ನವದೆಹಲಿ, ಜನವರಿ 22: ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ (Ram temple consecration ceremony) ಬಹಳ ಯಶಸ್ವಿಯಾಗಿ ನಡೆದಿದೆ. ಸರ್ಕಾರದ ಹಣಕಾಸು ನೆರವಿಲ್ಲದೇ ಭವ್ಯವಾದ ಮಂದಿರ ಕಟ್ಟಲಾಗುತ್ತಿದೆ. ಸಾರ್ವಜನಿಕರ ದೇಣಿಗೆಗಳಿಂದಲೇ ದೇವಸ್ಥಾನದ ನಿರ್ಮಾಣ ಆಗುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ನೀವು ನೀಡುವ ದೇಣಿಗೆಯ ಹಣಕ್ಕೆ ತೆರಿಗೆ ರಿಯಾಯಿತಿಗಳು ಲಭ್ಯ ಇದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು 2020-21ರಲ್ಲಿ ಐತಿಹಾಸಕ ಮಹತ್ವದ ಸ್ಥಳ ಮತ್ತು ಸಾರ್ವಜನಿಕ ಪೂಜಾ ಸ್ಥಳವೆಂದು ಪರಿಗಣಿಸಿ ಕೇಂದ್ರ ಸರ್ಕಾರ ನೋಟಿಫೈ ಮಾಡಿತ್ತು. ಆದಾಯ ತೆರಿಗೆ ಸೆಕ್ಷನ್ 80(ಜಿ) ಅಡಿಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಜೀರ್ಣೋದ್ಧಾರ ಉದ್ದೇಶಕ್ಕೆ ನೀಡಲಾಗುವ ದೇಣಿಗೆಯ ಹಣಕ್ಕೆ ತೆರಿಗೆ ರಿಯಾಯಿತಿ ಅವಕಾಶವನ್ನು ಕಲ್ಪಿಸಲಾಗಿದೆ.
ದೇಣಿಗೆಯ ಅರ್ಧದಷ್ಟು ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಅಂದರೆ, ನೀವು 50,000 ರೂ ದೇಣಿಗೆ ನೀಡಿದ್ದರೆ, 25,000 ರೂ ಮೊತ್ತಕ್ಕೆ ತೆರಿಗೆ ಅನ್ವಯ ಆಗುವುದಿಲ್ಲ.
ಈ ಸೆಕ್ಷನ್ ಅಡಿಯಲ್ಲಿ, ಪರಿಹಾರ ನಿಧಿಗಳಿಗೆ ಮತ್ತು ದತ್ತಿ ಸಂಸ್ಥೆಗಳಿಗೆ ನೀಡಲಾಗುವ ದೇಣಿಗೆಯ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬಹುದು. ಈಗ ರಾಮಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಮಂದಿರ ಜೀರ್ಣೋದ್ಧಾರ ಕಾರ್ಯವನ್ನೂ ಈ ಸೆಕ್ಷನ್ ವ್ಯಾಪ್ತಿಗೆ ತರಲಾಗಿದೆ.
ಇದನ್ನೂ ಓದಿ: Punit Goenka: ಸೋನಿ-ಝೀ ಒಪ್ಪಂದ ರದ್ದು: ಇದು ದೇವರೇ ಕಳುಹಿಸಿದ ಸಂದೇಶ: ಅಯೋಧ್ಯೆಯಿಂದ ಪುನೀತ್ ಗೋಯಂಕಾ ಟ್ವೀಟ್
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಡೊನೇಶನ್ ಮೊತ್ತದ ಅರ್ಧದಷ್ಟು ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಅಂದರೆ, ಐಟಿ ರಿಟರ್ನ್ ಫೈಲ್ ಮಾಡುವಾಗ ಈ ದೇಣಿಗೆಯ ಹಣವನ್ನು ನಮೂದಿಸಿ ಅದಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