AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World’s Best Hotel: ಇಟಲಿಯ ಪಸ್ಸಾಲಾಕ್ವ ವಿಶ್ವದ ಅತ್ಯುತ್ತಮ ಹೋಟೆಲ್; ಟಾಪ್ 50 ಪಟ್ಟಿಯಲ್ಲಿ ಭಾರತದ ಏಕೈಕ ಹೋಟೆಲ್

Passalacqua worlds' best hotel: ವಿಲಿಯಮ್ ರೀಡ್ ಬಿಸಿನೆಸ್ ಮೀಡಿಯಾ ಸಂಸ್ಥೆ ನಿರ್ವಹಿಸುವ ವರ್ಲ್ಡ್ಸ್ 50 ಬೆಸ್ಟ್ ರೆಸ್ಟೋರೆಂಟ್ಸ್ ಲಿಸ್ಟ್ ಪ್ರಕಾರ ಇಟಲಿಯ ಪಸ್ಸಾಲಕ್ವ ವಿಶ್ವದ ಅತ್ಯುತ್ತಮ ಹೋಟೆಲ್ ಎಂಬ ಕೀರ್ತಿಗೆ ಬಾಜನವಾಗಿದೆ. ಯೂರೋಪ್ ಮತ್ತು ಏಷ್ಯಾದ ಹೋಟೆಲ್​ಗಳೇ ಹೆಚ್ಚು ಇರುವ ಬೆಸ್ಟ್ 50 ಹೋಟೆಲ್​ಗಳಲ್ಲಿ ಓಬೇರಾಯ್ ಅಮರ್​ವಿಲಾಸ್​ವೊಂದೇ ಏಕೈಕ ಭಾರತೀಯ ಹೋಟೆಲ್ ಆಗಿದೆ. ಈ ಹೋಟೆಲ್ ದೆಹಲಿಯ ಆಗ್ರಾದಲ್ಲಿದೆ.

World's Best Hotel: ಇಟಲಿಯ ಪಸ್ಸಾಲಾಕ್ವ ವಿಶ್ವದ ಅತ್ಯುತ್ತಮ ಹೋಟೆಲ್; ಟಾಪ್ 50 ಪಟ್ಟಿಯಲ್ಲಿ ಭಾರತದ ಏಕೈಕ ಹೋಟೆಲ್
ಪಸ್ಸಾಲಕ್ವಾ ಹೋಟೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 20, 2023 | 3:51 PM

Share

ಇಟಲಿಯ ಲೇಕ್ ಕೋಮೋದಲ್ಲಿರುವ ಪಸ್ಸಾಲಕ್ವಾ (Passalacqua) ವಿಶ್ವದ ಅತ್ಯುತ್ತಮ ಹೋಟೆಲ್ ಎಂಬ ಗೌರವಕ್ಕೆ ಪಾತ್ರವಾಗಿದೆ. ವರ್ಲ್ಡ್ಸ್ 50 ಬೆಸ್ಟ್ ರೆಸ್ಟಾರೆಂಟ್ಸ್ ಅಂಡ್ ಬಾರ್ಸ್ ಲಿಸ್ಟ್ಸ್ ಪಟ್ಟಿ ಪ್ರಕಟವಾಗಿದ್ದು ಇದರಲ್ಲಿ ಆಗ್ರಾದ ಓಬೇರಾಯ್ ಅಮರ್​ವಿಲಾಸ್ ಹೋಟೆಲ್ ಸ್ಥಾನ ಪಡೆದಿದೆ. ಟಾಪ್ 50 ಅತ್ಯುತ್ತಮ ಹೋಟೆಲ್​ಗಳಲ್ಲಿ ಅಮರ್​ವಿಲಾಸ್ 45ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಇದೊಂದೇ ಭಾರತೀಯ ಹೋಟೆಲ್ ಎಂಬುದು ಗಮನಾರ್ಹ.

ಪಟ್ಟಿಯಲ್ಲಿ ಯೂರೋಪ್​ನ ಹೋಟೆಲ್​ಗಳು ಹೆಚ್ಚು ಇವೆಯಾದರೂ ಏಷ್ಯಾದ 21 ಹೋಟೆಲ್​ಗಳೂ ಸ್ಥಾನ ಪಡೆದಿವೆ. ಟಾಪ್ 10ನಲ್ಲಿ ಏಷ್ಯ ಹೋಟೆಲ್​ಗಳೇ ಹೆಚ್ಚು. ಮಲೇಷ್ಯಾ, ಜಪಾನ್, ಸಿಂಗಾಪುರ ಮತ್ತು ಹಾಂಕಾಂಗ್​ನ ಹೋಟೆಲ್​ಗಳು ಹೆಚ್ಚು ಇವೆ. ಮಾರಿಷಸ್, ಶ್ರೀಲಂಕಾ ದೇಶಗಳ ಹೋಟೆಲ್​ಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ.

