಿ ಅವರಿಗೆ ವಿಶೇಷವಾದ ಧನ್ಯವಾದ ತಿಳಿಸುತ್ತೇನೆ. ರಾಜಮೌಳಿ ಕೇವಲ ಸಿನಿಮಾ ಮೇಕರ್​ ಅಲ್ಲ. ಅವರು ಸೃಷ್ಟಿಕರ್ತ. ಇದು ಇಂಡಿಯನ್​ ಸಿನಿಮಾ. ಈ ಚಿತ್ರವನ್ನು ನೋಡಿ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂಬ ವಿಶ್ವಾಸ ನನಗೆ ಇದೆ. ನಿಜವಾದ ದೇಶಪ್ರೇಮಿಗಳು, ಭಾರತದ ಬಗ್ಗೆ ಪ್ರೇಮ ಇರುವವರು ಥಿಯೇಟರ್​ಗೆ ಹೋಗಿ ದುಡ್ಡು ಕೊಟ್ಟು ಈ ಸಿನಿಮಾ ನೋಡಬೇಕು ಅಂತ ನಾನು ವಿನಂತಿ ಮಾಡಿಕೊಳ್ಳುತ್ತೇನೆ’ ಎಂದು ಬೊಮ್ಮಾಯಿ ಹೇಳಿದರು.

‘ಇದು ತೆಲುಗು ಸಿನಿಮಾ ಆದರೂ ಕೂಡ ಕರ್ನಾಟಕಕ್ಕೆ ಬಂದು ಪ್ರೀ-ರಿಲೀಸ್​ ಕಾರ್ಯಕ್ರಮ ಮಾಡುವ ಮೂಲಕ ಬಂಧವನ್ನು ಗಟ್ಟಿಗೊಳಿಸಿದ್ದೀರಿ. ಅದಕ್ಕೆ ಧನ್ಯವಾದಗಳು. ಈ ಸಿನಿಮಾ ಅತ್ಯಂತ ಯಶಸ್ವಿ ಆಗಲಿ. ರಾಜಮೌಳಿ ಅವರು ತಮ್ಮ ರೆಕಾರ್ಡ್​ಗಳನ್ನು ತಾವೇ ಮುರಿಯಬೇಕು’ ಎಂದು ಬಸವರಾಜ ಬೊಮ್ಮಾಯಿ ಹಾರೈಸಿದರು. ‘ಭಗತ್​ ಸಿಂಗ್​, ಸುಭಾಷ್​ ಚಂದ್ರ ಬೋಸ್​​, ಕಿತ್ತೂರು ರಾಣಿ ಚೆನ್ನಮ್ಮ, ಚಂದ್ರಶೇಖರ್ ಆಜಾದ್​, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಲಾಲಾ ಲಜಪತ ರಾಯ್​ ಮುಂತಾದ ಅನ್​ಸಂಗ್​ ಹೀರೋಗಳಿಗೆ ಈ ಸಿನಿಮಾ ಅರ್ಪಣೆ ಆಗಬೇಕು’ ಎಂದು ಬೊಮ್ಮಾಯಿ ಹೇಳಿದರು.

‘ಆರ್​ಆರ್​ಆರ್’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ನಮನ ಸಲ್ಲಿಸಲಾಯಿತು. ‘ಅಪ್ಪುನನ್ನು ಹೇಗೆ ನಾನು ಮರೆಯಲು ಸಾಧ್ಯ? ಎಲ್ಲಿ ನೋಡಿದರೂ ನನಗೆ ಅಪ್ಪು ಕಾಣಿಸುತ್ತಾರೆ. ಪ್ರತಿಯೊಬ್ಬ ಕನ್ನಡಿಗರಲ್ಲಿ ಶಾಶ್ವತವಾದ ಸ್ಥಾನವನ್ನು ಪುನೀತ್​ ಪಡೆದುಕೊಂಡಿದ್ದಾರೆ. ಇದೇ ರೀತಿಯ ದೊಡ್ಡ ವೇದಿಕೆಯಲ್ಲಿ ಪುನೀತ್​ಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ:

ತೆಲುಗಿನ ‘RRR’ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ; ಇಲ್ಲಿವೆ ಫೋಟೋಗಳು​

RRR ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಜ್ಯೂ. ಎನ್​ಟಿಆರ್ ಕನ್ನಡ ಮಾತು; ಫ್ಯಾನ್ಸ್​ ಮನಗೆದ್ದ ಸ್ಟಾರ್​ ನಟ

Published On - 10:31 am, Sun, 20 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