RRR ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಜ್ಯೂ. ಎನ್​ಟಿಆರ್ ಕನ್ನಡ ಮಾತು; ಫ್ಯಾನ್ಸ್​ ಮನಗೆದ್ದ ಸ್ಟಾರ್​ ನಟ

RRR ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಜ್ಯೂ. ಎನ್​ಟಿಆರ್ ಕನ್ನಡ ಮಾತು; ಫ್ಯಾನ್ಸ್​ ಮನಗೆದ್ದ ಸ್ಟಾರ್​ ನಟ

TV9 Web
| Updated By: ಮದನ್​ ಕುಮಾರ್​

Updated on: Mar 20, 2022 | 9:30 AM

Jr NTR Kannada speech: ‘ಆರ್​ಆರ್​ಆರ್​’ ವೇದಿಕೆಯಲ್ಲಿ ಲಕ್ಷಾಂತರ ಜನರ ಎದುರಿನಲ್ಲಿ ಮೈಕ್​ ಹಿಡಿದ ಜ್ಯೂ. ಎನ್​ಟಿಆರ್​ ಅವರು ಕನ್ನಡದಲ್ಲೇ ಮಾತು ಆರಂಭಿಸಿದರು. ಆ ವಿಡಿಯೋ ಇಲ್ಲಿದೆ..

ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದಲ್ಲಿ ‘ಆರ್​ಆರ್​ಆರ್​’ (RRR) ಸಿನಿಮಾದ ಪ್ರೀ-ರಿಲೀಸ್​ ಇವೆಂಟ್ (RRR Movie Pre-release Event) ನಡೆದಿದೆ. ಶನಿವಾರ (ಮಾ.19) ಜರುಗಿದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಟಾಲಿವುಡ್​ ನಟ ಜ್ಯೂ. ಎನ್​ಟಿಆರ್​ (Jr NTR) ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು. ಈಗಾಗಲೇ ತಿಳಿದಿರುವಂತೆ ಜ್ಯೂ. ಎನ್​ಟಿಆರ್​ ಅವರ ತಾಯಿ ಕರ್ನಾಟಕದವರು. ಹಾಗಾಗಿ ಅವರಿಗೆ ಮನೆಯಲ್ಲಿ ಕನ್ನಡ ಮಾತನಾಡಿ ಅಭ್ಯಾಸ ಇದೆ. ಸಂದರ್ಭ ಸಿಕ್ಕಾಗಲೆಲ್ಲ ಅವರು ಕನ್ನಡ ಬಳಸುತ್ತಾರೆ. ‘ಆರ್​ಆರ್​ಆರ್​’ ವೇದಿಕೆಯಲ್ಲಿ ಲಕ್ಷಾಂತರ ಜನರ ಎದುರಿನಲ್ಲಿ ಮೈಕ್​ ಹಿಡಿದ ಅವರು ಕನ್ನಡದಲ್ಲೇ ಮಾತು ಆರಂಭಿಸಿದರು. ‘ಎಲ್ಲರಿಗೂ ನಮಸ್ಕಾರ, ಕರ್ನಾಟಕಕ್ಕೆ ನಮಸ್ಕಾರ, ಚಿಕ್ಕಬಳ್ಳಾಪುರಕ್ಕೆ ನಮಸ್ಕಾರ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ. ಚಿಕ್ಕಬಳ್ಳಾಪುರದ ಮಗ, ಆರೋಗ್ಯ ಸಚಿವ, ನನ್ನ ಸ್ನೇಹಿತ, ನನ್ನ ಅಣ್ಣನ ರೀತಿ ಇರುವ ಸುಧಾಕರ್​ ಅವರಿಗೆ ಧನ್ಯವಾದ. ನಮ್ಮಣ್ಣ ಶಿವರಾಜ್​ಕುಮಾರ್ ಅವರಿಗೆ ಧನ್ಯವಾದಗಳು’ ಎಂದು ಹೇಳುವ ಮೂಲಕ ಜ್ಯೂ. ಎನ್​ಟಿಆರ್​ ಅವರು ಎಲ್ಲರ ಮನ ಗೆದ್ದರು. 100 ಎಕರೆ ಜಾಗದಲ್ಲಿ ಭಾರಿ ವಿಜೃಂಭಣೆಯಿಂದ ಈ ಕಾರ್ಯಕ್ರಮ ನಡೆದಿದೆ. ಮಾ.25ರಂದು ‘ಆರ್​ಆರ್​ಆರ್​’ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ತೆಲುಗಿನ ‘RRR’ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ; ಇಲ್ಲಿವೆ ಫೋಟೋಗಳು​

‘ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ’; ಫ್ಯಾನ್ಸ್​ ಅತಿರೇಕಕ್ಕೆ ಶಿವರಾಜ್​ಕುಮಾರ್​ ಗರಂ