AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್

Central govt employees get new salary account package: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಸಮಗ್ರ ಸ್ಯಾಲರಿ ಅಕೌಂಟ್ ಪ್ಯಾಕೇಜ್ ಸೌಲಭ್ಯ ಕೊಡಲಾಗುತ್ತದೆ. ಡಿಎಫ್​ಎಸ್ ಇಲಾಖೆ ಇಂಥದ್ದೊಂದು ಸೂಚನೆ ನೀಡಿದೆ. ಈ ವಿಶೇಷ ಸ್ಯಾಲರಿ ಅಕೌಂಟ್​ಗಳಲ್ಲಿ ಭರ್ಜರಿ ಇನ್ಷೂರೆನ್ಸ್, ಅಗ್ಗದ ಸಾಲ ಇತ್ಯಾದಿ ಅನೇಕ ಸೌಲಭ್ಯಗಳು ಲಭ್ಯ ಇರುತ್ತವೆ.

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್
ಸ್ಯಾಲರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 18, 2026 | 9:09 PM

Share

ನವದೆಹಲಿ, ಜನವರಿ 18: ಕೇಂದ್ರ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ ಇದು. ಒಂದೇ ಅಕೌಂಟ್​ನಲ್ಲಿ ಬ್ಯಾಂಕಿಂಗ್, ಇನ್ಷೂರೆನ್ಸ್ ಮತ್ತು ಕಾರ್ಡ್ ಸಂಬಂಧಿತ ಅನುಕೂಲಗಳು ಒಟ್ಟಿಗೆ ಲಭ್ಯ ಇರುವ ಸಮಗ್ರ ಸ್ಯಾಲರ್ ಅಕೌಂಟ್ ಪ್ಯಾಕೇಜ್ ಅನ್ನು ಸರಕಾರ ಬಿಡುಗಡೆ ಮಾಡಿದೆ. ನೌಕರರ ಹಣಕಾಸು ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸಲು ಸ್ಯಾಲರಿ ಅಕೌಂಟ್ ಪ್ಯಾಕೇಜ್ ಅನ್ನು ಜಾರಿಗೆ ತರುವಂತೆ ಸರ್ಕಾರ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ತಿಳಿಸಿದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳ ಸ್ಯಾಲರಿ ಅಕೌಂಟ್​ಗಳು ಎಸ್​ಬಿಐ, ಯುಬಿಐ, ಪಿಎನ್​ಬಿ ಇತ್ಯಾದಿ ಸರ್ಕಾರಿ ಬ್ಯಾಂಕುಗಳಲ್ಲೇ ಇರುತ್ತವೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಹಣಕಾಸು ಸೇವೆಗಳ ಇಲಾಖೆ (ಡಿಎಫ್​ಎಸ್) ಈ ಸರ್ಕಾರಿ ಬ್ಯಾಂಕುಗಳಿಗೆ ಸ್ಯಾಲರಿ ಅಕೌಂಟ್ ಪ್ಯಾಕೇಜ್ ಸೌಲಭ್ಯ ಒದಗಿಸುವಂತೆ ತಿಳಿಸಿದೆ. ಕೇಂದ್ರ ಸರ್ಕಾರಿ ಸಂಸ್ಥೆಗಳ ಎ, ಬಿ ಮತ್ತು ಸಿ ಕೇಡರ್​ಗಳ ಎಲ್ಲಾ ಉದ್ಯೋಗಿಗಳಿಗೂ ಈ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್​ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?

