ಬ್ಯಾಂಕ್ ರಜಾದಿನ
ನವದೆಹಲಿ, ಆಗಸ್ಟ್ 28: ಆರ್ಬಿಐ (RBI holiday calendar) ಕ್ಯಾಲಂಡರ್ ಪ್ರಕಾರ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಈದ್ ಮಿಲಾದ್, ಓಣಂ ಹಬ್ಬ ಸೇರಿ ಒಟ್ಟು 15 ದಿನಗಳು ದೇಶದ ವಿವಿಧೆಡೆ ಬ್ಯಾಂಕುಗಳಿಗೆ ರಜೆ ಇದೆ. ನಿಯಮಿತವಾಗಿ ನೀಡಲಾಗುವ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಇದರಲ್ಲಿ ಸೇರಿವೆ. ಕೆಲ ರಜೆಗಳು ಕೆಲ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಸೀಮಿತವಾಗಿವೆ. ದುರ್ಗಾ ಪೂಜೆ, ಮಹಾ ಅಷ್ಟಮಿ, ದುರ್ಗಾಷ್ಟಮಿ ಇತ್ಯಾದಿ ಹಬ್ಬಗಳಿಗೆ ಕೆಲ ರಾಜ್ಯಗಳಲ್ಲಿ ರಜೆ ಇದೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರದ ರಜೆ ಬಿಟ್ಟರೆ ಸೆ. 5ಕ್ಕೆ ಈದ್ ಮಿಲಾದ್ ಪ್ರಯುಕ್ತ ರಜೆ ಇರುತ್ತದೆ.
2025ರ ಸೆಪ್ಟೆಂಬರ್ನಲ್ಲಿ ಬ್ಯಾಂಕ್ ರಜಾದಿನಗಳು
- ಸೆ. 3, ಬುಧವಾರ: ಕರ್ಮಪೂಜೆ (ಜಾರ್ಖಂಡ್ನಲ್ಲಿ ರಜೆ)
- ಸೆ. 4, ಗುರುವಾರ: ಓಣಂ ಹಬ್ಬ (ಕೇರಳದಲ್ಲಿ ರಜೆ)
- ಸೆ. 5, ಶುಕ್ರವಾರ: ಈದ್ ಮಿಲಾದ್, ತಿರು ಓಣಂ (ಕರ್ನಾಟಕ, ತಮಿಳುನಾಡು ಸೇರಿ ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ಸೆ. 6, ಶನಿವಾರ: ಈದ್ ಮಿಲಾದ್, ಇಂದ್ರಜಾತ್ರ (ಸಿಕ್ಕಿಂ, ಛತ್ತೀಸ್ಗಡ)
- ಸೆ. 7: ಭಾನುವಾರದ ರಜೆ
- ಸೆ. 12, ಶುಕ್ರವಾರ: ಈದ್ ಮಿಲಾದುಲ್ ನಬಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
- ಸೆ. 13: ಎರಡನೇ ಶನಿವಾರದ ರಜೆ
- ಸೆ. 14: ಭಾನುವಾರದ ರಜೆ
- ಸೆ. 21: ಭಾನುವಾರದ ರಜೆ
- ಸೆ. 22, ಸೋಮವಾರ: ನವರಾತ್ರ ಸ್ಥಾಪನಾ (ರಾಜಸ್ಥಾನದಲ್ಲಿ ರಜೆ)
- ಸೆ. 23, ಮಂಗಳವಾರ: ಮಹಾರಾಜ ಹರಿಸಿಂಗ್ಜಿ ಜಯಂತಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
- ಸೆ. 27: ನಾಲ್ಕನೇ ಶನಿವಾರದ ರಜೆ
- ಸೆ. 28: ಭಾನುವಾರದ ರಜೆ
- ಸೆ. 29, ಸೋಮವಾರ: ದುರ್ಗಾ ಪೂಜೆ, ಮಹಾಸಪ್ತಮಿ (ತ್ರಿಪುರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ರಜೆ)
- ಸೆ. 30, ಮಂಗಳವಾರ: ಮಹಾ ಅಷ್ಟಮಿ, ದುರ್ಗಾಷ್ಟಮಿ, ದುರ್ಗಾ ಪೂಜೆ (ತ್ರಿಪುರಾ, ಒಡಿಶಾ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
ಇದನ್ನೂ ಓದಿ: ಇಪಿಎಫ್ಒ 3.0, ಬರಲಿದೆ ಎಟಿಎಂ ವಿತ್ಡ್ರಾಯಲ್, ಯುಪಿಐ ವಿತ್ಡ್ರಾಯಲ್ ಇತ್ಯಾದಿ ಸೌಲಭ್ಯ
ಸೆಪ್ಟೆಂಬರ್ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು
- ಸೆ. 5, ಶುಕ್ರವಾರ: ಈದ್ ಮಿಲಾದ್
- ಸೆ. 7: ಭಾನುವಾರದ ರಜೆ
- ಸೆ. 13: ಎರಡನೇ ಶನಿವಾರದ ರಜೆ
- ಸೆ. 14: ಭಾನುವಾರದ ರಜೆ
- ಸೆ. 21: ಭಾನುವಾರದ ರಜೆ
- ಸೆ. 27: ನಾಲ್ಕನೇ ಶನಿವಾರದ ರಜೆ
- ಸೆ. 28: ಭಾನುವಾರದ ರಜೆ
ಬ್ಯಾಂಕುಗಳ ಕಚೇರಿಗಳಿಗೆ ರಜೆ ಇದ್ದರೂ ಆನ್ಲೈನ್ನಲ್ಲಿ ಹೆಚ್ಚಿನ ಬ್ಯಾಂಕಿಂಗ್ ವಹಿವಾಟುಗಳು ಚಾಲ್ತಿಯಲ್ಲಿರುತ್ತವೆ. ಕ್ಯಾಷ್ ವಿತ್ಡ್ರಾಯಲ್ಗೆ ಎಟಿಎಂಗಳು 24 ಗಂಟೆಯೂ ತೆರೆದಿರುತ್ತವೆ. ನೆಟ್ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ಗಳ ಸೇವೆ ನಿರಂತರವಾಗಿ ಲಭ್ಯ ಇರುತ್ತವೆ. ಡಿಮ್ಯಾಂಡ್ ಡ್ರಾಫ್ಟ್, ಕ್ಯಾಷ್ ಡೆಪಾಸಿಟ್, ಆರ್ಟಿಜಿಎಸ್, ಅರ್ಜಿ ಸಲ್ಲಿಕೆ ಇತ್ಯಾದಿ ಕಾರ್ಯಗಳಿಗೆ ಕಚೇರಿಗಳಿಗೆ ಹೋಗಬೇಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