ಅತ್ಯುತ್ತಮ ಹೋಟೆಲ್​ಗಳ ಆಯ್ಕೆ ಹೇಗೆ?

ವರ್ಲ್ಡ್ಸ್ 50 ಬೆಸ್ಟ್ ರೆಸ್ಟೋರೆಂಟ್ಸ್ ಲಿಸ್ಟ್ ಅನ್ನು ಬ್ರಿಟನ್​ನ ವಿಲಿಯಮ್ ರೀಡ್ ಬಿಸಿನೆಸ್ ಮೀಡಿಯಾ ಸಂಸ್ಥೆ ನಿರ್ವಹಿಸುತ್ತದೆ. ವಿಶ್ವಾದ್ಯಂತ 580 ತೀರ್ಪುಗಾರರನ್ನು ಮೊದಲಿಗೆ ನಿಯೋಜಿಸಲಾಗುತ್ತದೆ. ಈ ತೀರ್ಪುಗಾರರು ಕಳೆದ 24 ತಿಂಗಳಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲ್​ಗಳನ್ನು ವಿಮರ್ಶಿಸಿ ವೋಟ್ ಚಲಾಯಿಸುತ್ತಾರೆ. ಈ ಮೂಲಕ ಅತ್ಯುತ್ತಮ ಹೋಟೆಲ್​ಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಹಣ್ಣಿನ ಜ್ಯೂಸ್​ನಲ್ಲಿ ಹಣ್ಣಿಲ್ಲ; ಇದು ಗ್ರಾಹಕರಿಗೆ ಮಾಡುವ ವಂಚನೆ; ಅಮೆರಿಕದಲ್ಲಿ ಸ್ಟಾರ್​ಬಕ್ಸ್ ವಿರುದ್ಧ ಕೇಸ್

