ನವದೆಹಲಿ, ಸೆಪ್ಟೆಂಬರ್ 12: ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳಿಗೂ ವಿಸ್ತರಿಸಲು ಕೇಂದ್ರ ಸಂಪುಟ ನಿನ್ನೆ ಅನುಮೋದನೆ ಕೊಟ್ಟಿದೆ. ಇದು ಅಂದಾಜು ಆರು ಕೋಟಿ ಸಂಖ್ಯೆಯಲ್ಲಿರುವ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಇವರೆಲ್ಲರಿಗೂ ಉಚಿತವಾಗಿ ವರ್ಷಕ್ಕೆ ಐದು ಲಕ್ಷ ರೂ ಆರೋಗ್ಯ ವಿಮಾ ಕವರೇಜ್ ಸಿಗುತ್ತದೆ.
ಬಡವರು, ಹಿಂದುಳಿದವರು, ನಿರ್ಗತಿಕರು, ಅನಾಥರು, ದುರ್ಬಲ ವರ್ಗದವರಿಗೆಂದು ಸರ್ಕಾರ 2018ರಲ್ಲಿ ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯನ್ನು ಆರಂಭಿಸಿತು. ಈ ಸ್ಕೀಮ್ ಪಡೆಯುವ ವ್ಯಕ್ತಿಗಳು ಈ ಕೆಳಗಿನ ಯಾವುದಾದರೂ ಒಂದು ಮಾನದಂಡವಾದರೂ ಹೊಂದಿರಬೇಕು.
ಈ ಮೇಲಿನ ಅಂಶಗಳಲ್ಲಿ ಕನಿಷ್ಠ ಒಂದಾದರೂ ಮಾನದಂಡ ಪೂರೈಸುವಂತಿರುವ ಕುಟುಂಬಗಳು ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆ ಪಡೆಯಲು ಅರ್ಹರಾಗಿರುತ್ತವೆ. ಇಡೀ ಕುಟುಂಬಕ್ಕೆ ಒಂದು ವರ್ಷಕ್ಕೆ 5 ಲಕ್ಷ ರೂ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ಅದೂ ಉಚಿತವಾಗಿ.
ಇದನ್ನೂ ಓದಿ: ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ
ಹಿರಿಯ ನಾಗರಿಕರಿಗೆ ಇರುವ ಒಂದೇ ಮಾನದಂಡ ಎಂದರೆ ಅವರು 70 ವರ್ಷ ವಯಸ್ಸು ದಾಟಿರಬೇಕು. ಯಾವುದೇ ಆರ್ಥಿಕ, ಸಾಮಾಜಿಕ ಸ್ತರದವರಾದರೂ ಪ್ರತಿಯೊಬ್ಬ ಹಿರಿಯ ನಾಗರಿಕರೂ ಪಿಎಂ ಜೆಎವೈ ಯೋಜನೆಗೆ ಅರ್ಹತೆ ಹೊಂದಿರುತ್ತಾರೆ.
ಈಗಾಗಲೇ ಪಿಎಂ ಜನ್ ಆರೋಗ್ಯ ಯೋಜನೆಯ ಫಲ ಪಡೆಯುತ್ತಿರುವ ಕುಟುಂಬದ ಭಾಗವಾಗಿರುವ ಹಿರಿಯ ನಾಗರಿಕರು ಪ್ರತ್ಯೇಕವಾಗಿ ಯೋಜನೆ ಪಡೆಯಬಹುದು. ಅವರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ ಕವರೇಜ್ ಸಿಗುತ್ತದೆ.
ಖಾಸಗಿ ಹೆಲ್ತ್ ಇನ್ಷೂರೆನ್ಸ್ ಹೊಂದಿರುವವರು, ಇಎಸ್ಐ ಹೊಂದಿರುವವರು ಕೂಡ ಆಯುಷ್ಮಾನ್ ಭಾರತ್ ವಿಮಾ ಯೋಜನೆ ಪಡೆಯಲು ಅವಕಾಶ ಇರುತ್ತದೆ. ಆದರೆ, ಸೆಂಟ್ರಲ್ ಗವರ್ನ್ಮೆಂಟ್ ಹೆಲ್ತ್ ಸ್ಕೀಮ್ (ಸಿಜಿಎಚ್ಎಸ್), ಎಕ್ಸ್ ಸರ್ವಿಸ್ಮೆನ್ ಕಾಂಟ್ರಿಬ್ಯೂಟರಿ ಹೆಲ್ತ್ ಸ್ಕೀಮ್ (ಇಸಿಎಚ್ಎಸ್), ಆಯುಷ್ಮಾನ್ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (ಸಿಎಪಿಎಫ್) ಮೊದಲಾದ ಸರ್ಕಾರ ಹೆಲ್ತ್ ಇನ್ಷೂರೆನ್ಸ್ ಹೊಂದಿರುವವರು ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Ayushman Bharat: ಮೋದಿ ಸರ್ಕಾರದ ಮಹತ್ವದ ನಿರ್ಧಾರ; 70 ವರ್ಷ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ
ನಿಮ್ಮ ಅರ್ಜಿಗೆ ಅನುಮೋದನೆ ಸಿಗಲು 10 ದಿನಗಳಾಗಬಹುದು. ಅಪ್ಲೋಡ್ ಮಾಡಬೇಕಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ. ಹಾಗೆಯೇ, ವೋಟರ್ ಐಡಿ, ಪಾಸ್ಪೋರ್ಟ್ ಅಥವಾ ಡಿಎಲ್ನಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಐಡಿ ಪ್ರೂಫ್ ಆಗಿ ನೀಡಬೇಕಾಗುತ್ತದೆ. ಅಡ್ರೆಸ್ ಪ್ರೂಫ್ಗೆ ಒಂದು ದಾಖಲೆ, ಇನ್ಕಮ್ ಸರ್ಟಿಫಿಕೇಟ್, ಜಾತಿ ಪ್ರಮಾಣಪತ್ರ ನೀಡಬೇಕಾಗುತ್ತದೆ. ಹಿರಿಯ ನಾಗರಿಕರಾಗಿದ್ದರೆ ಆಧಾರ್ ದಾಖಲೆಯಾದರೆ ಸಾಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