AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆಕ್‌ನ ಹಿಂಭಾಗದಲ್ಲಿ ಯಾಕೆ ಸಹಿ ಮಾಡ್ತಾರೆ? ಇದೇ ನೋಡಿ ಕಾರಣ

ಬ್ಯಾಂಕಿಂಗ್ ವ್ಯವಹಾರದಲ್ಲಿ ಚೆಕ್ ಬಳಕೆ ಸರ್ವೇ ಸಾಮಾನ್ಯ. ಕೆಲವರು ಚೆಕ್ ಮೂಲಕ ಹಣಕಾಸಿನ ವಹಿವಾಟನ್ನು ನಡೆಸುತ್ತಾರೆ. ಚೆಕ್ ಹಿಂಬದಿಯಲ್ಲಿ ಸಹಿ ಹಾಕುವುದನ್ನು ನೀವು ನೋಡಿರುತ್ತೀರಿ. ಹಣವನ್ನು ಪಡೆದುಕೊಳ್ಳುವ ಅಧಿಕಾರವನ್ನು ಖಚಿತಪಡಿಸಲು, ಬೇರರ್ ಚೆಕ್‌ಗಳ ಮೂಲಕ ಹಣ ಡ್ರಾ ಮಾಡುವಾಗ ಭದ್ರತೆಗಾಗಿ ಹಾಗೂ ಚೆಕ್ ಬೇರೆಯವರಿಗೆ ನೀಡುವಾಗ ಕಾನೂನುಬದ್ಧ ಒಪ್ಪಿಗೆಯನ್ನು ಈ ಸಹಿ ಸೂಚಿಸುತ್ತದೆ.

ಚೆಕ್‌ನ ಹಿಂಭಾಗದಲ್ಲಿ ಯಾಕೆ ಸಹಿ ಮಾಡ್ತಾರೆ? ಇದೇ ನೋಡಿ ಕಾರಣ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Aug 23, 2026 | 6:30 PM

Share

ಮುಖ್ಯಾಂಶಗಳು

  • ಇತ್ತೀಚೆಗಿನ ದಿನಗಳಲ್ಲಿ ನೆಟ್ ಬ್ಯಾಂಕಿಂಗ್, ಯುಪಿಐ ವಹಿವಾಟುಗಳೇ ಹೆಚ್ಚಾಗಿವೆ
  • ಆದರೆ ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಚೆಕ್ ವ್ಯವಹಾರ ಅತ್ಯಂತ ಸುರಕ್ಷಿತವಾಗಿದೆ
  • ವಹಿವಾಟು ಪೂರ್ಣಗೊಂಡಿದೆ ಎಂದು ತೋರಿಸಲು ಚೆಕ್‌ನ ಹಿಂಭಾಗಕ್ಕೆ ಸಹಿ ಹಾಕುತ್ತಾರೆ

ಇತ್ತೀಚೆಗಿನ ದಿನಗಳಲ್ಲಿ ನೆಟ್ ಬ್ಯಾಂಕಿಂಗ್, ಯುಪಿಐ ವಹಿವಾಟುಗಳೇ ಹೆಚ್ಚಾಗಿದೆ. ಹೀಗಾಗಿ ಬ್ಯಾಂಕಿಗೆ ಹೋಗಿ ವಹಿವಾಟು ನಡೆಸುವವರು ಕಡಿಮೆಯೇ. ದೊಡ್ಡ ಮೊತ್ತದ ವ್ಯವಹಾರಗಳಲ್ಲಿ ಚೆಕ್‌ ಬಳಸುತ್ತಾರೆ. ಈ ಚೆಕ್ ಡ್ರಾ (Cheque draw) ಅಥವಾ ಠೇವಣಿ ಮಾಡಲು ಹೋದಾಗ ಬ್ಯಾಂಕಿನಲ್ಲಿ ಚೆಕ್‌ನ ಹಿಂಭಾಗಕ್ಕೆ ಸಹಿ ಮಾಡಲು ಹೇಳುತ್ತಾರೆ. ಇದು ಯಾಕೆ ಎಂದು ಒಮ್ಮೆಯಾದ್ರು ನೀವು ಯೋಚನೆ ಮಾಡಿದ್ದೀರಾ. ಚೆಕ್ ಸ್ವೀಕರಿಸುವವರು ಅಥವಾ ಪಡೆಯುವವರು ತಾವು ಹಣ ಪಡೆದಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿ  ಹಾಗೂ ವಂಚನೆ ತಡೆಯಲು ಈ ರೀತಿ ಬ್ಯಾಂಕ್‌ ಸಿಬ್ಬಂದಿ ಸಹಿ ಹಾಕಿಸಿಕೊಳ್ಳುತ್ತಾರೆ.

