ನವದೆಹಲಿ: 2022ರ ಸೆಪ್ಟೆಂಬರ್ ತಿಂಗಳಲ್ಲಿ 1,47,686 ಕೋಟಿ ರೂಪಾಯಿ ಸರಕು ಮತ್ತು ಸೇವೆ ತೆರಿಗೆ (GST) ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 26ರಷ್ಟು ಏರಿಕೆ ಕಂಡಿದೆ.
ಜಿಎಸ್‌ಟಿ ಸಂಗ್ರಹ ಸತತ ಏಳನೇ ತಿಂಗಳು 1.40 ಲಕ್ಷ ಕೋಟಿ ರೂಪಾಯಿ ಗಡಿಯನ್ನು ದಾಟಿದೆ, ಒಟ್ಟು ಕೇಂದ್ರೀಯ ಜಿಎಸ್‌ಟಿ 25,271 ಕೋಟಿ ರೂ. ಹಾಗೂ ರಾಜ್ಯ ಜಿಎಸ್‌ಟಿ 31,813 ಕೋಟಿ ರೂ. ಮತ್ತು ಏಕೀಕೃತ ಜಿಎಸ್‌ಟಿ 80,464 ಕೋಟಿ ರೂ. ಇದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Stock Market: ಅಕ್ಟೋಬರ್ ತಿಂಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಲಾಭ
2021ರ ಸೆಪ್ಟೆಂಬರ್‌ನಲ್ಲಿ 1,17,010 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. 2022ರ ಸೆಪ್ಟೆಂಬರ್ ತಿಂಗಳಲ್ಲಿ 1,47,686 ಕೋಟಿ ಸಂಗ್ರಹವಾಗಿದ್ದು.ಶೇಕಡ 26ರಷ್ಟು ಏರಿಕೆಯಾಗಿದೆ.
? ₹1,47,686 crore gross GST revenue collected in September 2022
? Monthly GST revenues more than ₹1.4 lakh crore for seven months in a row
? Revenues for the month of Sept. 2022 26% higher than the GST revenues in the same month in 2021
➡️ https://t.co/CVL2CCYJtI
(1/2) pic.twitter.com/xEitIasRmC— Ministry of Finance (@FinMinIndia) October 1, 2022
ಎರಡನೇ ಸ್ಥಾನದಲ್ಲಿ ಕರ್ನಾಟಕ
21,403 ಕೋಟಿ ರೂ. ಜಿಎಸ್‌ಟಿ ಸಂಗ್ರಹದ ಮೂಲಕ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದ್ರೆ, ಕರ್ನಾಟಕ 9,760 ಕೋಟಿ ರೂ. ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿದೆ. 2021 ಸೆಪ್ಟೆಂಬರ್ ತಿಂಗಳಲ್ಲಿ 7,783 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಕರ್ನಾಟಕ ಶೇ. 25ರಷ್ಟು ಏರಿಕೆ ಸಾಧಿಸಿದೆ.
ಸೆಪ್ಟೆಂಬರ್ ಅಂಕಿ-ಅಂಶವು ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಮತ್ತು ಜಿಎಸ್‌ಟಿ ನೆಟ್‌ವರ್ಕ್222 ಸ್ಥಿರವಾಗಿದೆ ಎಂಬುದನ್ನು ಸೂಚಿಸುತ್ತದೆ. ಸದ್ಯ ಸರಣಿ ಹಬ್ಬಗಳು ಇರುವುದರಿಂದ ಜಿಎಸ್‌ಟಿ ಸಂಗ್ರಹದಲ್ಲಿ ಈ ತಿಂಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಅಲ್ಲದೇ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಕಾರಣದಿಂದ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.