Business Idea: ಕೇವಲ 3 ಲಕ್ಷ ಬಂಡವಾಳದಲ್ಲಿ ತಿಂಗಳಿಗೆ 70 ಸಾವಿರ ರೂ ವರಮಾನ ಕೊಡಬಲ್ಲ ಜೇನುಸಾಕಾಣಿಕೆ

|

Updated on: Sep 21, 2023 | 2:12 PM

Earn Handsome Money From Beekeeping: ಜೇನುತುಪ್ಪ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಾರುಕಟ್ಟೆಯಲ್ಲಿ ಕಲಬೆರಕೆಯ ಜೇನುತುಪ್ಪ ಅಧಿಕ ಇದೆ. ಆದ್ದರಿಂದ ಶುದ್ಧ ಜೇನುತುಪ್ಪಕ್ಕೆ ಬಹಳ ಬೇಡಿಕೆ ಇದೆ. ಹೀಗಾಗಿ, ಜೇನುತುಪ್ಪದ ವ್ಯವಹಾರ ಯಾವತ್ತೂ ಲಾಭ ತರುವಂಥದ್ದು. ನೀವು ಕೃಷಿಕರಾಗಿದ್ದೂ ಅದರ ಜೊತೆಗೆ ಜೇನು ಸಾಕಾಣಿಕೆ ಮಾಡಿದರಂತೂ ಸಖತ್ ಲಾಭ ಕಾಣಬಹುದು. ಜೇನುಸಾಕಾಣಿಕೆ ನಿಮಗೆ ಭರ್ಜರಿ ಮಾಸಿಕ ಆದಾಯ ತರುವುದಷ್ಟೇ ಅಲ್ಲ, ನಿಮ್ಮ ಕೃಷಿಗೂ ಮತ್ತು ಒಟ್ಟಾರೆ ಪರಿಸರಕ್ಕೂ ಬಹಳ ಲಾಭಕಾರಿ ಎನಿಸುತ್ತದೆ.

Business Idea: ಕೇವಲ 3 ಲಕ್ಷ ಬಂಡವಾಳದಲ್ಲಿ ತಿಂಗಳಿಗೆ 70 ಸಾವಿರ ರೂ ವರಮಾನ ಕೊಡಬಲ್ಲ ಜೇನುಸಾಕಾಣಿಕೆ
ಜೇನುಸಾಕಾಣಿಕೆ
Follow us on

ನೀವು ನಿಯಮಿತವಾಗಿ ಆದಾಯ ಗಳಿಸಲು ಹಲವು ಮಾರ್ಗಗಳಿವೆ. ಕಡಿಮೆ ಬಂಡವಾಳದಲ್ಲಿ ಸಾಕಷ್ಟು ಆದಾಯ ತರುವ ಹಲವು ಬಿಸಿನೆಸ್​ಗಳಿವೆ. ಕೃಷಿ ಕ್ಷೇತ್ರದಲ್ಲೂ ಇಂಥ ಅವಕಾಶ ಹಲವಿವೆ. ಅದರಲ್ಲಿ ಜೇನು ಸಾಕಾಣಿಕೆಯೂ (Beekeeping) ಒಂದು. ನೀವು ಕೃಷಿಕರಾಗಿದ್ದೂ ಅದರ ಜೊತೆಗೆ ಜೇನು ಸಾಕಾಣಿಕೆ ಮಾಡಿದರಂತೂ ಸಖತ್ ಲಾಭ ಕಾಣಬಹುದು. ಜೇನುಸಾಕಾಣಿಕೆ ನಿಮಗೆ ಭರ್ಜರಿ ಮಾಸಿಕ ಆದಾಯ ತರುವುದಷ್ಟೇ ಅಲ್ಲ, ನಿಮ್ಮ ಕೃಷಿಗೂ ಮತ್ತು ಒಟ್ಟಾರೆ ಪರಿಸರಕ್ಕೂ ಬಹಳ ಲಾಭಕಾರಿ ಎನಿಸುತ್ತದೆ.

ಜೇನುತುಪ್ಪ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಾರುಕಟ್ಟೆಯಲ್ಲಿ ಕಲಬೆರಕೆಯ ಜೇನುತುಪ್ಪ ಅಧಿಕ ಇದೆ. ಆದ್ದರಿಂದ ಶುದ್ಧ ಜೇನುತುಪ್ಪಕ್ಕೆ ಬಹಳ ಬೇಡಿಕೆ ಇದೆ. ಹೀಗಾಗಿ, ಜೇನುತುಪ್ಪದ ವ್ಯವಹಾರ ಯಾವತ್ತೂ ಲಾಭ ತರುವಂಥದ್ದು.

ಜೇನು ಸಾಕಾಣಿಕೆಗೆ ಒಣ ಪ್ರದೇಶ ಸೂಕ್ತ

ನೀವು ಮೊದಲಿಗೆ ಜೇನುಹುಳುವಿನ ವರ್ತನೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು. ನಿಮ್ಮ ಪ್ರದೇಶದಲ್ಲಿ ಸ್ಥಳೀಯ ಜೇನುಸಾಕಾಣಿಕೆದಾರರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ. ಸ್ಥಳೀಯ ಕೃಷಿ ಇಲಾಖೆಯಿಂದ ಜೇನುಸಾಕಾಣಿಕೆಯ ತರಬೇತಿ ಪಡೆಯಿರಿ. ನಿಮ್ಮ ಪ್ರದೇಶದಲ್ಲಿರುವ ವಿವಿಧ ಜಾತಿಯ ಜೇನುಹುಳಗಳ್ಯಾವುವು ವಿವರ ತಿಳಿಯಿರಿ.

