AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಕಿಸಾನ್ ರಿನ್ ಪೋರ್ಟಲ್​ಗೆ ಚಾಲನೆ; ಏನಿದು ರೈತರ ಹೊಸ ಪ್ಲಾಟ್​ಫಾರ್ಮ್?

Kisan Rin Portal Launched: ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಅಡಿಯಲ್ಲಿ ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಅದಕ್ಕೆ ಸಹಾಯವಾಗುವಂತೆ ಕಿಸಾನ್ ರಿನ್ ಪೋರ್ಟಲ್ ಅನ್ನು ರೂಪಿಸಲಾಗಿದೆ. ಈ ಪ್ಲಾಟ್​ಫಾರ್ಮ್​ನಲ್ಲಿ ರೈತರ ಡಾಟಾ, ಸಾಲ ವಿತರಣೆ ವಿವರ, ಬಡ್ಡಿದರ ಕಡಿತ ಇತ್ಯಾದಿ ಮಾಹಿತಿಯನ್ನು ಕಾಣಬಹುದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇಂದು ಸೆಪ್ಟೆಂಬರ್ 19ರಂದು ಈ ಹೊಸ ಪೋರ್ಟಲ್​ಗೆ ಚಾಲನೆ ನೀಡಿದ್ದಾರೆ.

ಪಿಎಂ ಕಿಸಾನ್ ರಿನ್ ಪೋರ್ಟಲ್​ಗೆ ಚಾಲನೆ; ಏನಿದು ರೈತರ ಹೊಸ ಪ್ಲಾಟ್​ಫಾರ್ಮ್?
ಕಿಸಾನ್ ರಿನ್ ಪೋರ್ಟಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2023 | 6:57 PM

Share

ನವದೆಹಲಿ, ಸೆಪ್ಟೆಂಬರ್ 19: ರೈತರಿಗೆ ಸಬ್ಸಿಡಿ ದರದಲ್ಲಿ ಸಾಲ ಕೊಡಲು ಅನುಕೂಲ ಮಾಡುವ ಕಿಸಾನ್ ರಿನ್ ಪೋರ್ಟಲ್ (Kisan Rin Portal) ಅನ್ನು ಆರಂಭಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇಂದು ಸೆಪ್ಟೆಂಬರ್ 19ರಂದು ಈ ಹೊಸ ಪೋರ್ಟಲ್​ಗೆ ಚಾಲನೆ ನೀಡಿದ್ದಾರೆ. ಹಾಗೆಯೇ, ಮನೆ ಮನೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ತಲುಪಿಸುವ ಘರ್ ಘರ್ ಕೆಸಿಸಿ ಅಭಿಯಾನವನ್ನೂ (Ghar Ghar KCC Campaign) ಇಂದು ಶುರು ಮಾಡಲಾಗಿದೆ. ಹಾಗೆಯೇ, ಹವಾಮಾನ ಮಾಹಿತಿ ಜಾಲ ದತ್ತಾಂಶ ವ್ಯವಸ್ಥೆ (WINDS- Weather Information Network Data System) ಪೋರ್ಟಲ್​ನ ಕೈಪಿಡಿಯನ್ನೂ ಅನಾವಣಗೊಳಿಸಲಾಗಿದೆ.

ಏನಿದು ಕಿಸಾನ್ ರಿನ್ ಪೋರ್ಟಲ್?

ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಅಡಿಯಲ್ಲಿ ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಅದಕ್ಕೆ ಸಹಾಯವಾಗುವಂತೆ ಕಿಸಾನ್ ರಿನ್ ಪೋರ್ಟಲ್ ಅನ್ನು ರೂಪಿಸಲಾಗಿದೆ. ಈ ಪ್ಲಾಟ್​ಫಾರ್ಮ್​ನಲ್ಲಿ ರೈತರ ಡಾಟಾ, ಸಾಲ ವಿತರಣೆ ವಿವರ, ಬಡ್ಡಿದರ ಕಡಿತ ಇತ್ಯಾದಿ ಮಾಹಿತಿಯನ್ನು ಕಾಣಬಹುದು. ಅದರ ವಿಳಾಸ ಇಲ್ಲಿದೆ: fasalrin.gov.in

ಇದನ್ನೂ ಓದಿ: Jio Airfiber Plans: ಬೆಂಗಳೂರು ಸೇರಿ 8 ನಗರಗಳಲ್ಲಿ ಜಿಯೋ ಏರ್​ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್​ಗಳ ಬೆಲೆ

ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್?

