ಜ. 21ರಂದು ಟಿವಿ9 ನೆಟ್ವರ್ಕ್​ನ ‘Auto9 Awards 2026’; ನಿತಿನ್ ಗಡ್ಕರಿ ಮುಖ್ಯ ಅತಿಥಿ

Nitin Gadkari to grace Auto9 Awards 2026: ದೆಹಲಿಯ ತಾಜ್ ಪ್ಯಾಲೇಸ್​ನಲ್ಲಿ ‘ಆಟೊ9 ಅವಾರ್ಡ್ಸ್ 2026’ ಕಾರ್ಯಕ್ರಮ ಜನವರಿ 21ರಂದು ನಡೆಯಲಿದೆ. ಟಿವಿ9 ನೆಟ್ವರ್ಕ್ ಸಂಸ್ಥೆ ಆಯೋಜಿಸಿರುವ ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಖ್ಯ ಅತಿಥಿಯಾಗಿರಲಿದ್ದಾರೆ. ನಾವೀನ್ಯತೆ, ಕ್ಷಮತೆ ಇತ್ಯಾದಿ ಹೊಂದಿರುವ ವಾಹನಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.

ಜ. 21ರಂದು ಟಿವಿ9 ನೆಟ್ವರ್ಕ್​ನ ‘Auto9 Awards 2026’; ನಿತಿನ್ ಗಡ್ಕರಿ ಮುಖ್ಯ ಅತಿಥಿ
ಟಿವಿ9 ನೆಟ್ವರ್ಕ್​ನ ‘Auto9 Awards 2026’

Updated on: Jan 19, 2026 | 2:10 PM

ನವದೆಹಲಿ, ಜನವರಿ 19: ಇಲ್ಲಿಯ ತಾಜ್ ಪ್ಯಾಲೇಸ್​ನಲ್ಲಿ ಟಿವಿ9 ನೆಟ್ವರ್ಕ್ ವತಿಯಿಂದ ಬುಧವಾರ (ಜ. 21) ‘Auto9 Awards 2026’ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ಭಾರತದ ವಾಹನೋದ್ಯಮದಲ್ಲಿನ (Automotive) ಪ್ರಗತಿ, ಶ್ರೇಷ್ಠತೆಯನ್ನು ಆಚರಿಸಲು ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮುಖ್ಯ ಅತಿಥಿಯಾಗಿದ್ದಾರೆ.

ಆಟೊ9 ಅಡಾರ್ಡ್ಸ್ ಬಗ್ಗೆ

ಟಿವಿ9 ನೆಟ್ವರ್ಕ್ ಕೈಗೊಂಡಿರುವ ಹಲವು ಉಪಕ್ರಮಗಳಲ್ಲಿ ಆಟೊ9 ಅವಾರ್ಡ್ಸ್ ಒಂದು. ಭಾರತದ ವಾಹನೋದ್ಯಮಕ್ಕೆ ಕೊಡುಗೆ ನೀಡಿರುವ ವಿಶೇಷ ಕಾರುಗಳು, ದ್ವಿಚಕ್ರ ವಾಹನಗಳು, ಸಂಘಟನೆಗಳು, ಇನ್ನೋವೇಟರ್​ಗಳು, ವ್ಯಕ್ತಿಗಳನ್ನು ಗೌರವಿಸುವ ಒಂದು ಪ್ರಶಸ್ತಿ ಸಮಾರಂಭವಾಗಿದೆ. ಈ ವರ್ಷ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ ಸಖತ್ ಫೀಚರ್ಸ್; ಟಿಕೆಟ್ ಕ್ಯಾನ್ಸಲೇಶನ್ ನಿಯಮಗಳೂ ಕಠಿಣ

  1. ಉತ್ಪನ್ನಗಳು (ಕಾರು ಮತ್ತು ಬೈಕು)
  2. ಮಾಧ್ಯಮ ಮತ್ತು ಸಂವಹನ
  3. ರಾಷ್ಟ್ರೀಯ ಪರಿಣಾಮ ಮತ್ತು ನಾಯಕತ್ವ
  4. ಬ್ಯುಸಿನೆಸ್, ಇಕೋಸಿಸ್ಟಂ ಮತ್ತು ವ್ಯಾಪಕತೆ
  5. ಇವಿ ಮತ್ತು ಇನ್ನೋವೇಶನ್

ಈ ಮೇಲಿನ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 2025ರ ಜನವರಿ 1ರಿಂದ ಡಿಸೆಂಬರ್ 31ರ ನಡುವೆ ಬಿಡುಗಡೆಯಾದ ಅಥವಾ ವಿತರಣೆ ಆರಂಭವಾದ ವಾಹನಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಪ್ರಶಸ್ತಿಗೆ ವಾಹನವೊಂದನ್ನು ಪರಿಗಣಿಸಲು ಅದರ ಜನಪ್ರಿಯತೆಯು ಮಾನದಂಡವಾಗಿರುವುದಿಲ್ಲ. ಅದು ನೈಜವಾಗಿ ಎಷ್ಟು ಕ್ಷಮತೆ ಹೊಂದಿದೆ, ಎಂತಹ ನಾವೀನ್ಯತೆ ಹೊಂದಿದೆ ಎಂಬುದು ಮುಖ್ಯವಾಗುತ್ತದೆ. ದೆಹಲಿಯ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್​ನಲ್ಲಿ ಈಗಾಗಲೇ ಸುಮಾರು 58 ಕಾರು ಮತ್ತು ದ್ವಿಚಕ್ರ ವಾಹನಗಳ ಸಮಗ್ರ ಪರೀಕ್ಷೆ ಮಾಡಲಾಗಿದೆ. ವಾಹನದ ಕ್ಷಮತೆ, ಸುರಕ್ಷತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಇತ್ಯಾದಿ ಮಾನದಂಡಗಳನ್ನು ಗಮನಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್

ವಾಹನೋದ್ಯಮದ ಅನುಭವಿಗಳು, ಪತ್ರಕರ್ತರು, ಎಂಜಿನಿಯರುಗಳು, ಸಂಸ್ಥಾಪಕರು, ಮೊಬಿಲಿಟಿ ತಜ್ಞರು ಇತ್ಯಾದಿ 30 ಜನರಿರುವ ತೀರ್ಪುಗಾರ ಮಂಡಳಿಯು ಈ 58 ವಾಹನಗಳ ಮೌಲ್ಯಪಾಪನ ಮಾಡುತ್ತಿದೆ.

ಟಿವಿ9 ನೆಟ್ವರ್ಕ್​ನ ‘Auto9 Awards 2026’

ಆಟೊ9 ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾತ್ರವಲ್ಲ, ಉದ್ಯಮದ ಹೊಸ ಟ್ರೆಂಡ್​ಗಳ ಬಗ್ಗೆ ಪ್ಯಾನಲ್ ಡಿಸ್ಕಶನ್​ಗಳು, ಸಂವಾದ ಇತ್ಯಾದಿ ಕಾರ್ಯಕ್ರಮಗಳೂ ನಡೆಯಲಿವೆ. ಜನವರಿ 21ರಂದು ನಿತಿನ್ ಗಡ್ಕರಿ ಅವರಿಂದ ಮುಖ್ಯ ಭಾಷಣ ಇರುತ್ತದೆ. ದೇಶದ ವಾಹನೋದ್ಯಮದ ಬೆಳವಣಿಗೆ, ಮೂಲಸೌಕರ್ಯ ಅಭಿವೃದ್ದಿ ಇತ್ಯಾದಿ ಬಗ್ಗೆ ಅವರು ಬೆಳಕು ಚೆಲ್ಲಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Mon, 19 January 26