ಇದನ್ನೂ ಓದಿ: ಪಿಪಿಎಫ್ ಹಣ ಹಿಂಪಡೆಯುವುದು ಹೇಗೆ? ನಿಯಮಗಳು, ದಾಖಲೆ, ಮಾನದಂಡಗಳೇನೇನು? ಇಲ್ಲಿದೆ ವಿವರ

ಜೇನುಸಾಕಾಣಿಕೆಗೆ ಒಣಸ್ಥಳ ಅಥವಾ ಶುಷ್ಕ ವಾತಾವರಣ (Dry Area) ಇರಬೇಕು. ಹೆಚ್ಚು ತೇವಾಂಶ (Humidity) ಇರಕೂಡದು. ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟು ಹೂಗಳಿರಬೇಕು.

ಜೇನುಹುಳಗಳಿಗೆ ಅಗತ್ಯಬಿದ್ದಾಗ ಶುದ್ಧ ನೀರು ಲಭ್ಯ ಇರಬೇಕು. ಜೇನುಗೂಡಿಗೆ ನೆರಳು ಬೀಳುವಂತಿರಬೇಕು. ಮರವಾದರೂ ಸರಿ ಅಥವಾ ಕಟ್ಟಡದ ಅಡಿಯಾದರೂ ಸರಿ, ಜೇನುಗೂಡಿಗೆ ನೆರಳಿರಬೇಕು. ಸ್ಮೋಕರ್, ಪರಾಗ ಬಲೆ, ರಾಣಿಜೇಣು ಸಾಕಾಣಿಕೆ ಕಿಟ್, ಜೇನುಹುಳು ವಿಷ ಸಂಗ್ರಾಹಕ, ಬ್ರಷ್ ಇತ್ಯಾದಿ ಪರಿಕರಗಳು ನಿಮ್ಮ ಬಳಿ ಇಟ್ಟುಕೊಂಡಿರಬೇಕು.

ಜೇನುಸಾಕಾಣಿಕೆ ನಿಧಾನ ಆರಂಭ ಇರಲಿ

ನೀವು ಒಮ್ಮೆಲೆ ಪೂರ್ಣಪ್ರಮಾಣದಲ್ಲಿ ಜೇನುಸಾಕಾಣಿಕೆ ಮಾಡುವ ಬದಲು ಅಲ್ಪಸಂಖ್ಯೆಯಿಂದ ಶುರು ಮಾಡಿ. ಮೊದಲಿಗೆ ಎರಡು ಜೇನುಗೂಡ ಮಾತ್ರ ಆರಂಭಿಸಿರಿ. ಇದು ಯಶಸ್ವಿಯಾಗಿ ನಡೆದ ಬಳಿಕ ಜೇನುಗೂಡುಗಳ ಸಂಖ್ಯೆ ಹೆಚ್ಚಿಸಬಹುದು.

ಇದನ್ನೂ ಓದಿ: World’s Best Hotel: ಇಟಲಿಯ ಪಸ್ಸಾಲಾಕ್ವ ವಿಶ್ವದ ಅತ್ಯುತ್ತಮ ಹೋಟೆಲ್; ಟಾಪ್ 50 ಪಟ್ಟಿಯಲ್ಲಿ ಭಾರತದ ಏಕೈಕ ಹೋಟೆಲ್

ನಿಮ್ಮ ಪ್ರದೇಶದಲ್ಲಿ ಹೂ ಋತು ಮುಗಿದ ಬಳಿಕ ಜೇನು ಸಂಗ್ರಹಿಸಬಹುದು. ಜೇನುಗೂಡಿನಿಂದ ಜೇನುತುಪ್ಪ ಮಾತ್ರವಲ್ಲ, ಜೇನು ವಿಷ, ಬೀಸ್ ವ್ಯಾಕ್ಸ್ ಇತ್ಯಾದಿ ಹಲವು ಉತ್ಪನ್ನಗಳನ್ನೂ ಪಡೆದು ಅವುಗಳಿಂದಲೂ ಲಾಭ ಮಾಡಬಹುದು.

ಒಂದು ಜೇನುಗೂ ಸ್ಥಾಪನೆಗೆ ಸುಮಾರು 3ರಿಂದ 4 ಸಾವಿರ ರೂ ಆಗುತ್ತದೆ. 100 ಜೇನುಗೂಡುಗಳಿಗೆ ಮೂರು ಲಕ್ಷ ರೂ ಖರ್ಚಾಗಬಹುದು. ಈ 100 ಜೇನುಗೂಡುಗಳಿದ್ದರೆ ನೀವು ತಿಂಗಳಿಗೆ 70,000 ರೂವರೆಗೆ ನಿರಂತರವಾಗಿ ಆದಾಯ ಗಳಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