AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್​ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?

US tariffs on EU countries: ಗ್ರೀನ್​ಲ್ಯಾಂಡ್ ಖರೀದಿಗೆ ಅಡ್ಡಗಾಲಾಗಿರುವ ಯೂರೋಪಿಯನ್ ದೇಶಗಳ ಮೇಲೆ ಫೆಬ್ರುವರಿ 1ರಿಂದ ಅಮೆರಿಕ ಶೇ. 10 ಟ್ಯಾರಿಫ್ ಹಾಕುತ್ತಿದೆ. ಅಮೆರಿಕದ ಈ ಬೆದರಿಕೆಯ ಬ್ಲ್ಯಾಕ್​ಮೇಲ್​ಗೆ ತಾವು ಬಗ್ಗುವುದಿಲ್ಲ ಎಂದು ಯೂರೋಪಿಯನ್ ಒಕ್ಕೂಟ ಸ್ಪಷ್ಟಪಡಿಸಿದೆ. ಇದೇ ವೇಳೆ, ಅಮೆರಿಕದೊಂದಿಗೆ ಟ್ರೇಡ್ ಡೀಲ್ ಕುದುರಿಸುವ ಸಲುವಾಗಿ ಭಾರತ ತನ್ನ ಸ್ವಾಯತ್ತತೆಯನ್ನು ಬಲಿಕೊಡಬಾರದು ಎನ್ನುವ ಸಲಹೆಗಳು ಕೇಳಿಬರುತ್ತಿವೆ.

ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್​ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?
ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 18, 2026 | 7:03 PM

Share

ನವದೆಹಲಿ, ಜನವರಿ 18: ಗ್ರೀನ್​ಲ್ಯಾಂಡ್ ಅನ್ನು ಕೊಡಲು ಒಪ್ಪದ ಡೆನ್ಮಾರ್ಕ್ ದೇಶದ ಪರವಾಗಿ ನಿಂತಿರುವ ಕೆಲ ಐರೋಪ್ಯ ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ (Donald Trump) ಶೇ. 10ರಷ್ಟು ಟ್ಯಾರಿಫ್ ಪ್ರಕಟಿಸಿದ್ದಾರೆ. ಫೆಬ್ರುವರಿ 1ರಿಂದ ಈ ಟ್ಯಾರಿಫ್ ಜಾರಿಗೆ ಬರುತ್ತದೆ. ಜೂನ್ 1ರಿಂದ ಈ ಟ್ಯಾರಿಫ್ ಶೇ. 25ಕ್ಕೆ ಏರಲಿದೆ. ಗ್ರೀನ್​ಲ್ಯಾಂಡ್ ದಕ್ಕುವವರೆಗೂ ಯೂರೋಪಿಯನ್ ದೇಶಗಳ ಮೇಲಿನ ಈ ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ ಎಂದು ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.

ಅಮೆರಿಕದ ನಿಲುವನ್ನು ಖಂಡಿಸಿದ ಯೂರೋಪ್

ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಯುಕೆ (ಬ್ರಿಟನ್), ದಿ ನೆದರ್​ಲ್ಯಾಂಡ್ಸ್ ಮತ್ತು ಫಿನ್​ಲ್ಯಾಂಡ್ ದೇಶಗಳು ಗ್ರೀನ್​ಲ್ಯಾಂಡ್ ವಿಚಾರವಾಗಿ ಅಮೆರಿಕದ ನಿಲುವಿಗೆ ವಿರುದ್ಧವಾಗಿ ನಿಂತಿವೆ. ಈ ಎಂಟು ಯೂರೋಪಿಯನ್ ದೇಶಗಳಿಗೆ ಸದ್ಯ ಟ್ರಂಪ್ ಟ್ಯಾರಿಫ್ ಪ್ರಕಟಿಸಿದ್ದಾರೆ. ಮುಂದೆ ಇದು ಎಲ್ಲಾ ಐರೋಪ್ಯ ದೇಶಗಳಿಗೆ ಜಾರಿಯಾಗಬಹುದು. ಅಮೆರಿಕದ ಈ ಟ್ಯಾರಿಫ್ ಬೆದರಿಕೆ ಕ್ರಮವನ್ನು ಐರೋಪ್ಯ ಒಕ್ಕೂಟದ ಮುಖಂಡರು ಖಂಡಿಸಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ

ಯೂರೋಪಿಯನ್ ಯೂನಿಯನ್​ನಲ್ಲಿ 27 ಸದಸ್ಯ ದೇಶಗಳಿವೆ. ಇಂದು ಭಾನುವಾರ ತುರ್ತು ಸಭೆ ಕರೆದು ಚರ್ಚಿಸಲಾಯಿತು. ಐರೋಪ್ಯ ದೇಶಗಳ ಮೇಲೆ ಟ್ಯಾರಿಫ್ ಹಾಕುವ ಅಮೆರಿಕದ ನಿರ್ಧಾರ ತಪ್ಪು. ಟ್ಯಾರಿಫ್ ಬೆದರಿಕೆ ಮೂಲಕ ತಮ್ಮನ್ನು ಬ್ಲ್ಯಾಕ್​ಮೇಲ್ ಮಾಡಲು ಯತ್ನಿಸಿದರೆ ಬಗ್ಗುವುದಿಲ್ಲ ಎಂದು ಇಯು ಹಾಗೂ ಯುಕೆ ಸ್ಪಷ್ಟಪಡಿಸಿವೆ. ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಸದಸ್ಯ ದೇಶವಲ್ಲ. ಆದರೂ ಗ್ರೀನ್​ಲ್ಯಾಂಡ್ ವಿಚಾರವಾಗಿ ಐರೋಪ್ಯ ದೇಶಗಳ ನಿಲುವಿಗೆ ಬ್ರಿಟನ್ ಬೆಂಬಲವಾಗಿ ನಿಂತಿದೆ.

