ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ
Free Aadhaar update online till Sep 14: ಆಧಾರ್ ಕಾರ್ಡ್ನಲ್ಲಿ ನಿಮ್ಮ ಗುರುತು ಮತ್ತು ವಿಳಾಸ ಸಂಬಂಧಿತ ದಾಖಲೆಗಳನ್ನು ಅಪ್ಡೇಟ್ ಮಾಡಬಹುದು. ಹೆಸರು, ಲಿಂಗ, ಜನ್ಮದಿನಾಂಕ ಇತ್ಯಾದಿ ಬದಲಾವಣೆ ಕೂಡ ಮಾಡಬಹುದು. ಆದರೆ, ಆನ್ಲೈನ್ನಲ್ಲಿ ಸೆ. 14ರವರೆಗೆ ಉಚಿತವಾಗಿ ಡಾಕ್ಯುಮೆಂಟ್ ಅಪ್ಡೇಟ್ ಮಾಡಬಹುದು. ಹೇಗೆ ಮಾಡಬಹುದು ಎನ್ನುವ ಹಂತ ಹಂತದ ಕ್ರಮಗಳ ವಿವರ ಇಲ್ಲಿದೆ...
ಹತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್ ಪಡೆದಿದ್ದರೆ ಅದನ್ನು ಅಪ್ಡೇಟ್ ಮಾಡುವುದು ಅವಶ್ಯಕ. ಮನೆ ಬದಲಾವಣೆ, ಹೆಸರು ಬದಲಾವಣೆ ಯಾವುದೇ ಇದ್ದರೂ ಯಾವಾಗ ಬೇಕಾದರೂ ಅಪ್ಡೇಟ್ ಮಾಡಬಹುದು. ಆಧಾರ್ ಸೆಂಟರ್ಗೆ ಹೋಗಿ ನಿಗದಿತ ಶುಲ್ಕ ನೀಡಿ ಅಪ್ಡೇಟ್ ಮಾಡಲು ಸಾಧ್ಯ. ಆನ್ಲೈನ್ನಲ್ಲಿ ಉಚಿತವಾಗಿ ಮಾಡುವ ಅವಕಾಶ ಇದೆ. ಈ ಉಚಿತ ಫೀಚರ್ ಸೆಪ್ಟೆಂಬರ್ 14ರವರೆಗೂ ಲಭ್ಯ ಇರುತ್ತದೆ. ಅದಾದ ಬಳಿಕ ಆನ್ಲೈನ್ನಲ್ಲೂ ಕೂಡ ಆಧಾರ್ ಅಪ್ಡೇಟ್ ಮಾಡಬೇಕಾದರೆ 50 ರೂ ಶುಲ್ಕ ನೀಡಬೇಕಾಗುತ್ತದೆ.
ಆನ್ಲೈನ್ನಲ್ಲಿ ನಿಮ್ಮ ಐಡೆಂಟಿಟಿ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಮಾತ್ರ ಅಪ್ಡೇಟ್ ಮಾಡಬಹುದು. ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ ಇತ್ಯಾದಿ ಡೆಮಗ್ರಾಫಿಕ್ ಮಾಹಿತಿಯನ್ನು ಬದಲಿಸುವುದಿದ್ದರೆ ಆಧಾರ್ ಸೆಂಟರ್ಗೆ ಹೋಗಿಯೇ ಮಾಡಿಸಬೇಕು.
ಆಧಾರ್ ಅನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವ ಕ್ರಮ
- ಮೊದಲಿಗೆ ಮೈ ಆಧಾರ್ ವೆಬ್ಸೈಟ್ಗೆ ಹೋಗಿರಿ. ಅದರ ವಿಳಾಸ ಇಂತಿದೆ: myaadhaar.uidai.gov.in
- ಈ ಪೋರ್ಟಲ್ನಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿ.
- ಲಾಗಿನ್ ಆದ ಬಳಿಕ ನಿಮ್ಮ ಪ್ರೊಫೈಲ್ನಲ್ಲಿ ಇರುವ ವಿವರವನ್ನು ಗಮನಿಸಿ.
- ನಿಮ್ಮ ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ವಿವರವನ್ನು ನೀವು ವೆರಿಫೈ ಮಾಡಬೇಕು. ಆ ವಿವರ ಸರಿ ಇದ್ದರೆ ‘ಐ ವೆರಿಫೈ ದಟ್ ದಿ ಅಬೋವ್ ಡೀಟೇಲ್ಸ್ ಆರ್ ಕರೆಕ್ಟ್’ ಎಂಬ ಆಯ್ಕೆಯನ್ನು ಆರಿಸಬೇಕು.