ಝೀರೋ ಬ್ಯಾಲನ್ಸ್ ಸ್ಯಾಲರಿ ಅಕೌಂಟ್

ಈ ಕಾಂಪೊಸಿಟ್ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ವಿವಿಧ ಸೌಲಭ್ಯಗಳು ಒಳಗೊಂಡಿವೆ. ಝೀರೋ ಬ್ಯಾಲನ್ಸ್ ಅಕೌಂಟ್, ಆರ್​ಟಿಜಿಎಸ್, ನೆಫ್ಟ್, ಯುಪಿಐ ಮೂಲಕ ಉಚಿತ ರೆಮಿಟೆನ್ಸ್ (ವಿದೇಶದಿಂದ ಭಾರತಕ್ಕೆ ಹಣ ರವಾನೆ) ಇತ್ಯಾದಿ ಇದರಲ್ಲಿ ಸೇರಿರುತ್ತವೆ. ಹೌಸಿಂಗ್ ಲೋನ್, ಎಜುಕೇಶನ್ ಲೋನ್, ವೆಹಿಕಲ್ ಲೋನ್ ಮತ್ತು ಪರ್ಸನಲ್ ಲೋನ್​ಗಳಲ್ಲಿ ರಿಯಾಯಿತಿ ದರದ ಬಡ್ಡಿ, ಹಾಗು, ಲೋನ್ ಪ್ರೋಸಸಿಂಗ್ ಶುಲ್ಕದಲ್ಲಿ ಇಳಿಕೆ, ಲಾಕರ್ ಬಾಡಿಗೆಯಲ್ಲಿ ವಿನಾಯಿತಿ, ಫ್ಯಾಮಿಲಿ ಬ್ಯಾಂಕಿಂಗ್ ಸೌಲಭ್ಯ ಇತ್ಯಾದಿಯು ಸರ್ಕಾರಿ ನೌಕರರಿಗೆ ಸಿಗುತ್ತದೆ.

ಎರಡು ಕೋಟಿ ರೂವರೆಗೆ ಉಚಿತ ಇನ್ಷೂರೆನ್ಸ್

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುವ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ 1.5 ಕೋಟಿ ರೂವರೆಗೆ ಇರುತ್ತದೆ. ಏರ್ ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ 2 ಕೋಟಿ ರೂವರೆಗೂ ಇರುತ್ತದೆ. ಅಷ್ಟೇ ಅಲ್ಲ, 20 ಲಕ್ಷ ರೂವರೆಗೆ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೊಟೆಕ್ಷನ್ ಕೂಡ ಇರುತ್ತದೆ. ಇದಕ್ಕಿಂತ ಹೆಚ್ಚಿನ ಕವರೇಜ್ ಬೇಕೆಂದರೆ ಕಡಿಮೆ ಪ್ರೀಮಿಯಮ್​ಗಳ ಅವಕಾಶವೂ ಇರುತ್ತದೆ. ಹೆಲ್ತ್ ಇನ್ಷೂರೆನ್ಸ್ ಕವರೇಜ್ ಕೂಡ ಇರುತ್ತದೆ.

ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ

ಕಾರ್ಡ್ ಬೆನಿಫಿಟ್ಸ್

ಡಿಜಿಟಲ್ ಹಾಗೂ ಕಾರ್ಡ್ ಸಂಬಂಧಿತ ಫೀಚರ್​ಗಳೂ ಈ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ಒಳಗೊಂಡಿವೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬೆನಿಫಿಟ್, ಏರ್​ಪೋರ್ಟ್ ಲಾಂಜ್, ರಿವಾರ್ಡ್, ಕ್ಯಾಷ್​ಬ್ಯಾಕ್, ಝೀರೋ ಮೈಂಟೆನೆನ್ಸ್ ಫೀ ಇತ್ಯಾದಿ ನಾನಾ ರಿಯಾಯಿತಿ, ಸೌಲಭ್ಯಗಳು ಸಿಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್
‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
‘37 ಕೋಟಿ ವೋಟ್ ಅವನಿಗೆ ಬಿದ್ದಿದೆ’; ಹನುಮಂತನ ಪ್ರಕಾರವೂ ಗಿಲ್ಲಿನೇ ವಿನ್ನರ್
‘37 ಕೋಟಿ ವೋಟ್ ಅವನಿಗೆ ಬಿದ್ದಿದೆ’; ಹನುಮಂತನ ಪ್ರಕಾರವೂ ಗಿಲ್ಲಿನೇ ವಿನ್ನರ್
ಕಾರುಗಳಿಗೆ ಡಿಕ್ಕಿ ಹೊಡೆದು, ಟೋಲ್ ಸಿಬ್ಬಂದಿಯ ಎಳೆದೊಯ್ದ ಟ್ರಕ್
ಕಾರುಗಳಿಗೆ ಡಿಕ್ಕಿ ಹೊಡೆದು, ಟೋಲ್ ಸಿಬ್ಬಂದಿಯ ಎಳೆದೊಯ್ದ ಟ್ರಕ್
ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಸಿಎಂ ಕಾರು: ಅಧಿಕಾರಿಗಳು ಹರಸಾಹಸ
ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಸಿಎಂ ಕಾರು: ಅಧಿಕಾರಿಗಳು ಹರಸಾಹಸ