ವಿಶ್ವದ 50 ಅತ್ಯುತ್ತಮ ಹೋಟೆಲ್​ಗಳು

  1. ಪಸ್ಸಾಲಾಕ್ವಾ, ಲೇಕ್ ಕೋಮೋ, ಇಟಲಿ
  2. ರೋಸ್​ವುಡ್, ಹಾಂಕಾಂಗ್
  3. ಫೋರ್ ಸೀಸನ್ಸ್ ಚಾವೋ ಪ್ರಯಾ ರಿವರ್, ಬ್ಯಾಂಕಾಕ್, ಮಲೇಷ್ಯಾ
  4. ದಿ ಅಪ್ಪರ್ ಹೌಸ್, ಹಾಂಕಾಂಗ್
  5. ಅಮನ್, ಟೋಕಿಯೋ
  6. ಲಾ ಮಮೌನಿಯಾ, ಮರ್ರಕೇಶ್, ಮೊರಾಕೋ
  7. ಸೊನೇವಾ ಫುಶಿ, ಮಾಲ್ಡೀವ್ಸ್
  8. ಒನ್ ಅಂಡ್ ಓನ್ಲಿ ಮಂದಾರಿನಾ, ಪ್ಯೂರ್ಟೋ ವಲ್ಲಾರ್ಟ, ಮೆಕ್ಸಿಕೋ
  9. ಫೋರ್ ಸೀಸನ್ಸ್ ಫಿಜೆಂಜ್, ಇಟಲಿ
  10. ಮಂದಾರಿನ್ ಓರಿಯಂಟಲ್, ಬ್ಯಾಂಕಾಕ್, ಮಲೇಷ್ಯಾ
  11. ಕ್ಯಾಪೆಲಾ ಬ್ಯಾಂಕಾಕ್, ಮಲೇಷ್ಯಾ
  12. ದಿ ಕ್ಯಾಲೈಲ್, ಬ್ರಿಸ್ಬೇನ್, ಆಸ್ಟ್ರೇಲಿಯಾ
  13. ಚಾಬಲ್ ಯುಕಟನ್, ಚೊಕೋಲಾ, ಮೆಕ್ಸಿಕೋ
  14. ಅಮನ್ ವಿನೈಸ್, ಇಟಲಿ
  15. ಸಂಗೀತ ಲಾಡ್ಜಸ್ ಕ್ರೂಗ್ ನ್ಯಾಷನಲ್ ಪಾರ್ಕ್, ಸೌತ್ ಆಫ್ರಿಕಾ
  16. ಕ್ಲಾರಿಡ್ಜಸ್, ಲಂಡನ್, ಬ್ರಿಟನ್
  17. ರಾಫಲ್ಸ್, ಸಿಂಗಾಪುರ್
  18. ನಿಹಿ ಸುಂಬಾ, ಇಂಡೋನೇಷ್ಯಾ
  19. ಹೋಟೆಲ್ ಎಸೆನ್ಷಿಯಾ, ಟುಲುಮ್, ಮೆಕ್ಸಿಕೋ
  20. ಲಾ ಸೈರನೂಸ್, ಪೊಸಿಟಾನೋ, ಇಟಲಿ
  21. ಬೋರ್ಗೋ ಎಗ್ನೇಜಿಯಾ, ಇಟಲಿ
  22. ದಿ ಕನಾಟ್, ಲಂಡನ್
  23. ರಾಯಲ್ ಮನ್ಸೂರ್, ಮರ್ರಕೇಶ್, ಮೊರಾಕೋ
  24. ಫೋರ್ ಸೀಸನ್ಸ್, ಮ್ಯಾಡ್ರಿಡ್, ಸ್ಪೇನ್
  25. ಅಮನ್, ನ್ಯೂಯಾರ್ಕ್, ಅಮೆರಿಕ
  26. ಮೇಬೋರ್ನ್ ರಿವಿಯೆರಾ, ಫ್ರಾನ್ಸ್
  27. ರೋಸ್​ವುಡ್, ಸಾವೋ ಪಾವೋಲೊ, ಬ್ರೆಜಿಲ್
  28. ಕ್ಯಾಪೆಲಾ, ಸಿಂಗಾಪುರ
  29. ಲೀ ಬ್ರಿಸ್ಟಲ್, ಪ್ಯಾರಿಸ್
  30. ಪಾರ್ಕ್ ಹ್ಯಾಟ್, ಕ್ಯೋಟೋ, ಜಪಾನ್
  31. ಲಾ ರಿಸರ್ವ್, ಪ್ಯಾರಿಸ್
  32. ಗ್ಲೆನ್​ಈಗಲ್ಸ್, ಔಷ್ಟರಾರ್ಡರ್, ಸ್ಕಾಟ್ಲೆಂಡ್
  33. ಹೋಟೆಲ್ ಡು ಕ್ಯಾಪ್ ಈಡನ್ ರಾಕ್, ಆಂಟಿಬೆಸ್, ಫ್ರಾನ್ಸ್
  34. ಶೆವಲ್ ಬ್ಲಾಂಕ್, ಪ್ಯಾರಿಸ್, ಫ್ರಾನ್ಸ್
  35. ಫೋರ್ ಸೀಸನ್ಸ್ ಆಸ್ಟಿರ್ ಪ್ಯಾಲೇಸ್, ಅಥೆನ್ಸ್, ಗ್ರೀಸ್
  36. ಸೊನೇವಾ ಜಾನಿ, ಮಾಲ್ಡೀವ್ಸ್
  37. ದಿ ನ್ಯೂವ್ಟ್, ಬ್ರುಟನ್, ಬ್ರಿಟನ್
  38. ಅಮಂಗಾಲ್ಲ, ಶ್ರೀಲಂಕಾ
  39. ಹೋಶಿನೋಯ, ಟೋಕಿಯೋ
  40. ಡೇಸಾ ಪೊಟಾಟೊ ಹೆಡ್, ಬಾಲಿ, ಇಂಡೋನೇಷ್ಯಾ
  41. ಈಡನ್ ರಾಕ್, ಸೇಂಟ್ ಬಾರ್ತ್
  42. ದಿ ಸಿಯಾಮ್, ಬ್ಯಾಂಕಾಕ್
  43. ಬದ್ರತ್ಸ್ ಪ್ಯಾಲೇಸ್, ಸೇಂಟ್ ಮೋರಿಟ್ಜ್, ಸ್ವಿಟ್ಜರ್​ಲ್ಯಾಂಡ್
  44. ಅಟ್ಲಾಂಟಿಸ್ ದಿ ರಾಯಲ್, ದುಬೈ
  45. ಒಬೇರಾಯ್ ಅಮರವಿಲಾಸ್, ಆಗ್ರಾ, ಭಾರತ
  46. ನೊಮಾಡ್ ಲಂಡನ್, ಬ್ರಿಟನ್
  47. ದಿ ಸವೋಯ್, ಲಂಡನ್, ಬ್ರಿಟನ್
  48. ಈಕ್ವಿನಾಕ್ಸ್, ನ್ಯೂಯಾರ್ಕ್, ಅಮೆರಿಕ
  49. ಸಿಕ್ಸ್ ಸೆನ್ಸಸ್, ಇಬಿಜಾ
  50. ಹೋಟೆಲ್ ಡೀ ಕ್ರಿಲ್ಲೋನ್, ಪ್ಯಾರಿಸ್, ಫ್ರಾನ್ಸ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Wed, 20 September 23