ಯೂರೋಪ್ ಮೇಲೆ ಅಮೆರಿಕ ಟ್ಯಾರಿಫ್; ಭಾರತಕ್ಕಿದೆ ದೊಡ್ಡ ಪಾಠ

ಡೊನಾಲ್ಡ್ ಟ್ರಂಪ್ ನಾಯಕತ್ವದಲ್ಲಿ ಅಮೆರಿಕ ಸರ್ಕಾರದ ವರ್ತನೆ ಬಹಳ ಅನಿಶ್ಚಿತ ಮತ್ತು ಆಕ್ರಮಣಕಾರಿಯಾಗಿದೆ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಕುದುರಿಸಿದಾಕ್ಷಣ ಎಲ್ಲವೂ ಸರಿಯಾಗಿ ಬಿಡುತ್ತೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಯೂರೋಪ್, ಕೆನಡಾ, ಆಸ್ಟ್ರೇಲಿಯಾ ಇತ್ಯಾದಿ ಮಿತ್ರ ದೇಶಗಳೊಂದಿಗೆ ಟ್ರಂಪ್ ನಡೆದುಕೊಂಡ ರೀತಿಯು ಅಮೆರಿಕದ ಹೊಸ ನೀತಿಗೆ ಕನ್ನಡಿ ಹಿಡಿದಂತಿದೆ.

ಇದನ್ನೂ ಓದಿ: ಡಾವೊಸ್ ಶೃಂಗಸಭೆ 2026: ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ

ಅಮೆರಿಕದ ಟ್ರೇಡ್ ಡೀಲ್​ಗೋಸ್ಕರ ಭಾರತ ತನ್ನ ಹಿತಾಸಕ್ತಿಗಳನ್ನು ಬಲಿಕೊಡಬಾರದು. ಅಮೆರಿಕದ ಒತ್ತಡಕ್ಕೆ ಒಳಗಾಗಿ ಇರಾನ್​ನ ಛಾಬಹಾರ್ ಪೋರ್ಟ್ ಪ್ರಾಜೆಕ್ಟ್​ನಿಂದ ಹಿಂದಕ್ಕೆ ಸರಿಯಿತು. ತನ್ನ ಇಂಧನ ಆಮದಿನಲ್ಲಿ ವ್ಯತ್ಯಯ ಮಾಡಿಕೊಂಡಿತು. ಬ್ರಿಕ್ಸ್ ಗುಂಪಿನೊಂದಿಗೆ ತನ್ನ ಪಾಲ್ಗೊಳ್ಳುವಿಕೆಯನ್ನು ಮಿತಿಗೊಳಿಸಿತು. ಇಷ್ಟು ರಾಜಿ ಮಾಡಿಕೊಂಡರೂ ಅಮೆರಿಕವು ಭಾರತಕ್ಕೆ ಧಮಕಿ ಹಾಕುವುದು ಮುಂದುವರಿದೇ ಇದೆ. ಹೀಗಾಗಿ, ಭಾರತವು ಸ್ವಾಯತ್ತ ಕಾರ್ಯತಂತ್ರ ನಿಲುವು ಹೊಂದಿರಬೇಕು ಎಂಬುದು ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
‘37 ಕೋಟಿ ವೋಟ್ ಅವನಿಗೆ ಬಿದ್ದಿದೆ’; ಹನುಮಂತನ ಪ್ರಕಾರವೂ ಗಿಲ್ಲಿನೇ ವಿನ್ನರ್
‘37 ಕೋಟಿ ವೋಟ್ ಅವನಿಗೆ ಬಿದ್ದಿದೆ’; ಹನುಮಂತನ ಪ್ರಕಾರವೂ ಗಿಲ್ಲಿನೇ ವಿನ್ನರ್
ಕಾರುಗಳಿಗೆ ಡಿಕ್ಕಿ ಹೊಡೆದು, ಟೋಲ್ ಸಿಬ್ಬಂದಿಯ ಎಳೆದೊಯ್ದ ಟ್ರಕ್
ಕಾರುಗಳಿಗೆ ಡಿಕ್ಕಿ ಹೊಡೆದು, ಟೋಲ್ ಸಿಬ್ಬಂದಿಯ ಎಳೆದೊಯ್ದ ಟ್ರಕ್
ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಸಿಎಂ ಕಾರು: ಅಧಿಕಾರಿಗಳು ಹರಸಾಹಸ
ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಸಿಎಂ ಕಾರು: ಅಧಿಕಾರಿಗಳು ಹರಸಾಹಸ
ಕಾರಿನಲ್ಲಿ ಕುಳಿತು ರಾಜಾರೋಷವಾಗಿ ಗನ್ ತೋರಿಸಿದ ವ್ಯಕ್ತಿ!
ಕಾರಿನಲ್ಲಿ ಕುಳಿತು ರಾಜಾರೋಷವಾಗಿ ಗನ್ ತೋರಿಸಿದ ವ್ಯಕ್ತಿ!
ಓವರ್ ಟೇಕ್ ಮಾಡೋಕೆ ಹೋಗಿ ಆಗಿದ್ದೇನು ನೋಡಿ; ಭೀಕರ ಅಪಘಾತದ ಸಿಸಿಟಿವಿ ದೃಶ್ಯ
ಓವರ್ ಟೇಕ್ ಮಾಡೋಕೆ ಹೋಗಿ ಆಗಿದ್ದೇನು ನೋಡಿ; ಭೀಕರ ಅಪಘಾತದ ಸಿಸಿಟಿವಿ ದೃಶ್ಯ