- ಡ್ರಾಪ್ಡೌನ್ ಮೆನುನಲ್ಲಿ ಇರುವ ದಾಖಲೆಗಳ ಪಟ್ಟಿಯಲ್ಲಿ ನೀವು ಅಪ್ಡೇಟ್ ಮಾಡಬೇಕೆಂದಿರುವ ದಾಖಲೆ ಆಯ್ದುಕೊಂಡು ಸಂಬಂಧಿತ ದಾಖಲೆಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ಎರಡಕ್ಕೂ ನೀವು ಒಂದೊಂದು ದಾಖಲೆಯ ಫೋಟೋ ತೆಗೆದು ಹಾಕಬೇಕು.
ಇದನ್ನೂ ಓದಿ: ಜಿಎಸ್ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ
- ಐಡಿ ಪ್ರೂಫ್ಗೆ ಬೇಕಾಗುವ ದಾಖಲೆಗಳ ಪಟ್ಟಿ
- ಇಎಸ್ಐ, ಮೆಡಿಕ್ಲೈಮ್ ಇತ್ಯಾದಿ ಸರ್ಕಾರದಿಂದ ನೀಡುವ ಹೆಲ್ತ್ ಇನ್ಷೂರೆನ್ಸ್ ಕಾರ್ಡ್
- ವಿಶೇಷ ಚೇತನರಿಗೆ ಸರ್ಕಾರದಿಂದ ನೀಡುವ ಸರ್ಟಿಫಿಕೇಟ್
- ಡ್ರೈವಿಂಗ್ ಲೈಸೆನ್ಸ್
- ಪಾಸ್ಪೋರ್ಟ್
- ಕಿಸಾನ್ ಫೋಟೋ ಪಾಸ್ಪುಕ್
- ನರೇಗಾ ಕಾರ್ಡ್
- ಮಾರ್ಕ್ಸ್ ಕಾರ್ಡ್
- ವಿವಾಹ ನೊಂದಣಿ ಪ್ರಮಾಣಪತ್ರ
- ಪ್ಯಾನ್ ಕಾರ್ಡ್
- ಸರ್ಕಾರಿ ಬ್ಯಾಂಕೊಂದರ ಪಾಸ್ಬುಕ್
- ಪಡಿತರ ಚೀಟಿ
- ಎಸ್ಸಿ ಎಸ್ಟಿ ಒಬಿಸಿ ಪ್ರಮಾಣಪತ್ರ
- ವೋಟರ್ ಐಡಿ
ವಿಳಾಸ ಸಾಕ್ಷ್ಯಕ್ಕೆ ಬೇಕಾಗುವ ಅಡ್ರೆಸ್ ಪ್ರೂಫ್ ದಾಖಲೆಗಳು
- ವಿದ್ಯುತ್ ಬಿಲ್
- ಗ್ಯಾಸ್ ಬಿಲ್
- ನೀರಿನ ಬಿಲ್
- ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
- ಪಾಸ್ಪೋರ್ಟ್
- ಇನ್ಷೂರೆನ್ಸ್ ಪಾಲಿಸಿ
- ಪ್ರಾಪರ್ಟಿ ಟ್ಯಾಕ್ಸ್ ರಸೀದಿ
- ಸರ್ಕಾರಿ ಬ್ಯಾಂಕ್ನ ಪಾಸ್ಬುಕ್
- ಮ್ಯಾರೇಜ್ ಸರ್ಟಿಫಿಕೇಟ್
- ತಹಶೀಲ್ದಾರರಿಂದ ಪ್ರಮಾಣಪತ್ರ
- ಮನ್ರೇಗಾ ಕಾರ್ಡ್
- ವೋಟರ್ ಐಡಿ
ನೀವು ಯಾವುದಾದರೂ ಒಂದು ದಾಖಲೆಯ ಫೋಟೋ ತೆಗೆದಿಟ್ಟುಕೊಳ್ಳಬೇಕು. ಸ್ಕ್ಯಾನ್ ಮಾಡಿ ಪಿಡಿಎಫ್ ರೂಪದಲ್ಲಾದರೂ ದಾಖಲೆ ಇರಬೇಕು. ಇದು ಎರಡು ಎಂಬಿ ಗಾತ್ರಕ್ಕಿಂತ ಕಡಿಮೆ ಇರಬೇಕು. ಸೆಪ್ಟೆಂಬರ್ 14ರ ಬಳಿಕವೂ ನೀವು ಆಧಾರ್ನಲ್ಲಿ ನಿಮ್ಮ ಡಾಕ್ಯುಮೆಂಟ್ ಅಪ್ಡೇಟ್ ಮಾಡಬಹುದಾದರೂ ಅದಕ್ಕೆ ಶುಲ್ಕ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