‘ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ’; ಫ್ಯಾನ್ಸ್​ ಅತಿರೇಕಕ್ಕೆ ಶಿವರಾಜ್​ಕುಮಾರ್​ ಗರಂ

ಮೈಸೂರಿನಲ್ಲಿ ಫೋಟೋಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ಕೆಲವರ ವರ್ತನೆ ಕಂಡು ಶಿವರಾಜ್​ಕುಮಾರ್​ ಅವರಿಗೆ ಕೋಪ ಬಂದಿದೆ.

TV9kannada Web Team

| Edited By: Madan Kumar

Mar 17, 2022 | 1:02 PM

ಸ್ಟಾರ್​ ನಟರನ್ನು ಕಂಡಾಗ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಆಸೆಪಡುತ್ತಾರೆ. ಆದರೆ ಕೆಲವೊಮ್ಮೆ ಅಭಿಮಾನಿಗಳ ವರ್ತನೆ ಮಿತಿ ಮೀರುತ್ತದೆ. ಅಂಥ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಸಿಟ್ಟಾಗುವುದು ಸಹಜ. ಸಾಮಾನ್ಯವಾಗಿ ಶಿವರಾಜ್​ಕುಮಾರ್ (Shivarajkumar)​ ಅವರು ಕೋಪಗೊಳ್ಳುವುದಿಲ್ಲ. ಆದರೆ ಅಭಿಮಾನಿಗಳು ಅತಿರೇಕವಾಗಿ ವರ್ತಿಸಿದಾಗ ಅವರು ಸಿಟ್ಟಾಗುವುದುಂಟು. ಈಗ ಮೈಸೂರಿನಲ್ಲಿ ಅದೇ ರೀತಿ ಆಗಿದೆ. ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬ ಮತ್ತು ‘ಜೇಮ್ಸ್​’ ಸಿನಿಮಾ ಬಿಡುಗಡೆಯ ಈ ಸಂದರ್ಭದಲ್ಲಿ ಶಿವಣ್ಣ ಮೈಸೂರಿಗೆ ತೆರಳಿದ್ದಾರೆ. ಅಲ್ಲಿನ ಶಕ್ತಿಧಾಮಕ್ಕೆ (Shakthidhama) ಪತ್ನಿ ಗೀತಾ ಶಿವರಾಜ್​ಕುಮಾರ್​ ಜೊತೆ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳು (Shivarajkumar Fans) ಫೋಟೋಗಾಗಿ ಮುಗಿಬಿದ್ದಿದ್ದಾರೆ. ಕೆಲವರ ವರ್ತನೆ ಕಂಡು ಶಿವರಾಜ್​ಕುಮಾರ್​ ಅವರಿಗೆ ಕೋಪ ಬಂದಿದೆ. ‘ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ. ಯಾಕೆ ಹೀಗೆಲ್ಲ ಮಾಡ್ತೀರಿ ಹೇಳಿ. ಅದೇ ಇಷ್ಟ ಆಗಲ್ಲ. ಯೇ ಬಿಡಣ್ಣಾ ಅಂತ ಏನ್​ ಅದು ಆವಾಜ್​? ಯಾರಿಗೆ ಆ್ಯಟಿಡ್ಯೂಡ್​ ತೋರಿಸ್ತಾ ಇದೀಯ ನೀನು?’ ಎಂದು ಶಿವರಾಜ್​ಕುಮಾರ್​ ಕೋಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್​ ಫ್ಯಾನ್ಸ್​

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ

Follow us on

Click on your DTH Provider to Add TV9 Kannada