ಇದು ರೈತರಿಗೆ ಹಣಕಾಸು ನೆರವು ಒದಗಿಸಲೆಂದು ಆರಂಭಿಸಲಾಗಿರುವ ಯೋಜನೆಯಾಗಿದೆ. ಕೃಷಿ ಹಾಗು ಸಂಬಂಧಿತ ಕಾರ್ಯಗಳಿಗೆ ರೈತರು ಅಗತ್ಯ ಹಣಕಾಸು ಸಹಾಯ ಪಡೆಯಬಹುದು. 3 ಲಕ್ಷ ರೂವರೆಗೂ ಸಾಲ ಸಿಗುತ್ತದೆ. ವರ್ಷಕ್ಕೆ ಶೇ. 2ರಿಂದ 4ರವರೆಗೆ ಮಾತ್ರವೇ ಬಡ್ಡಿದರ ಇರುತ್ತದೆ.

ಕೆಸಿಸಿ ಸ್ಕೀಮ್ ಹೊಂದಿರುವವರಿಗೆ ಇನ್ಷೂರೆನ್ಸ್ ಕವರೇಜ್ ಕೂಡ ಇರುತ್ತದೆ. ಅರ್ಹ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಜೊತೆಗೆ ಸೇವಿಂಗ್ಸ್ ಅಕೌಂಟ್, ಸ್ಮಾರ್ಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಕೂಡ ಸಿಗುತ್ತದೆ. ಈ ಸ್ಕೀಮ್​ನಲ್ಲಿ ಇನ್ನೂ ಹಲವು ವಿಶೇಷತೆಗಳಿವೆ.

ಸರ್ಕಾರ ಇತ್ತೀಚೆಗೆ ಬಹಿರಂಗಪಡಿಸಿದ ಮಾಹಿತಿ ಪ್ರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಅನ್ನು 7.35 ಕೋಟಿ ರೈತರು ಪಡೆದಿದ್ದಾರೆ. 2023ರ ಏಪ್ರಿಲ್​ನಿಂದ ಆಗಸ್ಟ್​ವರೆಗಿನ ಅವಧಿಯಲ್ಲಿ ಈ ರೈತರಿಗೆ ಕಡಿಮೆ ಬಡ್ಡಿದರದಲ್ಲಿ 6,573.50 ಕೋಟಿ ರೂ ಸಾಲ ವಿತರಿಸಲಾಗಿದೆ.

ಇದನ್ನೂ ಓದಿ: ಹಣ್ಣಿನ ಜ್ಯೂಸ್​ನಲ್ಲಿ ಹಣ್ಣಿಲ್ಲ; ಇದು ಗ್ರಾಹಕರಿಗೆ ಮಾಡುವ ವಂಚನೆ; ಅಮೆರಿಕದಲ್ಲಿ ಸ್ಟಾರ್​ಬಕ್ಸ್ ವಿರುದ್ಧ ಕೇಸ್

97 ವಾಣಿಜ್ಯ ಬ್ಯಾಂಕ್ ಸೇರಿದಂತೆ ಒಟ್ಟು 667 ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್​ಗೆ ಲಭ್ಯ ಇವೆ.

ಇನ್ನು, ಇವತ್ತು ವಿಂಡ್ಸ್ ಪೋರ್ಟಲ್​ನ ಕೈಪಿಡಿಯೂ ಬಿಡುಗಡೆ ಆಗಿದೆ. ಈ ವಿಂಡ್ಸ್​ನ ಪೋರ್ಟಲ್ ಅನ್ನು ಜುಲೈನಲ್ಲೇ ಬಿಡುಗಡೆ ಮಾಡಲಾಗಿತ್ತು. ಈಗ ಆ ಪೋರ್ಟಲ್​ನ ಮ್ಯಾನುಯಲ್ ರಿಲೀಸ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