ಚೆಕ್ ಹಿಂಬದಿ ಸಹಿ ಹಾಕುವುದು ಯಾಕೆ?

  • ಚೆಕ್ ದುರ್ಬಳಕೆ ತಡೆಯಲು ಮತ್ತು ಹಣ ಪಡೆದ ವ್ಯಕ್ತಿ ಯಾರೆಂಬುದನ್ನು ದಾಖಲಿಸಲು ಈ ಸಹಿ ಸಹಕಾರಿಯಾಗಿದೆ.
  • ವಹಿವಾಟು ಪೂರ್ಣಗೊಂಡಿದೆ ಎಂದು ತೋರಿಸಲು ಚೆಕ್‌ನ ಹಿಂಭಾಗಕ್ಕೆ ಸಹಿ ಹಾಕಲು ಹೇಳುತಾರೆ, ಇದು ಬ್ಯಾಂಕಿಗೆ ಅಧಿಕೃತ ಪುರಾವೆಯಾಗಿದೆ.
  • ನಗದು ಠೇವಣಿಗಳಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ವ್ಯಕ್ತಿ ಹಾಕಿದ ಈ ಸಹಿ ಆಧಾರವಾಗಿ ಕೆಲಸ ಮಾಡುತ್ತದೆ.
  • ಚೆಕ್‌ಗಳು ಕಳೆದುಹೋದರೆ ಇತರರು ಅವುಗಳನ್ನು ನಗದೀಕರಿಸುವುದನ್ನು ತಡೆಯುವ ಉದ್ದೇಶವು ಇದರಲ್ಲಿದೆ.

ಇದನ್ನೂ ಓದಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್, ಹೂಡಿಕೆದಾರರಿಗೆ ಉಪಯುಕ್ತವಾಗುವ ಕೆಲ ಪರಿಕರಗಳು

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಚೆಕ್ ವ್ಯವಹಾರ ಯಾಕೆ ಮುಖ್ಯ?

ಉತ್ತರ: ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಚೆಕ್ ವ್ಯವಹಾರ ಅತ್ಯಂತ ಸುರಕ್ಷಿತ ಹಾಗೂ ಕಾನೂನುಬದ್ಧ ದಾಖಲೆ ಇದಾಗಿದೆ.

ಪ್ರಶ್ನೆ: ಚೆಕ್ ಕಳೆದು ಹೋದರೆ ಏನು ಮಾಡಬೇಕು?

ಉತ್ತರ: ಚೆಕ್ ಕಳೆದುಹೋದರೆ ತಕ್ಷಣವೇ ನಿಮ್ಮ ಬ್ಯಾಂಕ್‌ಗೆ ತೆರಳಿ ಸ್ಟಾಪ್ ಪೇಮೆಂಟ್ ಅರ್ಜಿ ಸಲ್ಲಿಸಿ.

ಪ್ರಶ್ನೆ: ಚೆಕ್ ಹಿಂಬದಿ ಸಹಿ ಹಾಕುವುದು ಯಾಕೆ?

ಉತ್ತರ: ಹಣ ಪಡೆದುಕೊಳ್ಳುವ ವ್ಯಕ್ತಿಯು ತಾನು ಹಣವನ್ನು ಸ್ವೀಕರಿಸುತ್ತಿದ್ದೇನೆ ಅಥವಾ ಚೆಕ್ ನ್ನು ನಗದು ಮಾಡಲು ಒಪ್ಪಿಗೆ ನೀಡುತ್ತಿದ್ದೇನೆ ಎಂಬುದನ್ನು ಈ ಸಹಿ ಸೂಚಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್